AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಕ್ಕಟ್ಟಿನಲ್ಲಿ ಇಂಡಿಗೋ: ಅನಾರೋಗ್ಯವೆಂದು ರಜೆ ಹಾಕಿ ಇಂಡಿಗೋ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ತಂತ್ರಜ್ಞರು

ಕಡಿಮೆ ವೇತನ ವಿರೋಧಿಸಿ ದೆಹಲಿಯಲ್ಲಿ ಇಂಡಿಗೋ ವಿರುದ್ಧ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನು ಹೈದರಾಬಾದ್​ನಲ್ಲಿ ಸಾಕಷ್ಟು ತಂತ್ರಜ್ಞರು ರಜೆಯ ಮೇಲೆ ತೆರಳಿದ್ದಾರೆ.

ಇಕ್ಕಟ್ಟಿನಲ್ಲಿ ಇಂಡಿಗೋ: ಅನಾರೋಗ್ಯವೆಂದು ರಜೆ ಹಾಕಿ ಇಂಡಿಗೋ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ತಂತ್ರಜ್ಞರು
Indigo
TV9 Web
| Edited By: |

Updated on: Jul 10, 2022 | 8:52 PM

Share

ಕಡಿಮೆ ವೇತನ ವಿರೋಧಿಸಿ ದೆಹಲಿಯಲ್ಲಿ ಇಂಡಿಗೋ ವಿರುದ್ಧ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನು ಹೈದರಾಬಾದ್​ನಲ್ಲಿ ಸಾಕಷ್ಟು ತಂತ್ರಜ್ಞರು ರಜೆಯ ಮೇಲೆ ತೆರಳಿದ್ದಾರೆ.

ಜುಲೈ 2 ರಂದು, ಇಂಡಿಗೋದ ಸುಮಾರು 55 ಪ್ರತಿಶತದಷ್ಟು ದೇಶೀಯ ವಿಮಾನಗಳು ವಿಳಂಬವಾಗಿದ್ದವು ಏಕೆಂದರೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅನಾರೋಗ್ಯವನ್ನು ಉಲ್ಲೇಖಿಸಿ ರಜೆ ತೆಗೆದುಕೊಂಡಿದ್ದರು, ಈ ಸಿಬ್ಬಂದಿ ಏರ್ ಇಂಡಿಯಾದ ಇಂಟರ್​ವ್ಯೂಗೆ ತೆರಳಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು.

COVID-19 ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ, ಇಂಡಿಗೋ ಉನ್ನತ ಹುದ್ದೆಯಲ್ಲಿದ್ದ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಿತ್ತು. ಹೊಸ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್, ಜೆಟ್ ಏರ್‌ವೇಸ್ ಮತ್ತು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ ಮತ್ತು ಇದು ವಿಮಾನಯಾನ ಉದ್ಯಮದಲ್ಲಿ ಸಂಚಲನವನ್ನು ಉಂಟುಮಾಡಿದೆ.

ಕಳೆದ ಎರಡು ದಿನಗಳಿಂದ ಇಂಡಿಗೋ ತಂತ್ರಜ್ಞರು ಅನಾರೋಗ್ಯದ ಕಾರಣ ನೀಡಿ ಕಡಿಮೆ ವೇತನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಇಂಡಿಗೋ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಇಂಡಿಗೋ ವಿಮಾನದ ಸಿಬ್ಬಂದಿ ಇಂಟರ್​ವ್ಯೂಗೆ ತೆರಳಿದ್ದ ಕಾರಣ 900ಕ್ಕೂ ಅಧಿಕ ವಿಮಾನಗಳು ಅನೇಕ ನಗರಗಳಿಗೆ ತಡವಾಗಿ ಹಾರಾಟ ನಡೆಸಿರುವ ಘಟನೆ ವರದಿಯಾಗಿತ್ತು. ಏರ್​ ಇಂಡಿಯಾ ಕರೆದಿದ್ದ ಇಂಟರ್​ವ್ಯೂಗೆ ಇಂಡಿಯಾ ವಿಮಾನದ ಸಿಬ್ಬಂದಿಗಳು ತೆರಳಿದ್ದ ಕಾರಣ ವಿಮಾನ ಹಾರಾಟ ತಡವಾಗಿತ್ತು.

ಶನಿವಾರ ಹಾಗೂ ಭಾನುವಾರ ವಿಮಾನಗಳು ತಡವಾಗಿ ಹಾರಾಟ ನಡೆಸಿದ್ದವು. ಏರ್​ ಇಂಡಿಯಾದ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಯು ಶನಿವಾರದಂದು ನಿಗದಿಯಾಗಿತ್ತು. ಮತ್ತು ಹೆಚ್ಚಿನ ಸಿಬ್ಬಂದಿ ರಜೆ ತೆಗೆದುಕೊಂಡಿದ್ದರು. ಜುಲೈ 7ರಂದು ಬೆಂಗಳೂರಿನಲ್ಲಿ ವಾಕ್​ಇನ್ ಇಂಟರ್​ವ್ಯೂ ನಿಗದಿಪಡಿಸಲಾಗಿದೆ.

“ಏರ್ ಇಂಡಿಯಾ ಶನಿವಾರ ಯಾವುದೇ ಸಿಬ್ಬಂದಿ ಸಂದರ್ಶನವನ್ನು ನಡೆಸಲಿಲ್ಲ” ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಎಎನ್​ಐಗೆ ತಿಳಿಸಿದ್ದಾರೆ.ಟಾಟಾ ಒಡೆತನದ ಏರ್ ಇಂಡಿಯಾ ಜೂನ್ 28 ಮತ್ತು ಜುಲೈ 1 ರಂದು ದೆಹಲಿ ಮತ್ತು ಮುಂಬೈನಲ್ಲಿ ನೇಮಕಾತಿ ನಡೆಸಿತ್ತು.

ಏತನ್ಮಧ್ಯೆ, ವಿಮಾನಯಾನ ನಿಗಾ ಸಂಸ್ಥೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ವಿಷಯದ ಬಗ್ಗೆ ಇಂಡಿಗೋದಿಂದ ವಿವರಣೆಯನ್ನು ಕೇಳಿದೆ.