Terrorism: ಜಮ್ಮು-ಕಾಶ್ಮೀರ: 4 ವರ್ಷದಲ್ಲಿ ಭಯೋತ್ಪಾದಕ ಗುಂಪುಗಳಿಗೆ 700 ಮಂದಿ ಸ್ಥಳೀಯ ಯುವಕರ ಸೇರ್ಪಡೆ

ಭಯೋತ್ಪಾದಕ ಗುಂಪುಗಳು ಕಳೆದ 4 ವರ್ಷಗಳಲ್ಲಿ 700 ಸ್ಥಳೀಯ ಯುವಕರನ್ನು ತನ್ನ ಗುಂಪುಗಳಿಗೆ ಸೇರ್ಪಡೆ ಮಾಡಿಕೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲಿ 141 ಮಂದಿ ಭಯೋತ್ಪಾದಕರು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Terrorism: ಜಮ್ಮು-ಕಾಶ್ಮೀರ: 4 ವರ್ಷದಲ್ಲಿ ಭಯೋತ್ಪಾದಕ ಗುಂಪುಗಳಿಗೆ 700 ಮಂದಿ ಸ್ಥಳೀಯ ಯುವಕರ ಸೇರ್ಪಡೆ
Terrorist
TV9kannada Web Team

| Edited By: Nayana Rajeev

Jul 10, 2022 | 6:05 PM

ಶ್ರೀನಗರ: ಭಯೋತ್ಪಾದಕ ಗುಂಪುಗಳು ಕಳೆದ 4 ವರ್ಷಗಳಲ್ಲಿ 700 ಸ್ಥಳೀಯ ಯುವಕರನ್ನು ತನ್ನ ಗುಂಪುಗಳಿಗೆ ಸೇರ್ಪಡೆ ಮಾಡಿಕೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲಿ 141 ಮಂದಿ ಭಯೋತ್ಪಾದಕರು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರ ಉಪಸ್ಥಿತಿಯು ಗಡಿಯಾಚೆಗಿನ ಭಯೋತ್ಪಾದನಾ ಲಾಂಚ್ ಪ್ಯಾಡ್‌ಗಳಿಂದ ಅವ್ಯಾಹತವಾಗಿ ಒಳನುಸುಳುವಿಕೆಯನ್ನು ಸೂಚಿಸುತ್ತದೆ.

ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಜುಲೈ 5, 2022 ರ ಹೊತ್ತಿಗೆ ಒಟ್ಟು 82 ವಿದೇಶಿ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, 59 ಸ್ಥಳೀಯ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಭಯೋತ್ಪಾದಕರು ಹೆಚ್ಚಾಗಿ ಲಷ್ಕರ್-ಎ-ತೊಯ್ಬಾ, ಅದರ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸೇರಿದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 700 ಸ್ಥಳೀಯ ಯುವಕರನ್ನು ನೇಮಿಸಿಕೊಂಡಿವೆ – 2018 ರಲ್ಲಿ 187, 2019 ರಲ್ಲಿ 121, 2020 ರಲ್ಲಿ 181 ಮತ್ತು 2021 ರಲ್ಲಿ 142 ಮಂದಿಯನ್ನು ನೇಮಿಸಿಕೊಂಡಿವೆ.

ಈ ವರ್ಷದ ಜೂನ್ ಅಂತ್ಯದ ವೇಳೆಗೆ, 69 ಯುವಕರನ್ನು ಭಯೋತ್ಪಾದಕ ಗುಂಪುಗಳು ತಮ್ಮ ಗುಂಪಿಗೆ ಸೇರಿಸಿಕೊಂಡಿವೆ. ಈ ವರ್ಷ ಇಲ್ಲಿಯವರೆಗೆ 55 ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು 125 ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಇವರಲ್ಲಿ 91 ಮಂದಿ ಸ್ಥಳೀಯರು ಹಾಗೂ 34 ಮಂದಿ ವಿದೇಶಿಗರು ಇದ್ದರು.

ಅಲ್ಲದೆ, ಈ ಎನ್‌ಕೌಂಟರ್‌ಗಳಲ್ಲಿ 123 ಭಯೋತ್ಪಾದಕರನ್ನು ಬಂಧಿಸಲಾಗಿದೆ ಮತ್ತು ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಂಕಿಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 2021 ರಲ್ಲಿ 172, 2020 ರಲ್ಲಿ 251, 2019 ರಲ್ಲಿ 148 ಮತ್ತು 2018 ರಲ್ಲಿ 185 ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಈ ವರ್ಷ ಇಲ್ಲಿಯವರೆಗೆ ಭಯೋತ್ಪಾದಕ ಘಟನೆಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ. ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 20 ನಾಗರಿಕರು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಈ ವರ್ಷ ಎಂಟು ಗ್ರೆನೇಡ್ ದಾಳಿ ಘಟನೆಗಳನ್ನು ಕಂಡಿದೆ. ಮಾಹಿತಿಯ ಪ್ರಕಾರ, 2021 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 146 ಭಯೋತ್ಪಾದಕರು, ಮೂವರು ಭದ್ರತಾ ಸಿಬ್ಬಂದಿ ಮತ್ತು 41 ನಾಗರಿಕರು ಮೃತಪಟ್ಟಿದ್ದಾರೆ.

2020 ರಲ್ಲಿ 215 ಭಯೋತ್ಪಾದಕರು, 19 ಭದ್ರತಾ ಸಿಬ್ಬಂದಿ ಮತ್ತು 38 ನಾಗರಿಕರು ಸಾವನ್ನಪ್ಪಿದ್ದರು. 2019 ರಲ್ಲಿ 148 ಭಯೋತ್ಪಾದಕರು, 49 ಭದ್ರತಾ ಸಿಬ್ಬಂದಿ ಮತ್ತು 46 ನಾಗರಿಕರು ಮೃತಪಟ್ಟಿದ್ದರು. ಮತ್ತು 2018 ರಲ್ಲಿ 185 ಭಯೋತ್ಪಾದಕರು, ಏಳು ಭದ್ರತಾ ಸಿಬ್ಬಂದಿ ಮತ್ತು 72 ನಾಗರಿಕರು ಸಾವನ್ನಪ್ಪಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada