AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikram S: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಯುಗ ಆರಂಭ, ಮೊದಲ ಬಾರಿಗೆ ಖಾಸಗಿ ರಾಕೆಟ್ ಉಡಾವಣೆ

ಭಾರತದ ಮೊದಲ ಖಾಸಗಿ ವಲಯದ ರಾಕೆಟ್ (Rocket) ವಿಕ್ರಮ್-ಎಸ್ (Vikram S)ಅನ್ನು ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆ ಮಾಡಲಿದೆ.

Vikram S: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಯುಗ ಆರಂಭ, ಮೊದಲ ಬಾರಿಗೆ ಖಾಸಗಿ ರಾಕೆಟ್ ಉಡಾವಣೆ
Vikram S
TV9 Web
| Updated By: ನಯನಾ ರಾಜೀವ್|

Updated on: Nov 09, 2022 | 11:35 AM

Share

ಭಾರತದ ಮೊದಲ ಖಾಸಗಿ ವಲಯದ ರಾಕೆಟ್ (Rocket) ವಿಕ್ರಮ್-ಎಸ್ (Vikram S)ಅನ್ನು ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆ ಮಾಡಲಿದೆ. ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ‘ಸ್ಕೈರೂಟ್’ ಏರೋಸ್ಪೇಸ್ ಮಂಗಳವಾರ ಈ ಘೋಷಣೆ ಮಾಡಿದೆ. ಸ್ಕೈರೋಟ್ ಏರೋಸ್ಪೇಸ್‌ನ ಈ ಮೊದಲ ಕಾರ್ಯಾಚರಣೆಗೆ ಸರಂಭ್ ಎಂದು ಹೆಸರಿಸಲಾಗಿದೆ.

ಇದು ಮೂರು ಗ್ರಾಹಕ ಪೇಲೋಡ್‌ಗಳನ್ನು ಹೊಂದಿರುತ್ತದೆ. ಇದನ್ನು ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತಿದೆ. ಸ್ಕೈರೂಟ್ ಏರೋಸ್ಪೇಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನಾ ಮಾತನಾಡಿ, ಅಧಿಕಾರಿಗಳು ನವೆಂಬರ್ 12 ರಿಂದ ನವೆಂಬರ್ 16 ರವರೆಗೆ ಉಡಾವಣೆಗೆ ತಾತ್ಕಾಲಿಕ ಅವಧಿಯನ್ನು ನೀಡಿದ್ದಾರೆ.

ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೊನೆಯ ದಿನಾಂಕವನ್ನು ನಿರ್ಧರಿಸಲಾಗುತ್ತದೆ.

ರಾಕೆಟ್ ಉಡಾವಣೆ ಮಾಡಿದ ದೇಶದ ಮೊದಲ ಖಾಸಗಿ ಕಂಪನಿ ಈ ಮಿಷನ್‌ನೊಂದಿಗೆ ಸ್ಕೈರೂಟ್ ಏರೋಸ್ಪೇಸ್ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಿದ ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಕಂಪನಿಯಾಗಬಹುದು.

ಈ ರೀತಿಯಾಗಿ, 2020 ರಲ್ಲಿ ಖಾಸಗಿ ವಲಯದ ಜನರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದ ನಂತರ, ಹೊಸ ಆರಂಭ ಇದಾಗಿದೆ.

ಸ್ಕೈರೋಟ್ ಏರೋಸ್ಪೇಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಭರತ್ ದಕಾ ಮಾತಣಾಡಿ, “ವಿಕ್ರಮ್-ಎಸ್ ರಾಕೆಟ್ ಏಕ-ಹಂತದ ಸಬ್‌ಆರ್ಬಿಟಲ್ ಲಾಂಚ್ ವೆಹಿಕಲ್ ಆಗಿದೆ. ಇದು ಮೂರು ಗ್ರಾಹಕ ಪೇಲೋಡ್‌ಗಳನ್ನು ಒಯ್ಯುತ್ತದೆ.

ಮತ್ತಷ್ಟು ಓದಿ: Chandrayaan-3: 2023ರ ಜೂನ್​ನಲ್ಲಿ ಚಂದ್ರಯಾನ-3 ಉಡಾವಣೆ: ಇಸ್ರೋ

ಇದು ವಿಕ್ರಮ್ ಸರಣಿಯ ಬಾಹ್ಯಾಕಾಶ ನೌಕೆಯಲ್ಲಿ ಹಲವಾರು ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ.

ವಿಕ್ರಮ್ ಸಾರಾಭಾಯ್ ಸ್ಕೈರೋಟ್ ರಾಕೆಟ್ ಹೆಸರಿನ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಮತ್ತು ಪ್ರಸಿದ್ಧ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇಡಲಾಗಿದೆ. ಹೈದರಾಬಾದ್ ಮೂಲದ ಕಂಪನಿಯು ವಾಣಿಜ್ಯ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅತ್ಯಾಧುನಿಕ ಬಾಹ್ಯಾಕಾಶ ಉಡಾವಣಾ ವಾಹನಗಳನ್ನು ತಯಾರಿಸುತ್ತದೆ.

ಅಮೆರಿಕ, ಇಂಡೋನೇಷ್ಯಾ ಮತ್ತು ಭಾರತದ ವಿದ್ಯಾರ್ಥಿಗಳ ಉಪಗ್ರಹ ಈ ರಾಕೆಟ್ ಅಮೆರಿಕ, ಇಂಡೋನೇಷ್ಯಾ ಮತ್ತು ಭಾರತದ ವಿದ್ಯಾರ್ಥಿಗಳ 2.5 ಕೆಜಿ ಉಪಗ್ರಹವನ್ನು ಹೊತ್ತೊಯ್ಯಲಿದೆ. ಏರೋಸ್ಪೇಸ್ ಸ್ಟಾರ್ಟಪ್ ಸ್ಪೇಸ್ ಕಿಡ್ಜ್ ಇಂಡಿಯಾ ಇದಕ್ಕಾಗಿ ಸ್ಕೈರೂಟ್ ಏರೋಸ್ಪೇಸ್ ಜೊತೆ ಮಾತುಕತೆ ನಡೆಸುತ್ತಿದೆ.

ವಿಕ್ರಮ್-ಎಸ್ ರಾಕೆಟ್‌ನಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವನ್ನು ನಾವು ಹಾರಿಸುತ್ತೇವೆ. ಉಪಗ್ರಹವನ್ನು ಒಯ್ಯಲು ಸ್ಕೈರೂಟ್ ಏರೋಸ್ಪೇಸ್‌ನೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಒಟ್ಟಿಗೆ ತಯಾರಿಸಲಾಗಿದೆ ಎಂದು ಸ್ಪೇಸ್ ಕಿಡ್ಸ್ ಇಂಡಿಯಾದ ಸಿಇಒ ಕೆಸನ್ ಹೇಳಿದ್ದಾರೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ