Monkeypox: ಮಂಕಿಪಾಕ್ಸ್​ ಕೂಡ ಲೈಂಗಿಕವಾಗಿ ಹರಡುವ ಇತರೆ ಸೋಂಕಿನಂತೆಯೇ ಎಂದ ತಜ್ಞರು

ಮಂಕಿಪಾಕ್ಸ್ ಕೂಡ ಲೈಂಗಿಕವಾಗಿ ಹರಡುವ ಇತರೆ ಸೋಂಕಿನಂತೆಯೇ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಈಶ್ವರ್ ಗಿಲಾಡಾ ಅವರು ಹೇಳಿದ್ದಾರೆ. ಈಗಾಗಲೇ ಕೇರಳದಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಈ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ

Monkeypox: ಮಂಕಿಪಾಕ್ಸ್​ ಕೂಡ ಲೈಂಗಿಕವಾಗಿ ಹರಡುವ ಇತರೆ ಸೋಂಕಿನಂತೆಯೇ ಎಂದ ತಜ್ಞರು
Dr Ishwar GiladaImage Credit source: ANI
Follow us
TV9 Web
| Updated By: ನಯನಾ ರಾಜೀವ್

Updated on: Jul 15, 2022 | 12:36 PM

ಮಂಕಿಪಾಕ್ಸ್ ಕೂಡ ಲೈಂಗಿಕವಾಗಿ ಹರಡುವ ಇತರೆ ಸೋಂಕಿನಂತೆಯೇ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಈಶ್ವರ್ ಗಿಲಾಡಾ ಅವರು ಹೇಳಿದ್ದಾರೆ. ಈಗಾಗಲೇ ಕೇರಳದಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಈ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ. ಮಂಕಿಪಾಕ್ಸ್ ಇತರ ಯಾವುದೇ ಲೈಂಗಿಕವಾಗಿ ಹರಡುವ ಸೋಂಕಿನಂತೆ. ಏಕೆಂದರೆ ಇದು ಪ್ರಸ್ತುತ ಸೋಂಕಿಗೆ ಒಳಗಾದ ಜನರ ವಿರುದ್ಧ ಕೆಲವು ರೀತಿಯ ತಾರತಮ್ಯಗಳು ನಡೆಯುತ್ತಿವೆ ಹೀಗಾಗಿ ವಿಶ್ವ ಅರೋಗ್ಯ ಸಂಸ್ಥೆ ಇದನ್ನು ಘೋಷಿಸುತ್ತಿಲ್ಲ ಎಂದಿದ್ದಾರೆ.

“ಸುಮಾರು 99% ಪ್ರಕರಣಗಳು ಪ್ರಸ್ತುತ MSM ನಲ್ಲಿವೆ, ಇದು ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿರುವ ಪುರುಷ ಹಾಗೂ ಸುಮಾರು 80 ಪ್ರತಿಶತ ಪ್ರಕರಣಗಳು ಯುರೋಪ್ ಅಮೇರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ.

ಮಂಕಿಪಾಕ್ಸ್ ಮುಖ್ಯವಾಗಿ ನಿಕಟ ಅಥವಾ ಅತ್ಯಂತ ನಿಕಟ ವ್ಯಕ್ತಿಗಳ ಮೂಲಕ ಹರಡುತ್ತದೆ ಎಂದಿದ್ದಾರೆ. ಪ್ರಸ್ತುತ ಮಂಕಿಪಾಕ್ಸ್‌ಗೆ ಯಾವುದೇ ಪರಿಪೂರ್ಣ ಚಿಕಿತ್ಸೆ ಇಲ್ಲ ಆದರೆ ಸಿಡುಬು ಲಸಿಕೆಯು ಉಪಯುಕ್ತವಾಗಿದೆ ಏಕೆಂದರೆ ಇದು ಮಂಕಿಪಾಕ್ಸ್ ಅನ್ನು ತಡೆಗಟ್ಟುತ್ತದೆ ಮತ್ತು ಮಂಗನ ಕಾಯಿಲೆಗೆ ಚಿಕಿತ್ಸೆ ನೀಡುವ ಚಿಕಿತ್ಸಕ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ.

ಕೇರಳಕ್ಕೆ ಕೇಂದ್ರ ಸರ್ಕಾರ ಕಳುಹಿಸಿರುವ ತಂಡವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಡಾ. RML ಆಸ್ಪತ್ರೆ, ನವದೆಹಲಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಯ ತಜ್ಞರನ್ನು ಒಳಗೊಂಡಿದೆ.

ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಮಂಕಿಪಾಕ್ಸ್​ ತಗುಲಿರುವ ರೋಗಿಯ ಸ್ಥಿತಿ ಗಂಭೀರವಾಗಿಲ್ಲ. ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್​ ನಿನ್ನೆ ಹೇಳಿದ್ದರು. ರೋಗಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಅವರ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಲಾಗಿದೆ. ಅವರ ತಂದೆ, ತಾಯಿ, ಟ್ಯಾಕ್ಸಿ ಚಾಲಕ, ಆಟೋ ಚಾಲಕ ಮತ್ತು ಪಕ್ಕದ ಸೀಟ್​ನಲ್ಲಿ ಕುಳಿತು ವಿಮಾನದಲ್ಲಿ ಪ್ರಯಾಣಿಸಿದ್ದ 11 ಸಹ ಪ್ರಯಾಣಿಕರನ್ನು ಗುರುತಿಸಲಾಗಿದೆ.

ಸುಮಾರು 60 ದೇಶಗಳಲ್ಲಿ ಜುಲೈ 13ರವರೆಗೆ 10,400ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಕಿಪಾಕ್ಸ್ ವೈರಾಣು ಸಿಡುಬು ಉಂಟುಮಾಡುವ ವೈರಾಣುವಿಗೆ ಸಂಬಂಧಿಸಿದ್ದಾಗಿದ್ದು, ಸಿಡುಬು ವೈರಾಣುವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಇವೆರಡೂ ಪೋಕ್ಸ್ವಿರಿಡೆ ಎಂಬ ತಳಿಯ ಪೈಕಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದಾಗಿದ್ದು ಮಂಕಿಪಾಕ್ಸ್ ನ ಮೊದಲ ಪ್ರಕರಣವನ್ನು 1958 ರಲ್ಲಿ ಸಂಶೋಧನೆಗಾಗಿ ಹಿಡಿದಿಟ್ಟಿದ್ದ ಮಂಗಗಳಿಂದ ಪತ್ತೆ ಮಾಡಲಾಗಿತ್ತು.

1970 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಖಾಯಿಲೆ ಪತ್ತೆಯಾಗಿತ್ತು. 2020 ರಲ್ಲಿ ಡಬ್ಲ್ಯುಹೆಚ್ಒ ನೀಡಿದ ಮಾಹಿತಿಯ ಪ್ರಕಾರ 4,594 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 171 ಸಾವು ಸಂಭವಿಸಿದೆ (ಮರಣ ಪ್ರಮಾಣ ಶೇ.3.7 ರಷ್ಟಿದೆ) ಈ ಪ್ರಣಗಳು ಪತ್ತೆಯಾದಲ್ಲಿ ಪಿಸಿಆರ್ ಪರೀಕ್ಷೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಇವುಗಳನ್ನು ಶಂಕಿತ ಪ್ರಕರಣಗಳೆಂದು ಗುರುತಿಸಲಾಗಿದೆ.

ಲಕ್ಷಣಗಳು ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ, ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ