
ದೆಹಲಿ: ಜನವರಿ 8ರಿಂದ ಬ್ರಿಟನ್ ಹಾಗೂ ಭಾರತದ ನಡುವೆ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. ಜನವರಿ 8ರಿಂದ ಬ್ರಿಟನ್ನಿಂದ ಭಾರತಕ್ಕೆ ವಿಮಾನಗಳು ಆಗಮಿಸಲಿದೆ.
ಜನವರಿ 23ರವರೆಗೆ ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈಗೆ ಮಾತ್ರ ಬ್ರಿಟನ್ನಿಂದ ವಾರಕ್ಕೆ 15 ವಿಮಾನಗಳು ಆಗಮಿಸಲಿವೆ ಎಂಬ ಮಾಹಿತಿ ಸಹ ದೊರೆತಿದೆ. ಬ್ರಿಟನ್ನಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಭಾರತ ನಡುವಿನ ವಿಮಾನ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು.
Published On - 8:17 pm, Fri, 1 January 21