ನವದೆಹಲಿ: ಕೊವಿಡ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅ. 31ರವರೆಗೂ ಹೇರಲಾಗಿರುವ ನಿರ್ಬಂಧವನ್ನು ನವೆಂಬರ್ 30ರವರೆಗೂ ವಿಸ್ತರಿಸಲಾಗಿದೆ. ಭಾರತದಲ್ಲಿ ಕೊವಿಡ್ ಮಾತ್ರವಲ್ಲದೆ ರೂಪಾಂತರಿ ವೈರಸ್, ನಿಫಾ ವೈರಸ್, ಎವೈ 4.2 ವೈರಸ್ ಹಾವಳಿಯೂ ಜಾಸ್ತಿಯಾಗಿದೆ. ಹೀಗಾಗಿ, ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ನವೆಂಬರ್ 30ರವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸುತ್ತೋಲೆ ಹೊರಡಿಸಿದ್ದು, ಈ ಆದೇಶ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. ಡಿಜಿಸಿಎಯಿಂದ ಅನುಮತಿ ಪಡೆದಿರುವ ಕಾರ್ಗೋ ವಿಮಾನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಹಾಗೇ ವಿಶೇಷ ಅನುಮತಿ ಪಡೆದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮಾಡಲು ಅವಕಾಶವಿದೆ.
ಕಳೆದ ವರ್ಷದಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ವಿಧಿಸಲಾಗಿದೆ. 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಅಂತಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ನವೆಂಬರ್ 30ರವರೆಗೂ ರದ್ದುಗೊಳಿಸಲಾಗಿದೆ. ವಿಶೇಷ ಸಂದರ್ಭಗಳನ್ನು ಪರಿಗಣಿಸಿ, ನಿಗದಿಯಾಗಿರುವ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಮತಿ ದೊರೆಯಲಿದ್ದು, ಅಂತಾರಾಷ್ಟ್ರೀಯ ಎಲ್ಲಾ ಕಾರ್ಗೋ ಕಾರ್ಯಾಚರಣೆ ಹಾಗೂ ಡಿಜಿಸಿಎ ವಿಶೇಷವಾಗಿ ಅನುಮೋದಿಸಿದ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.
The ban on scheduled international commercial passenger flights to/from India extended until 30th November: DGCA pic.twitter.com/DzJEPrhZ8h
— ANI (@ANI) October 29, 2021
ಕೊವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ 23ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತೆ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಅ. 31ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ಮತ್ತೆ ಆ ಗಡುವನ್ನು ವಿಸ್ತರಿಸಲಾಗಿದೆ. ಭಾರತಕ್ಕೆ ಮತ್ತು ಭಾರತದಿಂದ ಹೊರಹೋಗುವ ಅಂತಾರರಾಷ್ಟ್ರೀಯ ವಿಮಾನಗಳ ಮೇಲಿನ ಅಮಾನತನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಈ ವಿಸ್ತರಣೆಯು ಅಂತಾರಾಷ್ಟ್ರೀಯ ಸರಕು ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಅನ್ವಯಿಸುವುದಿಲ್ಲ, ವಿಶೇಷವಾಗಿ DGCAಯಿಂದ ಅನುಮೋದಿಸಲಾಗಿದೆ. ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಶುಕ್ರವಾರ ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳ ಮೇಲಿನ ನಿಷೇಧವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ: ವರ್ಲ್ಡ್ ಟೂರ್ ಮಾಡಲು 2 ವಿಮಾನದ ಟಿಕೆಟ್, ಖರ್ಚಿಗೆ 7 ಲಕ್ಷ ರೂ; ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ ಕಂಪನಿ!
ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?