ಒಂದೇ ರನ್​ವೇನಲ್ಲಿ ಮುಖಾಮುಖಿಯಾದ ಏರ್​ ಇಂಡಿಯಾ, ಇಂಡಿಗೋ ವಿಮಾನ

ಎರಡು ವಿಮಾನಗಳು ಒಂದೇ ರನ್​ವೇನಲ್ಲಿ ಮುಖಾಮುಖಿಯಾಗಿದ್ದು ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಒಂದೇ ರನ್​ವೇನಲ್ಲಿ ಮುಖಾಮುಖಿಯಾದ ಏರ್​ ಇಂಡಿಯಾ, ಇಂಡಿಗೋ ವಿಮಾನ
ಏರ್​ಪೋರ್ಟ್​
Follow us
|

Updated on: Jun 09, 2024 | 12:49 PM

ಒಂದೇ ರನ್​ವೇನಲ್ಲಿ ಒಂದೇ ಸಮಯದಲ್ಲಿ ಎರಡು ವಿಮಾನಗಳು ಮುಖಾಮುಖಿಯಾಗಿದ್ದು, ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಅಪಘಾತ ತಪ್ಪಿದೆ. ಇಂಡಿಗೋ(IndiGo) ಹಾಗೂ ಏರ್​ ಇಂಡಿಯಾ(Air India) ವಿಮಾನಗಳು ಒಂದೇ ಟೈಂನಲ್ಲಿ ಒಂದೇ ರನ್​ವೇ ಪ್ರವೇಶಿಸಿದ್ದು, ಸ್ವಲ್ಪದರಲ್ಲೇ ಘರ್ಷಣೆ ತಪ್ಪಿದೆ.

ಮಾಹಿತಿ ಪ್ರಕಾರ ಇಂಡಿಗೋ ವಿಮಾನವು ವಿಮಾನ ನಿಲ್ದಾಣದ ರನ್​ವೇನಲ್ಲಿ ಇಳಿಯುತ್ತಿತ್ತು, ಆದರೆ ಇಂಡಿಯಾ ವಿಮಾನ ಟೇಕ್​ ಆಫ್​ ಆಗಲು ಅದೇ ರನ್​ವೇನಲ್ಲಿ ಓಡುತ್ತಿತ್ತು. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ, ಇಂಡಿಗೋ ಫ್ಲೈಟ್ 5053 ರನ್​ವೇ 27ರಲ್ಲಿ ಇಳಿಯಬೇಕಿತ್ತು, ಆದರೆ ಏರ್​ ಇಂಡಿಯಾ ವಿಮಾನವು 657 ಆ ಸಮಯದಲ್ಲಿ ಟೇಕ್ ಆಫ್ ಆಗಿತ್ತು. ಏರ್ ಇಂಡಿಯಾ ವಿಮಾನ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೇಕ್ ಆಫ್​ ಆಗಬೇಕಿತ್ತು.

ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏರ್ ಇಂಡಿಯಾ ವಿಮಾನವು ರನ್​ ವೇನಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಇಂಡಿಗೋ ವಿಮಾನವು ಹಿಂದಿನಿಂದ ಲ್ಯಾಂಡ್​ ಆಗುತ್ತಿರುವುದು ದೃಶ್ಯಾವಳಿಯಲ್ಲಿ ಗೋಚರಿಸುತ್ತದೆ. ಆದರೆ, ಇಂಡಿಗೋ ವಿಮಾನವು ಏರ್​ ಇಂಡಿಯಾ ವಿಮಾನದ ಸಮೀಪಕ್ಕೆ ಬರುವಷ್ಟರಲ್ಲಿ ಅದು ಟೇಕ್ ಆಫ್​ ಆಗಿತ್ತು, ಇಲ್ಲದಿದ್ದರೆ ದೊಡ್ಡ ಅಪಘಾತವೇ ಸಂಭವಿಸುತ್ತಿತ್ತು.

ಮತ್ತಷ್ಟು ಓದಿ: ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್

ಇಂಡಿಗೋ ವಿಮಾನದ ಪ್ರಕಾರ, ಇಂದೋರ್​ನಿಂದ ಇಂಡಿಗೋ ವಿಮಾನ ಮುಂಬೈ ಏರ್​ಪೋರ್ಟ್​ಗೆ ಬರುತ್ತಿತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಕ್ಲಿಯರೆನ್ಸ್ ದೊರೆತಿತ್ತು ಆ ಸೂಚನೆ ಪ್ರಕಾರ ವಿಮಾನ ಕೆಳಗಿಳಿಸಲಾಯಿತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ