Terrorist Encounter: ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಉಗ್ರರ ಎನ್​ಕೌಂಟರ್, ಹುತಾತ್ಮರಾದ ಇಬ್ಬರು ಭಾರತೀಯ ಯೋಧರು

| Updated By: ಆಯೇಷಾ ಬಾನು

Updated on: Jul 09, 2021 | 1:50 PM

ಜಮ್ಮು ಕಾಶ್ಮೀರದ ರಾಜೌರಿ ಬಳಿ ಇರುವ ಗಡಿ ನಿಯಂತ್ರಣ ರೇಖೆ ಸಮೀಪ ಗುರುವಾರ ಬೆಳಗ್ಗೆಯಿಂದ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ರಾಜೌರಿ ಜಿಲ್ಲೆಯ ಸುಂದರಬನಿ ವಲಯದಲ್ಲಿ ಪಾಕ್ ಉಗ್ರರನ್ನು ಸುತ್ತುವರೆದ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆಯ ವೇಳೆಗೆ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

Terrorist Encounter: ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಉಗ್ರರ ಎನ್​ಕೌಂಟರ್, ಹುತಾತ್ಮರಾದ ಇಬ್ಬರು ಭಾರತೀಯ ಯೋಧರು
ಭಾರತೀಯಸೇನೆ (ಸಂಗ್ರಹ ಚಿತ್ರ)
Follow us on

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಬಳಿ ಇಬ್ಬರು ಪಾಕ್ ಉಗ್ರರನ್ನು ಎನ್​ಕೌಂಟರ್ ಮಾಡಲಾಗಿದೆ. ನಿನ್ನೆ ಬೆಳಗ್ಗೆಯಿಂದ ನಡೆದ ಈ ಗುಂಡಿನ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಕಳೆದೊಂದು ತಿಂಗಳೊಳಗೆ ಈ ಭಾಗದಲ್ಲಿ ನಡೆದ ಎರಡನೇ ಎನ್​ಕೌಂಟರ್ ಇದಾಗಿದೆ.

ಜಮ್ಮು ಕಾಶ್ಮೀರದ ರಾಜೌರಿ ಬಳಿ ಇರುವ ಗಡಿ ನಿಯಂತ್ರಣ ರೇಖೆ ಸಮೀಪ ಗುರುವಾರ ಬೆಳಗ್ಗೆಯಿಂದ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ರಾಜೌರಿ ಜಿಲ್ಲೆಯ ಸುಂದರಬನಿ ವಲಯದಲ್ಲಿ ಪಾಕ್ ಉಗ್ರರನ್ನು ಸುತ್ತುವರೆದ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆಯ ವೇಳೆಗೆ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ಭಾರತದ ಇಬ್ಬರು ಯೋಧರು ಕೂಡ ಹುತಾತ್ಮರಾಗಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಲವು ದಿನಗಳಿಂದ ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಳೆ ಬಳಿ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನ ಮೂಲದ ಲಷ್ಕರ್-ಇ ತೊಯ್ಬಾ ಉಗ್ರ ಸಂಘಟನೆ ಕಾಶ್ಮೀರ ಕಣಿವೆಯ ಬಳಿ ಭಾರತೀಯ ವಾಯುಪಡೆಯ ನೆಲೆ ಮೇಲೆ ಡ್ರೋನ್ ದಾಳಿ ನಡೆಸಿತ್ತು. ನಿನ್ನೆ ರಾಜೌರಿ ಜಿಲ್ಲೆಯ ಸುಂದರಬಾನಿ ವಲಯದಲ್ಲಿ ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಣಾರತೀಯ ಯೋಧರು ಆ ಪ್ರದೇಶವನ್ನು ಸುತ್ತುವರೆದು, ಎನ್​ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಸದೆ ಬಡಿಯಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆ (LoC) ಬಳಿ ಇತ್ತೀಚೆಗೆ ನಡೆದ ಎರಡನೇ ಎನ್​ಕೌಂಟರ್ ಇದಾಗಿದೆ. ಗುರುವಾರ ಉಗ್ರರಿದ್ದ ಜಾಗವನ್ನು ಸುತ್ತುವರೆದ ಭಾರತೀಯ ಯೋಧರ ಮೇಲೆ ಉಗ್ರರು ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಕೂಡ ಗುಂಡು ಹಾರಿಸಿದ್ದರು. ಈ ರೀತಿ ನಿನ್ನೆ ಸಂಜೆಯವರೆಗೂ ಗುಂಡಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಇಬ್ಬರು ಪಾಕ್ ಉಗ್ರರನ್ನು ಭಾರತೀಯ ಸೈನಿಕರು ಹತ್ಯೆಗೈದಿದ್ದಾರೆ. ಈ ಘಟನೆ ನಡೆದ ಸ್ಥಳದಿಂದ 2 ಎಕೆ-47 ರೈಫಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೈನಿಕರಾದ ಎನ್​ಬಿ ಸಬ್ ಶ್ರೀಜಿತ್ ಎಂ, ಮುರಪ್ರೋಲು ಜಸ್ವಂತ್ ರೆಡ್ಡಿ ಹುತಾತ್ಮರಾಗಿದ್ದಾರೆ. ಇದಲ್ಲದೆ, ಪುಲ್ವಾಮಾ, ಕುಲ್ಗಾಂನಲ್ಲಿಯೂ ಉಗ್ರರ ಮೇಲೆ ಎನ್​ಕೌಂಟರ್ ನಡೆಸಲಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಗುರುವಾರ ಎಲ್​ಇಟಿಯ ಮೂವರು ಉಗ್ರರು ಸೇರಿ ಒಟ್ಟು 6 ಭಯೋತ್ಪಾದಕರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ.

ಹತರಾದ ಉಗ್ರರು ಮಸೂದ್ ಅಜರ್ ಸಹೋದರನ ಸಂಪರ್ಕದಲ್ಲಿದ್ದರು ! Slain terrorists were in touch with Masood Azhar’s brother

ಪುಲ್ವಾಮಾನಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಯೋಧ ಕಾಶೀರಾಯ ಹುತಾತ್ಮ

(indian-troops-killed-two-terrorists-at-rajouri-jammu-kashmir-today)