ವರ್ಲ್ಡ್ ಟೂರ್ ಮಾಡಲು 2 ವಿಮಾನದ ಟಿಕೆಟ್, ಖರ್ಚಿಗೆ 7 ಲಕ್ಷ ರೂ; ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ ಕಂಪನಿ!
ಸ್ಪಾಂಕ್ಸ್ ಕಂಪನಿಯು ತಮ್ಮ ಉದ್ಯೋಗಿಗಳಿಗೆ ವಿಶ್ವದ ಯಾವ ಮೂಲೆಗಾದರೂ ಪ್ರಯಾಣ ಮಾಡಲು ಎರಡು ಪ್ರಥಮ ದರ್ಜೆಯ ವಿಮಾನ ಟಿಕೆಟ್‌ಗಳನ್ನು ನೀಡಿದೆ. ಪ್ರವಾಸಕ್ಕಾಗಿ ಖರ್ಚು ಮಾಡಲು 10,000 ಡಾಲರ್ ಹಣವನ್ನು ನೀಡಿ ಅಚ್ಚರಿಗೊಳಿಸಿದೆ.
ನವದೆಹಲಿ: ವಿಶ್ವದಲ್ಲಿ ಕೆಲವು ಕಂಪನಿಗಳು ಆಗಾಗ ದೊಡ್ಡ ದೊಡ್ಡ ಗಿಫ್ಟ್ ಗಳನ್ನು ತಮ್ಮ ಉದ್ಯೋಗಿಗಳಿಗೆ ನೀಡಿ ಅಚ್ಚರಿಗೊಳಿಸುತ್ತವೆ. ಈಗ ಅಮೆರಿಕದ ಸ್ಪಾಂಕ್ಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಆ ಗಿಫ್ಟ್ ಬಗ್ಗೆ ಕೇಳಿ ಕಂಪನಿ ಉದ್ಯೋಗಿಗಳಿಗೆ ಸಖತ್ ಖುಷಿಯಾಗಿದೆ. ಹಾಗಾದರೆ, ಕಂಪನಿಯು ನೀಡಿದ ಅಚ್ಚರಿಯ ಗಿಫ್ಟ್ ಯಾವುದು? ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ.
ಅಮೆರಿಕದ ಶೇಪ್‌ವೇರ್ ಕಂಪನಿಯಾದ Spanx ಇತ್ತೀಚೆಗೆ ತನ್ನ ಎಲ್ಲಾ ಉದ್ಯೋಗಿಗಳಿಗೆ ಭರ್ಜರಿ ಗಿಫ್ಚ್ ನೀಡಿದೆ. ಈ ಗಿಫ್ಟ್ ನಿಂದ ಕಂಪನಿಯ ಉದ್ಯೋಗಿಗಳು ಬಾರಿ ಖುಷಿಯಾಗಿದ್ದಾರೆ. ಕಂಪನಿ ನೀಡಿದ ಗಿಫ್ಟ್ ಏನು ಎನ್ನುವುದನ್ನು ಕೇಳಿದರೆ ನಮ್ಮ ಕಂಪನಿಯು ಹೀಗೆ ಇದೇ ದೀಪಾವಳಿಗೆ ಭರ್ಜರಿ ಗಿಫ್ಟ್ ಅನ್ನು ನೀಡಬಾರದೇ ಎಂದು ನಿಮಗೆ ಅನ್ನಿಸಬಹುದು. ಸ್ಪಾಂಕ್ಸ್ ಕಂಪನಿಯು ತಮ್ಮ ಉದ್ಯೋಗಿಗಳಿಗೆ ವಿಶ್ವದ ಯಾವ ಮೂಲೆಗಾದರೂ ಪ್ರಯಾಣ ಮಾಡಲು ಎರಡು ಪ್ರಥಮ ದರ್ಜೆಯ ವಿಮಾನ ಟಿಕೆಟ್‌ಗಳನ್ನು ನೀಡಿದೆ. ಪ್ರವಾಸಕ್ಕಾಗಿ ಖರ್ಚು ಮಾಡಲು 10,000 ಡಾಲರ್ (7.48 ಲಕ್ಷ ರೂ.) ಹಣವನ್ನು ನೀಡಿ ಅಚ್ಚರಿಗೊಳಿಸಿದೆ. 50 ವರ್ಷದ ಸಾರಾ ಬ್ಲೇಕ್ಲಿ ತನ್ನ ಕಂಪನಿಯ ಬ್ಲಾಕ್‌ಸ್ಟೋನ್‌ನೊಂದಿಗಿನ 1.2 ಬಿಲಿಯನ್ ಡಾಲರ್ ಹೂಡಿಕೆ ಒಪ್ಪಂದವನ್ನು ಆಚರಿಸಲು ಒಂದು ಬಾರಿಯ ಬೋನಸ್ ಅನ್ನು ಘೋಷಿಸಿದ್ದಾರೆ.
NPR ಪ್ರಕಾರ, ಸ್ಪಾಂಕ್ಸ್ ಕಂಪನಿಯ ಸ್ಥಾಪಕಿ, ಸಾರಾ ಬ್ಲೇಕ್ಲಿ ಹಿಂದೊಮ್ಮೆ ಫ್ಯಾಕ್ಸ್ ಯಂತ್ರಗಳನ್ನು ಮನೆ-ಮನೆಗೆ ಮಾರಾಟ ಮಾಡುವ ಮೂಲಕ ಜೀವನವನ್ನು ನಡೆಸುತ್ತಿದ್ದರು. ಆದರೆ, ಅದು ಎರಡು ದಶಕಗಳ ಹಿಂದಿನ ಕೆಲಸ. ನಂತರದ ಸಮಯದಲ್ಲಿ, ಸಾರಾ ಬ್ಲೇಕ್ಸಿ ಶೇಪ್‌ವೇರ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಸ್ವಶಕ್ತಿಯಿಂದ ಮಹಿಳಾ ಬಿಲಿಯನೇರ್ ಆದವರು ಎಂದು ಹೆಸರು ಗಳಿಸಿದ್ದಾರೆ. ಫೋರ್ಬ್ಸ್ 2012 ರಲ್ಲಿ ಸಾರಾ ಬ್ಲೇಕ್ಸಿ ಬಿಲಿಯನೇರ್ ಎಂದು ಘೋಷಿಸಿದೆ. ಈಗ, ಜಾಗತಿಕ ಹೂಡಿಕೆ ಸಂಸ್ಥೆ ಬ್ಲ್ಯಾಕ್‌ಸ್ಟೋನ್ ತನ್ನ ಕಂಪನಿಯಾದ ಸ್ಪಾಂಕ್ಸ್‌ನಲ್ಲಿ ಹೆಚ್ಚಿನ ಪಾಲನ್ನು ಖರೀದಿಸುತ್ತಿದೆ. ಇದರಿಂದ ಖುಷಿಗೊಂಡಿರುವ ಸಾರಾ ಬ್ಲೇಕ್ಲಿ ತನ್ನ ಉದ್ಯೋಗಿಗಳಿಗೆ ಎರಡು ಪ್ರಥಮ ದರ್ಜೆಯ ವಿಮಾನ ಟಿಕೆಟ್‌ಗಳೊಂದಿಗೆ ವಿಶ್ವದಲ್ಲಿ ಎಲ್ಲಿಗೆ ಬೇಕಾದರೂ ಹೋಗಲು ವಿಮಾನ ಟಿಕೆಟ್ ನೀಡುವ ಮೂಲಕ ಉದ್ಯೋಗಿಗಳನ್ನು ಅಚ್ಚರಿಗೊಳಿಸಿದ್ದಾರೆ. ಸಾರಾ ಬ್ಲೆಂಕ್ಸಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಂತಸದ ವಿಷಯವನ್ನು ವಿಡಿಯೊ ಮೂಲಕ ಹಂಚಿಕೊಂಡು ಬಹಿರಂಗಪಡಿಸಿದ್ದಾರೆ.
“ನಾನು ಜಗತ್ತನ್ನು ಏಕೆ ಸುತ್ತುತ್ತಿದ್ದೇನೆ?” ಎಂದು ಸಾರಾ ಬ್ಲೆಂಕ್ಸಿ ತನ್ನ ಭಾಷಣದ ಮಧ್ಯದಲ್ಲಿ ತನ್ನ ನೆರೆದಿದ್ದ ಉದ್ಯೋಗಿಗಳನ್ನು ಕೇಳಿದರು. ನಂತರ, ದಿಗ್ಭ್ರಮೆಗೊಂಡಿದ್ದ ಹಲವಾರು ಉದ್ಯೋಗಿಗಳಿಗೆ, ಅವರು ಘೋಷಿಸಿದ್ದೇನೇಂದರೆ “ನಾನು ವಿಶ್ವವನ್ನು ಸುತ್ತುತ್ತಿದ್ದೇನೆ, ಏಕೆಂದರೆ ಈ ಕ್ಷಣವನ್ನು ಆಚರಿಸಲು. ನಾನು ನಿಮಗೆ ವಿಶ್ವದಲ್ಲಿ ಎಲ್ಲಿಗೆ ಬೇಕಾದರೂ ಹೋಗಲು ಎರಡು ಪ್ರಥಮ ದರ್ಜೆಯ ಟಿಕೆಟ್‌ಗಳನ್ನು ಖರೀದಿಸಿದ್ದೇನೆ” ಎಂದು ಹೇಳಿದರು. ಅಷ್ಟೇ ಅಲ್ಲ ನೀವು ಪ್ರವಾಸವನ್ನು ಹೋದರೆ ನೀವು ನಿಜವಾಗಿಯೂ ಉತ್ತಮವಾದ ಭೋಜನಕ್ಕೆ ಹೋಗಲು ಬಯಸಬಹುದು. ಅಲ್ಲಿ ಒಳ್ಳೆಯ ಹೋಟೆಲ್‌ಗೆ ಹೋಗಲು ಬಯಸಬಹುದು. ಆದ್ದರಿಂದ ಪ್ರತಿಯೊಬ್ಬರ ಎರಡು ಪ್ರಥಮ ದರ್ಜೆಯ ಟಿಕೆಟ್‌ಗಳೊಂದಿಗೆ ಜಗತ್ತಿನಲ್ಲಿ ಎಲ್ಲಿಯಾದರೂ ಹೋದರೆ ಖರ್ಚು ಮಾಡಲು ಪ್ರತಿಯೊಬ್ಬರಿಗೂ 10,000 ಡಾಲರ್ ಹಣ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral News: 47 ಲಕ್ಷ ರೂ. ಜೊತೆ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿಯ ಹೆಂಡತಿ ಪರಾರಿ!
Mandya: ಮಂಡ್ಯ ಎಸ್ಪಿ ಹುದ್ದೆ ಹರಾಜಿಗಿದೆ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್