
ಶ್ರೀನಗರ, (ಮೇ 09): ಕತ್ತಲು ಆಗುತ್ತಿದ್ದಂತೆಯೇ ಪಾಕಿಸ್ತಾನ (Pakistan) ಮತ್ತೆ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರ, ರಾಜಸ್ಥಾನ (rajasthan), ಪಂಜಾಬ್ ಗಡಿ ಪ್ರದೇಶಗಳ ಮೇಲೆ ಡ್ರೋನ್ ದಾಳಿ (drone Attack) ನಡೆಸಿದೆ. ಇಂದು (ಮೇ 09) ಬೆಳಗ್ಗೆಯಿಂದ ಯಾವುದೇ ಡ್ರೋನ್ ದಾಳಿಗಳು ಆಗಿರಲಿಲ್ಲ. ಬದಲಿಗೆ ಪಾಕ್ ಆಗಾಗ ಬಾರ್ಡರ್ನಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತ ಸಹ ತಿರುಗೇಟು ನೀಡಿತ್ತು. ಆದ್ರೆ, ಇದೀಗ ರಾತ್ರಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಪಾಕ್ ದಾಳಿ ನಡೆಸುತ್ತಿದ್ದಂತೆಯೇ ಜಮ್ಮು -ಕಾಶ್ಮೀರದಲ್ಲಿ ಸೈರನ್ ಮೊಳಗಿದೆ. ಕೂಡಲೇ ಅಲರ್ಟ್ ಆದ ಭಾರತೀಯ ಸೇನೆ ಪಾಕ್ನ ಡ್ರೋನ್ಗಳನ್ನು ಆಗಸದಲ್ಲೇ ಹೊಡೆದುರುಳಿಸಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇನ್ನು ಪಾಕಿಸ್ತಾನದ ನಡೆಸಿದ ಡ್ರೋನ್ಗಳಿಗೆ ಭಾರತ ವಾಯು ಸೇನೆ ಆಕಾಶದಲ್ಲಿ ಹೊಡೆದು ಹಾಕಿರುವ ಶಬ್ಧ ಭಯಾನಕವಾಗಿದೆ. ಸಂಪೂರ್ಣ ಕತ್ತಲು ಆವರಿಸಿದ್ದರಿಂದ ಏನು ಕಾಣುತ್ತಿಲ್ಲ. ಕೇವಲ ಡಮ್ ಡಮಾರ್ ಎನ್ನುವ ಭಾರಿ ಶಬ್ಧವೊಮದೇ ಕೇಳಿಸುತ್ತಿದೆ. ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲೂ ಡ್ರೋನ್ ದಾಳಿಗೆ ಯತ್ನಿಸಿದೆ. ಅವಂತಿಪೋರಾದ ಏರ್‌ಬೇಸ್ ಗುರಿಯಾಗಿಸಿ ಹಾರಿಸಿದ್ದ ಡ್ರೋನ್ ಅನ್ನು ಧ್ವಂಸ ಮಾಡಲಾಗಿದೆ. ಹೀಗೆ ರಾಜಸ್ಥಾನ, ಪಂಜಾಬ್ ಸೇರಿದಂತೆ ಗಡಿ ರಾಜ್ಯಗಳಲ್ಲಿ ಪಾಕ್ ಡ್ರೋನ್ ದಾಳಿಯನ್ನು ಭಾರತ ಸೇನೆ ವಿಫಲಗೊಳಿಸಿದೆ.
ಜಮ್ಮುವಿನಲ್ಲಿ ಮಿಸೈಲ್ ಅಟ್ಯಾಕ್‌ಗೆ ಪಾಕಿಸ್ತಾನ ಯತ್ನಿಸಿದ್ದು, ಭಾರತ ಏರ್ ಡಿಫೈನ್ ಸಿಸ್ಟಮ್ ಪಾಕ್ ಮಿಸೈಲ್ ಅನ್ನು ಹೊಡೆದುರುಳಿಸಿದೆ. ನಿನ್ನೆಯಂತೆ ರಾಜಸ್ಥಾನದ ಜೈಸಲ್ಮೇರ್ ಮೇಲೂ ಪಾಕಿಸ್ತಾನ ದಾಳಿಗೆ ಯತ್ನಿಸಿದೆ ಅನ್ನೋ ವರದಿಯಾಗಿದೆ. ರಾಜಸ್ಥಾನದ ಜೈಸಲ್ಮೇರ್, ಜಮ್ಮುವಿನ ಪಠಾಣ್ ಕೋಟ್, ಪಂಜಾಬ್‌ನ ಫಿರೋಜ್ ಪುರ್‌ನಲ್ಲೂ ಬ್ಲಾಕ್ ಔಟ್ ಘೋಷಣೆ ಆಗಿದೆ.
#WATCH | Punjab | A complete blackout has been enforced in Firozpur, and sirens and explosions can be heard.
(Visuals deferred by an unspecified time) pic.twitter.com/VqsKb4clxX
— ANI (@ANI) May 9, 2025
ಮುಂಜಾಗ್ರತಾ ಕ್ರಮವಾಗಿ ಜಮ್ಮುವಿನಲ್ಲಿ ಎಲ್ಲಾ ರೈಲುಗಳ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಆದೇಶದವರೆಗೂ ಎಲ್ಲಾ ರೈಲುಗಳ ಸಂಚಾರ ಸಿಲ್ಲಿಸುವಂತೆ ಸಂದೇಶ ರವಾನಿಸಲಾಗಿದೆ. ಅಲ್ಲದೇ ರೈಲುಗಳಲ್ಲಿರುವ ಪ್ರಯಾಣಿಕರು ತಮ್ಮ ಮೊಬೈಲ್ ಲೈಟ್ ಬಳಸದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಶ್ರೀನಗರದಲ್ಲಿ ಬ್ಲ್ಯಾಕೌಟ್ ಮಾಡಲಾಗಿದೆ.
ಇನ್ನು ಮತ್ತೆ ಪಾಕಿಸ್ತಾನ ದಾಳಿ ಆರಂಭಿಸಿದ್ದರಿಂದ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಯಾರು ಮನೆಯಿಂದ ಆಚೆ ಬರಬೇಡಿ ಎಂದಿದ್ದಾರೆ. ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ. ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಒಮರ್ ಅಬ್ದುಲ್ಲಾ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
#WATCH | J&K | Heavy artillery fire and explosions can be heard in Samba
(Visuals deferred by an unspecified time) pic.twitter.com/TlNoDwDK7S
— ANI (@ANI) May 9, 2025
ಇನ್ನು ರಾಜಸ್ಥಾನದ ಬಾರ್ಮರ್ ನಗರದಲ್ಲಿ ಹೈ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಪೂರ್ಣ ಬ್ಲ್ಯಾಕೌಟ್ ಅನ್ನು ಪಾಲಿಸಿ. ಯಾವುದೇ ರೀತಿಯ ಬೆಳಕನ್ನು ಬಳಸಬೇಡಿ. ವಾಹನದೊಂದಿಗೆ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಪಂಜಾಬ್‌ನ ಫಿರೋಜ್‌ಪುರ್‌ನಲ್ಲಿ ಮನೆಗೆ ಪಾಕಿಸ್ತಾನದ ಡ್ರೋನ್ ಅಪ್ಪಳಿಸಿದೆ. ಪರಿಣಾಮ ಮನೆಯಲ್ಲಿದ್ದ ಕುಟುಂಬದವರಿಗೆ ಗಾಯಗಳಾಗಿದ್ದು,ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.