ವೇಗದ ರೈಲುಗಳಿಗೆ ಹೆಚ್ಚಾಯ್ತು ದನಗಳ ಕಾಟ: ಹಳಿ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ನಿರ್ಧಾರ, ಪ್ರತಿಭಟನೆ ಭೀತಿ

ರೈಲ್ವೆ ಹಳಿಗಳ ಬದಿಯಲ್ಲಿ ಬೇಲಿ ಹಾಕಿದರೆ ಜನರಿಗೆ ಅನಾನುಕೂಲವೇ ಹೆಚ್ಚಾಗಲಿದೆ. ಹಲವು ಗ್ರಾಮ ಮತ್ತು ನಗರಗಳ ಮಧ್ಯದಲ್ಲಿ ರೈಲ್ವೆ ಹಳಿ ಹಾದುಹೋಗಿದೆ. ರೈತರು ಹೊಲಗಳಿಗೆ ಹಳಿಗಳನ್ನು ದಾಟಿಯೇ ಹೋಗಬೇಕಾದ ಪರಿಸ್ಥಿತಿಯಿದೆ.

ವೇಗದ ರೈಲುಗಳಿಗೆ ಹೆಚ್ಚಾಯ್ತು ದನಗಳ ಕಾಟ: ಹಳಿ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ನಿರ್ಧಾರ, ಪ್ರತಿಭಟನೆ ಭೀತಿ
ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 17, 2022 | 7:40 AM

ದೆಹಲಿ: ರೈಲುಗಳಿಗೆ ಡಿಕ್ಕಿ ಹೊಡೆದು ಜಾನುವಾರುಗಳು ಸಾವನ್ನಪ್ಪುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಳಿಗಳ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಕಳೆದ ಏಪ್ರಿಲ್ 1ರಿಂದ ಈವರೆಗೆ 2,650 ದನಗಳು ರೈಲುಗಳಿಗೆ ಡಿಕ್ಕಿ ಹೊಡೆದು ಮೃತಪಟ್ಟಿವೆ. ಈ ಪೈಕಿ ಪ್ರಯಾಗ್​ರಾಜ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉತ್ತರ-ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿಯೇ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವುದು ವಿಶೇಷ. ಈ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರುಗಳು ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ವಿಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ದನಗಳು ರೈಲು ಡಿಕ್ಕಿಯಾಗಿ ಸಾವನ್ನಪ್ಪಿವೆ.

ಮುಂದಿನ ಐದಾರು ತಿಂಗಳುಗಳಲ್ಲಿ ರೈಲ್ವೆ ಹಳಿಗಳ ಸುಮಾರು 1,000 ಕಿಮೀ ಉದ್ದಕ್ಕೂ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಘೋಷಿಸಿದ್ದರು. ಅಕ್ಟೋಬರ್ 1ರಿಂದ 9ನೇ ತಾರೀಖಿನ ಅವಧಿಯಲ್ಲಿ 200 ರೈಲುಗಳ ಸಂಚಾರಕ್ಕೆ ಹಳಿಗಳ ಮೇಲೆ ಬಂದ ದನಗಳಿಂದ ತೊಂದರೆಯಾಗಿತ್ತು. ಇದರಲ್ಲಿ ಇತ್ತೀಚೆಗಷ್ಟೇ ಸಂಚಾರ ಆರಂಭಿಸಿರುವ ‘ವಂದೇ ಭಾರತ್’ ಸೆಮಿ ಹೈಸ್ಪೀಡ್ ಎಕ್ಸ್​ಪ್ರೆಸ್​ ಸಹ ಸೇರಿದೆ. ಈ ವರ್ಷ ಜನವರಿಯಿಂದ ಈವರೆಗೆ ಸುಮಾರು 4,000 ರೈಲುಗಳಿಗೆ ಜಾನುವಾರುಗಳಿಂದ ತೊಂದರೆಯಾಗಿದೆ.

ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಾಂಪೌಂಡ್ ನಿರ್ಮಿಸಲಾಗುವುದು. ಇದಕ್ಕಾಗಿ ಎರಡು ವಿನ್ಯಾಸಗಳನ್ನು ಪರಿಶೀಲಿಸಿ, ಒಂದು ಮಾದರಿಯನ್ನು ಅಂತಿಮಗೊಳಿಸಲಾಗಿದೆ. ಮುಂದಿನ ಐದಾರು ತಿಂಗಳುಗಳಲ್ಲಿ 1,000 ಕಿಮೀ ಹಳಿಗುಂಟ ಬದಿಯಲ್ಲಿ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗುವುದು ಎಂದು ರೈಲ್ವೆ ಇಲಾಖೆ ಸಚಿವರು ತಿಳಿಸಿದ್ದಾರೆ. ಆದರೆ ಕಾಂಪೌಂಡ್ ನಿರ್ಮಾಣದಿಂದ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಬಗ್ಗೆ ರೈಲ್ವೆ ಇಲಾಖೆಯಲ್ಲಿಯೇ ಅಪನಂಬಿಕೆಯೂ ಇದೆ. ‘ಇಂಥ ಗೋಡೆಗಳಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ. ಬದಲಿಗೆ ಸುತ್ತಮುತ್ತಲ ಗ್ರಾಮಸ್ಥರ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 2021-22ರಲ್ಲಿ ದೇಶಾದ್ಯಂತ ಸುಮಾರು 26,000 ರಾಸುಗಳು ರೈಲುಗಳಿಗೆ ಸಿಲುಕಿ ಸಾವನ್ನಪ್ಪಿರುವುದನ್ನು ರೈಲ್ವೆ ಇಲಾಖೆ ದಾಖಲಿಸಿದೆ.

ಗಂಟೆಗೆ 130 ಕಿಮೀಗೂ ಹೆಚ್ಚು ವೇಗದಲ್ಲಿ ಸಂಚರಿಸುವ ರೈಲುಗಳು ಇರುವ ಮಾರ್ಗದಲ್ಲಿ ಹಳಿಗಳ ಬದಿಯಲ್ಲಿ ಬೇಲಿ ನಿರ್ಮಿಸುವುದು ಕಡ್ಡಾಯ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ದೆಹಲಿ-ಹೌರಾ ಮತ್ತು ದೆಹಲಿ-ಮುಂಬೈ ಮಾರ್ಗಗಳಲ್ಲಿ ಗಂಟೆಗೆ 160 ಕಿಮೀ ವೇಗದಲ್ಲಿ ರೈಲುಗಳು ಸಂಚರಿಸುವ ರೀತಿಯಲ್ಲಿ ಹಳಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಮಾರ್ಗದಲ್ಲಿ ಹಳಿಗಳ ಪಕ್ಕ ಬೇಲಿ ಹಾಕುವ ಪ್ರಸ್ತಾವವೂ ಇದೆ. ಬಹುತೇಕ ಗ್ರಾಮಗಳಲ್ಲಿ ರೈಲ್ವೆ ಹಳಿಗಳು ಊರಿನ ಪಕ್ಕದಲ್ಲಿ, ಕೆಲ ಪಟ್ಟಣಗಳಲ್ಲಿ ಊರಿನ ಮಧ್ಯೆ ಹಾದುಹೋಗಿದೆ. ಇಂಥ ಸ್ಥಳಗಳಲ್ಲಿ ರೈಲು ಹಳಿಗಳನ್ನು ನಡೆದು ದಾಟುವುದು ಸಾಮಾನ್ಯ ಸಂಗತಿ. ಕಬ್ಬಿಣದ ಬೇಲಿ ಅಳವಡಿಸಿದರೆ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಗ್ರಾಮಸ್ಥರು ಬೇಲಿಗಳನ್ನು ಕತ್ತರಿಸಿ ಪ್ರತಿಭಟಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಯಾವುದಾದರೂ ದನ ಈ ಬೇಲಿಯೊಳಗೆ ನುಸುಳಿದರೆ ಅದಕ್ಕೆ ಹೊರಗೆ ಹೋಗಲು ಸುಲಭ ಅವಕಾಶವೇ ಇಲ್ಲದಂತೆ ಆಗುತ್ತದೆ ಎಂಬ ಆತಂಕವನ್ನೂ ರೈಲ್ವೆ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ದೆಹಲಿ-ಆಗ್ರಾ ಮಾರ್ಗದಲ್ಲಿ ಈ ಮೊದಲೂ ರೈಲ್ವೆ ಇಲಾಖೆ ಕಾಂಕ್ರೀಟ್ ಸ್ಲೀಪರ್​ ಬಾರ್​ಗಳನ್ನು ಬಳಸಿ ಬೇಲಿ ನಿರ್ಮಿಸಲು ಯತ್ನಿಸಿತ್ತು. ಆದರೆ ಅದರಿಂದ ಹೆಚ್ಚೇನೂ ಪ್ರಯೋಜನವಾಗಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ