ಪ್ರಯಾಣಿಕರಿಗೆ ಸಿಹಿ ಸುದ್ದಿ; ಮಂಗಳೂರು-ಹುಬ್ಬಳ್ಳಿ ಮಧ್ಯೆ ಇಂಡಿಗೋ ವಿಮಾನ ಸಂಚಾರ ಆರಂಭ
ಟರ್ಮಿನಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿರನ್ನು ಹೂ ಹಾಗೂ ಕೇಕ್ ನೀಡಿ ಸ್ವಾಗತಿಸಲಾಯಿತು
ಮಂಗಳೂರು-ಹುಬ್ಬಳ್ಳಿ ನಡುವೆ ನಿನ್ನೆ (ಮೇ 1) ಸಂಜೆಯಿಂದ ವಿಮಾನ ಸಂಚಾರ ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ನಡೆದ ಬಳಿಕ 48 ಮಂದಿ ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಭಾನುವಾರ ಸಂಜೆ 6.50ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
1 / 5
ಮಂಗಳೂರು-ಹುಬ್ಬಳ್ಳಿ ಮಧ್ಯೆ ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಸಹಿತ ವಾರದಲ್ಲಿ 4 ದಿನ ಇಂಡಿಗೋ ವಿಮಾನವು ಸಂಚಾರ ನಡೆಸಲಿದೆ.
2 / 5
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ಟೇಕಾಫ್ ಆಗುವ ವಿಮಾನವು ಸಂಜೆ 6.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.
3 / 5
ಮಂಗಳೂರಿನಿಂದ ಸಂಜೆ 6.35 ಕ್ಕೆ ಟೇಕಾಫ್ ಆಗಲಿರುವ ವಿಮಾನವು ರಾತ್ರಿ 7.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಭಾನುವಾರ ಮೊದಲ ವಿಮಾನ ಲ್ಯಾಂಡ್ ಆಗಿ ಪಾರ್ಕಿಂಗ್ ಜಾಗಕ್ಕೆ ಬರುತ್ತಿದ್ದಂತೆ ವಾಟರ್ ಸೆಲ್ಯೂಟ್ ಸ್ವಾಗತ ನೀಡಲಾಯಿತು.
4 / 5
ಟರ್ಮಿನಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿರನ್ನು ಹೂ ಹಾಗೂ ಕೇಕ್ ನೀಡಿ ಸ್ವಾಗತಿಸಲಾಯಿತು. ಅಲ್ಲದೆ ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಸಿದ್ಧರಾಗಿದ್ದ 36 ಮಂದಿ ಪ್ರಯಾಣಿಕರನ್ನು ಬೀಳ್ಕೊಟ್ಟು ಶುಭ ಹಾರೈಸಲಾಯಿತು.