Vikram S Rocket: ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ವಿಕ್ರಮ್-ಎಸ್ ಉಡಾವಣೆ
ಮೂರು ಪೇಲೋಡ್‌ಗಳನ್ನು ಹೊತ್ತ ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ವಿಕ್ರಮ್-ಎಸ್ ತೆಲಂಗಾಣ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಿದೆ. ಇಸ್ರೋದಿಂದ ವಿಕ್ರಮ್-ಎಸ್ ರಾಕೆಟ್ ಉಡಾವಣೆ ಮಾಡಲಾಗಿದೆ.
ಶ್ರೀಹರಿಕೋಟಾ: ಮೂರು ಪೇಲೋಡ್‌ಗಳನ್ನು ಹೊತ್ತ ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ವಿಕ್ರಮ್-ಎಸ್ ತೆಲಂಗಾಣ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಿದೆ. ಇಸ್ರೋದಿಂದ ವಿಕ್ರಮ್-ಎಸ್ ರಾಕೆಟ್ ಉಡಾವಣೆ ಮಾಡಲಾಗಿದೆ. ಮೊದಲ ಖಾಸಗಿ ರಾಕೆಟ್ ಇಸ್ರೋ ಉಡಾಯಣೆ ಮಾಡಿದೆ. ಇದು ತೆಲಂಗಾಣದ ಟೆಕ್ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ ರಾಕೆಟ್.
ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಸಂಸ್ಥೆ ಅಭಿವೃದ್ಧಿಪಡಿಸಿದ ರಾಕೆಟ್ ಉಡಾವಣೆ ಮಾಡಿದೆ. 3 ಚಿಕ್ಕ ಉಪಗ್ರಹ ಅಂತರಿಕ್ಷಕ್ಕೆ ಕೊಂಡೊಯ್ಯಲಿರುವ ವಿಕ್ರಮ್ ರಾಕೆಟ್. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ಇದನ್ನು ಓದಿ: Vikram S: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಯುಗ ಆರಂಭ, ಮೊದಲ ಬಾರಿಗೆ ಖಾಸಗಿ ರಾಕೆಟ್ ಉಡಾವಣೆ
6 ಮೀಟರ್ ಎತ್ತರದ ಉಡಾವಣಾ ರಾಕೆಟ್ ವಿಕ್ರಮ್-ಎಸ್ ದೇಶದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇಡಲಾಗಿದೆ. ಬೆಳಿಗ್ಗೆ 11.30 ಕ್ಕೆ ಈ ರಾಕೆಟ್ ಉಡಾವಣೆಯಾಗಿದೆ. ಇದನ್ನು ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ.
India's first ever private rocket Vikram-S, launched from Satish Dhawan Space Centre Sriharikota in Andhra Pradesh#VikramS @isro@SkyrootA pic.twitter.com/EsdJvBGZVK
— DD News (@DDNewslive) November 18, 2022
ರಾಕೆಟ್‌ನಲ್ಲಿ ಪಿಗ್ಗಿಬ್ಯಾಕ್ ಸವಾರಿ ಮಾಡುತ್ತಿರುವ ಮೂರು ಉಪಗ್ರಹಗಳು ಚೆನ್ನೈ ಮೂಲದ ಸ್ಟಾರ್ಟ್‌ಅಪ್ ಸ್ಪೇಸ್‌ಕಿಡ್ಜ್, ಆಂಧ್ರಪ್ರದೇಶ ಮೂಲದ ಎನ್-ಸ್ಪೇಸ್‌ಟೆಕ್ ಮತ್ತು ಅರ್ಮೇನಿಯನ್ ಬಾಜೂಮ್‌ಕ್ಯೂ ಸ್ಪೇಸ್ ರಿಸರ್ಚ್ ಲ್ಯಾಬ್‌ನಿಂದ ಬಂದಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Fri, 18 November 22