Sign In

By signing in or creating an account, you agree with Associated Broadcasting Company's Terms & Conditions and Privacy Policy.

2025ರವರೆಗೂ ಕಡಿಮೆ ಆಹಾರ ತಿನ್ನಿ: ಉತ್ತರ ಕೊರಿಯಾ ಜನರಿಗೆ ಸೂಚನೆ ನೀಡಿದ ಅಧ್ಯಕ್ಷ ಕಿಮ್​ ಜಾಂಗ್​ ಉನ್​​

Kim Jong Un: ಕಳೆದ ಎರಡು ವಾರಗಳ ಹಿಂದೆ ಸಭೆಯೊಂದರಲ್ಲಿ ಮಾತನಾಡಿದ್ದ ಕಿಮ್ ಸರ್ಕಾರದ ಅಧಿಕಾರಿಗಳು, ದೇಶದಲ್ಲಿ 2025ರವರೆಗೂ ಆಹಾರ ಬಿಕ್ಕಟ್ಟು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

2025ರವರೆಗೂ ಕಡಿಮೆ ಆಹಾರ ತಿನ್ನಿ: ಉತ್ತರ ಕೊರಿಯಾ ಜನರಿಗೆ ಸೂಚನೆ ನೀಡಿದ ಅಧ್ಯಕ್ಷ ಕಿಮ್​ ಜಾಂಗ್​ ಉನ್​​
ಕಿಮ್​ ಜಾಂಗ್​ ಉನ್​
Follow us
TV9 Web
| Updated By: Lakshmi Hegde

Updated on: Oct 29, 2021 | 11:18 AM

‘2025ರವರೆಗೂ ದೇಶದಲ್ಲಿ ಎಲ್ಲರೂ ಆದಷ್ಟು ಕಡಿಮೆ ತಿನ್ನಬೇಕು’-ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ (Kim Jong Un)​ ಇದೀಗ ಈ ಹೊಂದು ಸೂಚನೆ ಹೊರಡಿಸಿದ್ದಾರೆ. ಸದ್ಯ ಉತ್ತರ ಕೊರಿಯಾದಲ್ಲಿ ಆಹಾರದ ಕೊರತೆ (Food Shortage) ಉಂಟಾಗಿದ್ದು, ಅದನ್ನು ನೀಗಿಸುವ ಸಲುವಾಗಿ ಕಿಮ್​ ದೇಶದ ಜನರಿಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವಂತೆ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದಲೂ ಅಂದರೆ 2020ರ ಜನವರಿಯಿಂದಲೂ ಉತ್ತರ ಕೊರಿಯಾ ಚೀನಾದಿಂದ ಸರಕು ಪೂರೈಕೆಯಾಗುತ್ತಿದ್ದ ಗಡಿಗಳನ್ನು ಮುಚ್ಚಿದೆ.  ಹೀಗಾಗಿ ಇಲ್ಲಿ ಸಹಜವಾಗಿಯೇ ಆಹಾರ ವಸ್ತುಗಳ ಕೊರತೆ ಎದುರಾಗಿದೆ.  ಹಾಗೇ, ಬೆಲೆ ಕೂಡ ಗಗನಕ್ಕೇರಿದೆ.  

ಆಹಾರ ಪೂರೈಕೆಯ ಸಮಸ್ಯೆಯನ್ನು ನೀಗಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಕೂಡ ಅದರಲ್ಲಿ ಗುಣಮಟ್ಟದ ಸೇವೆ ನೀಡಲಾಗುತ್ತಿಲ್ಲ ಎಂದು ಒಪ್ಪಿಕೊಂಡಿರುವ ಕಿಮ್​ ಜಾಂಗ್​ ಉನ್​, ಇದೀಗ ಉತ್ತರ ಕೊರಿಯಾದಲ್ಲಿ ಜನರ ಆಹಾರ ಪರಿಸ್ಥಿತಿ ಹದಗೆಟ್ಟಿದೆ. ಕೃಷಿ ವಲಯ ತನ್ನ ಉತ್ಪಾದನಾ ಯೋಜನೆಯಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.  ಇನ್ನು ದೇಶದ ಹಲವು ಕಡೆಗಳಲ್ಲಿ ಸಿಕ್ಕಾಪಟೆ ಮಳೆಯಾಗುತ್ತಿದೆ. ಚಂಡಮಾರುತ ಎದ್ದಿದ್ದು ಪರಿಸ್ಥಿತಿ ಕೈ ಮೀರಿದೆ. ಅಲ್ಲಿ ಕಿಮ್ ಜಾಂಗ್​ ಉನ್​ ಸೇನೆಯನ್ನು ನಿಯೋಜಿಸಿದ್ದಾರೆ. ಅವರ ರಕ್ಷಣಾ ಕಾರ್ಯ, ಆಹಾರ ಪೂರೈಕೆಯ ಹೊಣೆಯನ್ನು ಆರ್ಮಿಗೆ ವಹಿಸಿಕೊಟ್ಟಿದ್ದಾರೆ.

ಇನ್ನು ಕಳೆದ ಎರಡು ವಾರಗಳ ಹಿಂದೆ ಸಭೆಯೊಂದರಲ್ಲಿ ಮಾತನಾಡಿದ್ದ ಕಿಮ್ ಸರ್ಕಾರದ ಅಧಿಕಾರಿಗಳು, ದೇಶದಲ್ಲಿ 2025ರವರೆಗೂ ಆಹಾರ ಬಿಕ್ಕಟ್ಟು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಹಾಗೇ, ಉತ್ತರ ಕೊರಿಯಾ ಮತ್ತು ಚೀನಾ ನಡುವಿನ ಆಹಾರ ಪೂರೈಕೆ ಗಡಿ 2025ರೊಳಗೆ ತೆರೆಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದೂ ಅವರು ವಿವರಿಸಿದ್ದಾರೆ. ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರದ ಮೇಲೆ ನಿಯಂತ್ರಣ ಹೇರುವ ಅಂತಾರಾಷ್ಟ್ರೀಯ ನಿರ್ಬಂಧಗಳ ಕುರಿತಾಗಿ ಈ ಸಭೆ ನಡೆದಿತ್ತು.

ಕಿಮ್​ ಜಾಂಗ್​ ಉನ್​ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾರೆ. ಅವರು ಇತ್ತೀಚೆಗೆ ಆರೋಗ್ಯದ ವಿಷಯಕ್ಕಾಗಿ ಪದೇಪದೆ ಸುದ್ದಿಯಾಗುತ್ತಿದ್ದಾರೆ. ಕಿಮ್​ ಜಾಂಗ್​ ಉನ್​ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಕೆಲವು ಅವರಿಗೆ ಹೃದಯಸಂಬಂಧಿ ಕಾಯಿಲೆಯಿದೆ ಎಂದೂ ಹೇಳುತ್ತಿದ್ದಾರೆ. ಆದರೆ ಯಾವುದೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಉತ್ತರ ಕೊರಿಯಾದಲ್ಲಿ ಕೆ-ಪಾಪ್​ ಸಂಗೀತವನ್ನು ನಿಷೇಧಿಸುವ ಬಗ್ಗೆ ಅವರು ಮಾತನಾಡಿದ್ದರು. ಕೆ-ಪಾಪ್​ ಮ್ಯೂಸಿಕ್​ ಯುವಕರ ಪಾಲಿಗೆ ಒಂದು ಮಾರಕ ಕ್ಯಾನ್ಸರ್​ ಎಂದು ಹೇಳಿದ್ದರು.

ಇದನ್ನೂ ಓದಿ: ದಲಿತರು ಎಂಬ ಕಾರಣಕ್ಕೆ ನೋ ಹೇರ್ ಕಟ್, ಅಸ್ಪೃಶ್ಯತೆ ಪ್ರಶ್ನಿಸಿ ಸಲೂನ್ ಮಾಲೀಕನ ವಿರುದ್ಧ ಆಕ್ರೋಶ

ಕೊವಾಕ್ಸಿನ್ ಲಸಿಕೆ ಪಡೆದವರು ಒಮಾನ್​​ಗೆ ಪ್ರಯಾಣಿಸಬಹುದು, ಕ್ವಾರಂಟೈನ್​​ನಲ್ಲಿರುವ ಅಗತ್ಯವಿಲ್ಲ

‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ