ವಯನಾಡು ತೊರೆದು ರಾಯ್​ಬರೇಲಿ ಸಂಸದರಾಗಿ ಉಳಿಯಲಿದ್ದಾರಾ ರಾಹುಲ್ ಗಾಂಧಿ?

ಕಾಂಗ್ರೆಸ್​ ನಾಯಕರ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್​ಬರೇಲಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈಗ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂಬ ಗೊಂದಲ ಎದುರಾಗಿದೆ. ಆದರೆ ರಾಹುಲ್ ರಾಯ್​ಬರೇಲಿಯನ್ನು ಉಳಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಯನಾಡು ತೊರೆದು ರಾಯ್​ಬರೇಲಿ ಸಂಸದರಾಗಿ ಉಳಿಯಲಿದ್ದಾರಾ ರಾಹುಲ್ ಗಾಂಧಿ?
ನರೇಂದ್ರ ಮೋದಿ
Follow us
|

Updated on: Jun 09, 2024 | 11:39 AM

ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ(Rahul Gandhi) ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ಎರಡೂ ಕಡೆ ಗೆಲುವು ಸಾಧಿಸಿದ್ದಾರೆ. ರಾಹುಲ್​ ಗಾಂಧಿ ವಯನಾಡ್​ ಬಿಟ್ಟು ರಾಯ್​ಬರೇಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಜೂನ್ 17ಕ್ಕೂ ಮುನ್ನ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಎರಡನೇ ಬಾರಿಗೆ ವಯನಾಡಿನ ಸಂಸದರಾಗಿದ್ದು, ವಯನಾಡಿನ ಜನತೆ ಅವರನ್ನು ತಮ್ಮ ಪ್ರತಿನಿಧಿಯನ್ನಾಗಿ ಬಯಸುತ್ತಿದ್ದಾರೆ. ಆದರೆ, ರಾಯ್​ಬರೇಲಿ ಸೀಟು ಉಳಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಹಿಸುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ಮನವಿ ಮಾಡಿದೆ. ಒಬ್ಬರು ಕೇವಲ ಒಂದು ಕಡೆ ಮಾತ್ರ ಸಂಸದರಾಗಿ ಮುಂದುವರೆಯಬಹುದು ಎಂಬುದು ಸ್ಪಷ್ಟವಾಗಿದೆ.

ಕೇರಳದ ಕಾಂಗ್ರೆಸ್ ನಾಯಕರು ವಯನಾಡ್ ಅನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: ರಾಯ್‌ಬರೇಲಿ ಅಥವಾ ವಯನಾಡ್?; ಮೂರ್ನಾಲ್ಕು ದಿನಗಳಲ್ಲಿ ನಿರ್ಧರಿಸಲಿದ್ದಾರೆ ರಾಹುಲ್ ಗಾಂಧಿ

ತಮ್ಮ ತಾಯಿ ಸೋನಿಯಾ ಗಾಂಧಿ ಈವರೆಗೆ ಪ್ರತಿನಿಧಿಸುತ್ತಿದ್ದ ರಾಯ್​ ಬರೇಲಿಯಲ್ಲಿ ಈ ಬಾರಿ ರಾಹುಲ್ ಗಾಂಧಿ 6,87,649 ಮತಗಳನ್ನು ಗಳಿಸಿ ಕೇವಲ 2,97,619 ಮತ ಗಳಿಸಿದ ಬಿಜೆಪಿಯ ದಿನೇಶ್​ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ.

ಈಗ ಕಾಂಗ್ರೆಸ್​ನೊಳಗೆ ರಾಹುಲ್ ಗಾಂಧಿ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಕೇರಳ ಸಂಸದರು ಹಾಗೂ ಅಲ್ಲಿನ ಪಕ್ಷದ ನಾಯಕರನ್ನು ಬಿಟ್ಟರೆ ಉಳಿದವರೆಲ್ಲರೂ ರಾಹುಲ್ ಗಾಂಧಿರಾಯ್​ ಬರೇಲಿಯನ್ನು ಉಳಿಸಿಕೊಳ್ಳಬೇಕೆಂದೇ ಹೇಳುತ್ತಿದ್ದಾರೆ.

ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ