Indian Railways: ಸೀಟ್ ಬುಕಿಂಗ್ಗೆ ಹೊಸ ಕೋಡ್ಗಳನ್ನು ಪರಿಚಯಿಸಿದ ರೈಲ್ವೇ ಇಲಾಖೆ; ಪೂರ್ಣ ಪಟ್ಟಿ ಇಲ್ಲಿದೆ
Indian Railways: ಪ್ರಯಾಣಿಕರು ರೈಲ್ವೇ ಸೀಟ್ ಬುಕಿಂಗ್ ಮಾಡುವಾಗ ಕ್ಯಾಪಿಟಲ್ ಅಕ್ಷರಗಳ ಬುಕಿಂಗ್ ಕೋಡ್ ನೀಡಲಾಗುತ್ತದೆ. ಇದನ್ನು ಪ್ರಯಾಣಿಕರು ಟಿಕೆಟ್ ಬುಕಿಂಗ್ ಸಂದರ್ಭ ಬಳಸಿಕೊಳ್ಳುತ್ತಾರೆ. ಈ ಕೋಡ್ ಭಾರತೀಯ ರೈಲ್ವೇಯ ವಿವಿಧ ರೈಲು ಬೋಗಿಗಳನ್ನು ಪ್ರತಿನಿಧಿಸುತ್ತದೆ.

ಭಾರತೀಯ ರೈಲ್ವೇ ಇಲಾಖೆ ಹಲವು ಹೊಸತನ್ನು ಅಳವಡಿಸಿಕೊಳ್ಳುತ್ತಿದೆ. ಅದು ರೈಲು ನಿಲ್ದಾಣಗಳಲ್ಲಿ ಆಗಿರಲಿ, ರೈಲುಗಳಲ್ಲಿ, ಅಥವಾ ಐಆರ್ಸಿಟಿಸಿ ಅಭಿವೃದ್ಧಿಯ ಬುಕಿಂಗ್ ಪ್ಲಾಟ್ಫಾರಂಗಳಲ್ಲಿ ಆಗಿರಬಹುದು ಹೀಗೆ ಎಲ್ಲಾ ಹಂತದಲ್ಲೂ ಪುನರ್ನಿರ್ಮಾಣ ಕಾರ್ಯ ಮಾಡಲು ತೊಡಗಿದೆ. ಮತ್ತು ಈ ಬಾರಿ, ರೈಲ್ವೇ ಇಲಾಖೆ ಬುಕಿಂಗ್ ಕೋಡ್ಗಳನ್ನು ಬದಲಾಯಿಸಿದೆ. ಹೊಸ ಬೋಗಿಗಳ ಪರಿಚಯದೊಂದಿಗೆ ಈ ವ್ಯವಸ್ಥೆಯನ್ನು ಹೊಸತಾಗಿ ಪರಿಚಯಿಸಲಾಗಿದೆ. ಜನರಿಂದ ಬಹು ಮೆಚ್ಚುಗೆ ಪಡೆದ ವಿಸ್ಟಾಡೋಮ್ ಬಳಿಕ ಐಆರ್ಸಿಟಿಸಿ ಬುಕಿಂಗ್ ಕೋಡ್ಗಳನ್ನು ಬದಲಾಯಿಸಿದೆ.
ಪ್ರಯಾಣಿಕರು ರೈಲ್ವೇ ಸೀಟ್ ಬುಕಿಂಗ್ ಮಾಡುವಾಗ ಕ್ಯಾಪಿಟಲ್ ಅಕ್ಷರಗಳ ಬುಕಿಂಗ್ ಕೋಡ್ ನೀಡಲಾಗುತ್ತದೆ. ಇದನ್ನು ಪ್ರಯಾಣಿಕರು ಟಿಕೆಟ್ ಬುಕಿಂಗ್ ಸಂದರ್ಭ ಬಳಸಿಕೊಳ್ಳುತ್ತಾರೆ. ಈ ಕೋಡ್ ಭಾರತೀಯ ರೈಲ್ವೇಯ ವಿವಿಧ ರೈಲು ಬೋಗಿಗಳನ್ನು ಪ್ರತಿನಿಧಿಸುತ್ತದೆ.
ಭಾರತೀಯ ರೈಲ್ವೇ ಇಲಾಖೆ ಭಾರತದ ವಿವಿಧ ರೈಲ್ವೇ ಮಾರ್ಗಗಳಲ್ಲಿ ವಿಸ್ಟಾಡೋಮ್ ಕೋಚ್ ಅಳವಡಿಸಲು ಚಿಂತನೆ ನಡೆಸಿದೆ. ಈ ಯೋಜನೆಯು ದೇಶದ ವಿವಿಧ ಕಡೆಗಳಲ್ಲಿ ಟೂರಿಸಂ ವಿಭಾಗವನ್ನು ಬಲಗೊಳಿಸಲು ಉದ್ದೇಶಿಸಲಾಗಿದೆ. ಅದರ ಜೊತೆಗೆ, ರೈಲ್ವೇ ಇಲಾಖೆ ಎಸಿ 3 ಟೈರ್ ಎಕನಮಿ ಕೋಚ್ ಆರಂಭಿಸಲು ಯೋಜಿಸಿದೆ. ಈ ಎಲ್ಲಾ ಕಾರಣಗಳಿಂದ ಬುಕಿಂಗ್ ಕೋಡ್ಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ಚಿಂತಿಸಿದೆ.
ಹೊಸ ಬುಕಿಂಗ್ ಕೋಡ್ಗಳು ಇಲ್ಲಿದೆ
- ವಿಸ್ಟಾಡೋಮ್ ನಾನ್ ಎಸಿ- V.S. (Coach Code: D.V.)
- ವಿಸ್ಟಾಡೋನ್ ಎಸಿ- E.V. (Coach Code: E.V.)
- ಸ್ಲೀಪರ್- S.L. (Coach Code: S)
- ಎಸಿ ಚೇರ್ ಕಾರ್- C.C. (Coach Code: C)
- ಥರ್ಡ್ ಎಸಿ- 3A (Coach Code: B)
- ಎಸಿ 3 ಟೈರ್ ಎಕನಮಿ- 3E (Coach Code: M)
- ಸೆಕೆಂಡ್ ಎಸಿ- 2A (Coach Code: A)
- ಗರೀಬ್ರತ್ ಎಸಿ 3 ಟೈರ್- 3A (Coach Code: G)
- ಗರೀಬ್ರತ್ ಚೇರ್ ಕಾರ್- CC (Coach Code: J)
- ಫರ್ಸ್ಟ್ ಎಸಿ- 1A (Coach Code: H)
- ಎಕ್ಸಿಕ್ಯೂಟಿವ್ ಕ್ಲಾಸ್- E.C. (Coach Code: E)
- ಅನುಭೂತಿ ಕ್ಲಾಸ್- E.A. (Coach Code: K)
- ಫರ್ಸ್ಟ್ ಕ್ಲಾಸ್- F.C. (Coach Code: F)
ಈ ಎಲ್ಲಾ ಹೊಸ ಕೋಡ್ಗಳು ವಿವಿಧ ರೈಲ್ವೇ ಝೋನ್ಗಳ ಡಾಟಾಬೇಸ್ಗೆ ಬಂದಿವೆ. ಹಾಗೂ ಈಗ ಕೆಲಸ ಮಾಡುತ್ತಿವೆ. ಈ ಮೊದಲು ಜೂನ್ನಲ್ಲಿ, ರೈಲ್ವೇ ಇಲಾಖೆ ಟಿಕೆಟ್ ಬುಕಿಂಗ್ ಕ್ಯಾನ್ಸಲೇಷನ್ನಲ್ಲಿ ಹೊಸ ರಿಲೀಫ್ ನೀಡಿತ್ತು. ಹಾಗೂ ಟಿಕೆಟ್ನ ಹಣ ಮರುಪಾವತಿಗೆ ಎರಡು ಮೂರು ದಿನಗಳ ಕಾಲ ಕಾಯುವುದರ ಬದಲಾಗಿ, ಕೂಡಲೇ ಮರುಪಾವತಿ ಆಗುವ ಸೇವೆ ಆರಂಭವಾಗಿತ್ತು.
ಇದನ್ನೂ ಓದಿ: ಆಗಸ್ಟ್ 15ರಿಂದ ಮುಂಬೈ ಲೋಕಲ್ ರೈಲು ಸಂಚಾರ ಪುನಾರಂಭ; ಲಸಿಕೆ ಪಡೆದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
Bengaluru Metro: ರಾತ್ರಿ ಕರ್ಫ್ಯೂ ಹಿನ್ನೆಲೆ; ಮೆಟ್ರೋ ರೈಲು ಕಾರ್ಯನಿರ್ವಹಿಸುವ ಅವಧಿಯಲ್ಲಿ ಬದಲಾವಣೆ
(Indian Railways introduce New Codes for Seat Booking Railway Ticket Booking here is Full List)
Published On - 8:16 pm, Mon, 9 August 21




