ಹತರಾದ ಉಗ್ರರು ಮಸೂದ್ ಅಜರ್ ಸಹೋದರನ ಸಂಪರ್ಕದಲ್ಲಿದ್ದರು ! Slain terrorists were in touch with Masood Azhar’s brother

ಭಾರತೀಯ ಸೇನಾಪಡೆಯ ಜವಾನರು ಗುರುವಾರದಂದು ಪಾಕಿಸ್ತಾನ–ಆಶ್ರಿತ ನಾಲ್ವರು ಉಗ್ರರನ್ನು ಜಮ್ಮು ಜಿಲ್ಲ್ಲೆಯ ನಗ್ರೊಟದಲ್ಲಿರುವ ಬಾನ್ ಟೋಲ್ ಪ್ಲಾಜಾದ ಬಳಿ ಕೊಂದಿದ್ದು ಗಡಿ ಭಾಗದಲ್ಲಿ ಸದಾ ನಡೆಯುವ ಎನ್​ಕೌಂಟರ್​ನಂತೆ ಭಾಸವಾದರೂ ಗುಂಡಿಗೆ ಬಲಿಯಾದ ಜೈಷ್–ಎ– ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ಬೇರೆಯದೇ ಆದ ಉದ್ದೇಶದಿಂದ ಭಾರತದ ಗಡಿಯೊಳಗೆ ನುಸುಳಿದ್ದರು ಎನ್ನುವುದು ಬೆಳಕಿದೆ ಬಂದಿದೆ. ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಮತ್ತು ಉಗ್ರರು ಬಳಸಿದ ಮೊಬೈಲ್ ಫೋನ್​ಗಳ ಮೂಲಕ ರಾಷ್ಟ್ರೀಯ ಭದ್ರತಾ ದಳ ಕಲೆ ಹಾಕಿರುವ ಮಾಹಿತಿ ಪ್ರಕಾರ ಉಗ್ರರು ಗುಪ್ತಚರ–ಆಧಾರಿತ […]

ಹತರಾದ ಉಗ್ರರು ಮಸೂದ್ ಅಜರ್ ಸಹೋದರನ ಸಂಪರ್ಕದಲ್ಲಿದ್ದರು ! Slain terrorists were in touch with Masood Azhar's brother
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 21, 2020 | 4:00 PM

ಭಾರತೀಯ ಸೇನಾಪಡೆಯ ಜವಾನರು ಗುರುವಾರದಂದು ಪಾಕಿಸ್ತಾನಆಶ್ರಿತ ನಾಲ್ವರು ಉಗ್ರರನ್ನು ಜಮ್ಮು ಜಿಲ್ಲ್ಲೆಯ ನಗ್ರೊಟದಲ್ಲಿರುವ ಬಾನ್ ಟೋಲ್ ಪ್ಲಾಜಾದ ಬಳಿ ಕೊಂದಿದ್ದು ಗಡಿ ಭಾಗದಲ್ಲಿ ಸದಾ ನಡೆಯುವ ಎನ್​ಕೌಂಟರ್​ನಂತೆ ಭಾಸವಾದರೂ ಗುಂಡಿಗೆ ಬಲಿಯಾದ ಜೈಷ್ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ಬೇರೆಯದೇ ಆದ ಉದ್ದೇಶದಿಂದ ಭಾರತದ ಗಡಿಯೊಳಗೆ ನುಸುಳಿದ್ದರು ಎನ್ನುವುದು ಬೆಳಕಿದೆ ಬಂದಿದೆ.

ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಮತ್ತು ಉಗ್ರರು ಬಳಸಿದ ಮೊಬೈಲ್ ಫೋನ್​ಗಳ ಮೂಲಕ ರಾಷ್ಟ್ರೀಯ ಭದ್ರತಾ ದಳ ಕಲೆ ಹಾಕಿರುವ ಮಾಹಿತಿ ಪ್ರಕಾರ ಉಗ್ರರು ಗುಪ್ತಚರಆಧಾರಿತ 26/11 ನಂಥ ಒಂದು ದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ಭಾರತದೊಳಗೆ ನುಗ್ಗಿದ್ದರೆನ್ನುವುದು ಗೊತ್ತಾಗಿದೆ. ಉಗ್ರರು ಸಾಂಬಾ ಸೆಕ್ಟರ್​ನಿಂದ ಭಾರತದ ಗಡಿಯೊಳಗೆ ಪ್ರವೇಶಿಸುವದಕ್ಕಿಂತ ಮೊದಲೇ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಜೈಷ್ಮೊಹಮ್ಮದ್ ಸಂಘಟನೆಯ ಕಾರ್ಯಾಚರಣೆ ಕಮಾಂಡೊಗಳಾದ ಮುಫ್ರಿ ರೌಫ್ ಅಸ್ಗರ್ ಮತ್ತು ಕಾರಿ ಜರಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಎನ್​ಎಸ್​ಎಗೆ ದೊರೆತಿದೆ. ಈ ಅಸ್ಗರ್ ಜೆಇಎಮ್ ಚೀಫ್ ಮತ್ತು ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಮಸೂದ್ ಅಜರ್​ನ ಕಿರಿಯ ಸಹೋದರ.

ಕಣಿವೆ ಪ್ರದೇಶದಲ್ಲಿ ಬೃಹತ್ ಪ್ರಮಾಣದ ವಿಧ್ವಂಸಕ ಕ್ರತ್ಯ ನಡೆಸುವುದೇ ಅವರ ಉದ್ದೇಶವಾಗಿತ್ತು ಎಂದು ಶುಕ್ರವಾರದಂದು ಘಟನೆ ಬಗ್ಗೆ ಎನ್​ಎಸ್​ಎ ಮುಖ್ಯಸ್ಥ ಅಜಿತ್ ದೋವಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿವರಣೆ ನೀಡುವಾಗ ತಿಳಿಸಿದ್ದಾರೆ. ಸದರಿ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾಹ, ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ ಕೂಡ ಹಾಜರಿದ್ದರು.

ಈ ಸಭೆ ನಂತರ ಪ್ರಧಾನ ಮಂತ್ರಿ ಮೋದಿಯವರು, ಟ್ಟ್ವೀಟ್ ಮೂಲಕ ಪಾಕಿಸ್ತಾನದ ಉದ್ದೇಶವನ್ನು ಬಹಿರಂಗಗೊಳಿಸಿದರು.

‘‘ಪಾಕಿಸ್ತಾನದ ಆಶ್ರಯದಲ್ಲಿರುವ ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಜವಾನರು ಹೊಡೆದುರುಳಿಸಿ ಅವರಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಈ ಕಾರ್ಯಾಚರಣೆಯ ಹಿಂದಿನ ಉದ್ದೇಶವೇನಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸಾಮಾನ್ಯ ಜನಜೀವನ ಮತ್ತು ಕಾಶ್ಮೀರದಲ್ಲಿ ನಡೆಯಬೇಕಿರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಹಾಳು ಮಾಡಬೇಕೆನ್ನುವ ಉದ್ದೇಶವನ್ನು ಪಾಕಿಸ್ತಾನ ಹೊಂದಿತ್ತು. ಆದರೆ ನಮ್ಮ ಪರಾಕ್ರಮಶಾಲಿ ಯೋಧರು ಉಗ್ರರ ಯೋಜನೆಯನ್ನು ಮತ್ತೊಮ್ಮೆ ವಿಫಲಗೊಳಿಸದ್ದಾರೆ, ಅವರಿಗೆ ನಾನು ಅಭಿನಂದನೆಗಳನ್ನು ತಿಳಿಸಿತ್ತೇನೆ,’’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಎನ್​ಎಸ್​ಎ ಮತ್ತೊಂದು ಸಂಗತಿಯನ್ನು ಪತ್ತೆ ಮಾಡಿದೆ. ಭಾರತೀಯ ವಾಯುಸೇನೆಯ ವಿಮಾನಗಳು ಫೆಬ್ರುವರಿ 26, 2019 ರಂದು, ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳನ್ನು ನಾಶ ಮಾಡಿದ ನಂತರ, ಆ ಪ್ರದೇಶವನ್ನು ಪಾಕಿಸ್ತಾನಿ ಏಜೆನ್ಸಿಗಳು ಜೈಷ್ ಸಂಘಟನೆಗೆ ಹಸ್ತಾಂತರಿಸಲು ನಿರ್ಧರಿಸಿವೆಯಂತೆ.

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್