ತಾಂತ್ರಿಕ ದೋಷ: 45 ನಿಮಿಷಗಳ ಕಾಲ ರೋಪ್ವೇನಲ್ಲಿ ಸಿಲುಕಿದ್ದ ಉತ್ತರಾಖಂಡ್ ಶಾಸಕ
ತಾಂತ್ರಿಕ ದೋಷದಿಂದಾಗಿ 45 ನಿಮಿಷಗಳ ಕಾಲ ಉತ್ತರಾಖಂಡ್ ಶಾಸಕ ರೋಪ್ವೇನಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದೆ. ಉತ್ತರಾಖಂಡ್ ಸಚಿವರು ಚಲಿಸುತ್ತಿದ್ದ ರೋಪ್ ವೇ ಮಾರ್ಗಮಧ್ಯದಲ್ಲೇ ಕೈಕೊಟ್ಟಿದ್ದು, ಸುಮಾರು 45 ನಿಮಿಷಗಳ ಕಾಲ ರೋಪ್ವೇನಲ್ಲಿ ಶಾಸಕರು ಸೇರಿ 60 ಮಂದಿ ಸಿಲುಕಿಕೊಂಡಿದ್ದರು.

ತೆಹ್ರಿ ಜಿಲ್ಲೆಯ ಸುರ್ಕಂದ ದೇವಿ ದೇವಸ್ಥಾನದ ರೋಪ್‌ವೇಯಲ್ಲಿ ಸಿಲುಕಿದ್ದ ಕೇಬಲ್ ಕಾರ್‌ನಿಂದ ಎಲ್ಲಾ 60 ಜನರನ್ನು ಈಗ ರಕ್ಷಿಸಲಾಗಿದೆ. ಮೇ ತಿಂಗಳಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ಪಟ್ಟಣದಲ್ಲಿರುವ ಬೆಟ್ಟದ ಮೇಲಿನ ದೇವತೆ ‘ಶಾರದಾ’ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಯಾತ್ರಾರ್ಥಿಗಳನ್ನು ಕೇಬಲ್ ಕಾರ್‌ಗಳಲ್ಲಿ ಸಿಲುಕಿ ಸುಮಾರು ಒಂದು ಗಂಟೆಯ ನಂತರ ರಕ್ಷಿಸಲಾಯಿತು.
ಜೂನ್‌ನಲ್ಲಿ, ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಪರ್ವಾನೂ ಟಿಂಬರ್ ಟ್ರಯಲ್‌ನಲ್ಲಿ ಕೇಬಲ್ ಕಾರ್ನಲ್ಲಿ ಒಟ್ಟು 11 ಜನರು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್ ಮತ್ತು ಇತರ ಏಜೆನ್ಸಿಗಳು ನಡೆಸಿದ ಆರು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅವರನ್ನು ರಕ್ಷಿಸಲಾಯಿತು.
Published On - 6:37 pm, Sun, 10 July 22