G20 Summit: ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದ ಪ್ರಧಾನಿ ನರೇಂದ್ರ ಮೋದಿ
Narendra Modi: ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಧೈರ್ಯ ಮತ್ತು ಸ್ಫೂರ್ತಿಯ ಮೂಲವಾಗಿರುವ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರೋಮ್‌ನಲ್ಲಿ ನನಗೆ ಅವಕಾಶ ಸಿಕ್ಕಿತು ಎಂದು ಪ್ರಧಾನಿ ನರೇಂದ್ರ ಮೋದಿ ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ರೋಮ್: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೋಮ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಧೈರ್ಯ ಮತ್ತು ಸ್ಫೂರ್ತಿಯ ಮೂಲವಾಗಿರುವ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರೋಮ್‌ನಲ್ಲಿ ನನಗೆ ಅವಕಾಶ ಸಿಕ್ಕಿತು” ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಮುಂಜಾನೆ ರೋಮ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಟಲಿಯ ಭಾರತೀಯರು ಸಂಸ್ಕೃತ ಮಂತ್ರಗಳನ್ನು ಪಠಿಸುವ ಮೂಲಕ ಸ್ವಾಗತಿಸಿದ್ದಾರೆ.
#WATCH Sanskrit chants, slogans of ‘Modi, Modi’ reverberate at Piazza Gandhi in Rome as Prime Minister Narendra Modi interacts with people gathered there
The PM is in Rome to participate in the G20 Summit. pic.twitter.com/G13ptYOAjB
— ANI (@ANI) October 29, 2021
‘ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ರೋಮ್‌ಗೆ ಬಂದಿಳಿದಿದ್ದೇನೆ. ಪ್ರಮುಖ ಜಾಗತಿಕ ವಿಷಯಗಳ ಕುರಿತು ಇದು ಉದ್ದೇಶಪೂರ್ವಕ ವೇದಿಕೆಯಾಗಿದೆ. ಈ ರೋಮ್ ಭೇಟಿಯ ಮೂಲಕ ಇತರ ಕಾರ್ಯಕ್ರಮಗಳನ್ನು ಕೂಡ ನಾನು ಎದುರು ನೋಡುತ್ತಿದ್ದೇನೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
A Roma ho avuto l’opportunità di rendere omaggio al Mahatma Gandhi i cui ideali sono fonte di coraggio e ispirazione per milioni di persone in tutto il mondo. pic.twitter.com/NZa5o3tiKp
— Narendra Modi (@narendramodi) October 29, 2021
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ನಡೆಸಿದ ಜಂಟಿ ಸಭೆಯಲ್ಲಿ ಭಾರತವು ಈ ತಿಂಗಳು ತನ್ನ ಶತಕೋಟಿ ಕೋವಿಡ್ ಲಸಿಕೆಯನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಕ್ಕೆ ಉರ್ಸುಲಾ ವಾನ್ ರಡೆರ್ ಲೇಯನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Landed in Rome to take part in the @g20org Summit, an important forum to deliberate on key global issues. I also look forward to other programmes through this visit to Rome. pic.twitter.com/e4UuIIfl7f
— Narendra Modi (@narendramodi) October 29, 2021
ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಮುಖ ವೇದಿಕೆಯಾದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ರೋಮ್ ತಲುಪಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ಅಕ್ಟೋಬರ್ 31ರವರೆಗೆ ರೋಮ್ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು.
ಜಗತ್ತಿನಾದ್ಯಂತ ಕೊವಿಡ್ ಸೋಂಕು ಹರಡಿದ ಬಳಿಕ ನಡೆಯುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದೆ. ಇಂದು ಮಧ್ಯಾಹ್ನ 3.30ಕ್ಕೆ ರೋಮ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ಇಂದು ಸಂಜೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆ; ರೋಮ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು