ಐಪಿಎಸ್ ಅಧಿಕಾರಿ ಆತ್ಮಹತ್ಯೆ, ಹರಿಯಾಣ ಡಿಜಿಪಿ ವಿರುದ್ಧ ಪೂರಣ್ ಪತ್ನಿ ದೂರು
ಚಂಡೀಗಢದಲ್ಲಿ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣವು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಪೂರಣ್ ಕುಮಾರ್ ಅವರ ಪತ್ನಿ ಹರಿಯಾಣ ಡಿಜಿಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಂತಹ ಉನ್ನತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಘಟನೆಯಾದರೂ ಯಾವುದು ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ. ಅವರು ಒತ್ತಡದಲ್ಲಿದ್ದರೋ ಅಥವಾ ಯಾರಿಗಾದರೂ ಭಯಪಟ್ಟಿದ್ದರೋ? ತನಿಖೆ ಮುಂದುವರೆದಂತೆ, ಪ್ರಕರಣದಲ್ಲಿ ಹೊಸ ತಿರುವುಗಳು ಹೊರಹೊಮ್ಮುತ್ತಿವೆ.

ಚಂಡೀಗಢ, ಅಕ್ಟೋಬರ್ 09: ಚಂಡೀಗಢದಲ್ಲಿ ಐಪಿಎಸ್ ಅಧಿಕಾರಿ(IPS Officer) ವೈ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣವು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಪೂರಣ್ ಕುಮಾರ್ ಅವರ ಪತ್ನಿ ಹರಿಯಾಣ ಡಿಜಿಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಂತಹ ಉನ್ನತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಘಟನೆಯಾದರೂ ಯಾವುದು ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ. ಅವರು ಒತ್ತಡದಲ್ಲಿದ್ದರೋ ಅಥವಾ ಯಾರಿಗಾದರೂ ಭಯಪಟ್ಟಿದ್ದರೋ? ತನಿಖೆ ಮುಂದುವರೆದಂತೆ, ಪ್ರಕರಣದಲ್ಲಿ ಹೊಸ ತಿರುವುಗಳು ಹೊರಹೊಮ್ಮುತ್ತಿವೆ.
ಚಂಡೀಗಢ ಪೊಲೀಸರು ಅವರ ನಿವಾಸದಿಂದ 9 ಪುಟಗಳ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ, ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಹೆಸರು ಉಲ್ಲೇಖಿಸಲಾಗಿದೆ. ಪೂರಣ್ ಕುಮಾರ್ 2001 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರನ್ನು ಕೇವಲ 9 ದಿನಗಳ ಹಿಂದೆಯಷ್ಟೇ ಪಿಟಿಸಿ ಸುನಾರಿಯಾ ಐಜಿಯಾಗಿ ನೇಮಿಸಲಾಗಿತ್ತು. ಆದಾಗ್ಯೂ, ಐಜಿ ಆತ್ಮಹತ್ಯೆಯ ಬಗ್ಗೆ ಯಾವುದೇ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಲು ಸಿದ್ಧರಿಲ್ಲ.
ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ, ಅವರ ಪತ್ನಿ ಐಎಎಸ್ ಅಮ್ನೀತ್ ಪಿ. ಕುಮಾರ್ ಅವರು ಹರಿಯಾಣ ಡಿಜಿಪಿ ಮತ್ತು ರೋಹ್ಟಕ್ ಎಸ್ಪಿ ವಿರುದ್ಧ ಚಂಡೀಗಢ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕು ಪುಟಗಳ ದೂರಿನಲ್ಲಿ, ಹರಿಯಾಣ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಎಸ್ಪಿ ನರೇಂದ್ರ ಬಿಜಾರ್ನಿಯಾ ಅವರು ತಮ್ಮ ಪತಿಗೆ ಕಿರುಕುಳ, ತಾರತಮ್ಯ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಚಂಡೀಗಢದ ಮನೆಯಲ್ಲಿ ಹರಿಯಾಣದ ಐಪಿಎಸ್ ಅಧಿಕಾರಿ ಶೂಟ್ ಮಾಡಿಕೊಂಡು ಆತ್ಮಹತ್ಯೆ
ತನ್ನ ಪತಿಯ ಸಾವಿಗೆ ಸ್ವಲ್ಪ ಮೊದಲು ಡಿಜಿಪಿ ಶತ್ರುಜೀತ್ ಕಪೂರ್ ಅವರ ಆದೇಶದ ಮೇರೆಗೆ ರೋಹ್ಟಕ್‌ನಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಕರಣ (ಎಫ್‌ಐಆರ್-ಸಂಖ್ಯೆ 0319/2025) ದಾಖಲಿಸಲಾಗಿದೆ, ಇದು ಉದ್ದೇಶಪೂರ್ವಕ ಪಿತೂರಿ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದು ಅವರ ಪತಿ ತೀವ್ರ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ವೈ. ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಇಂದು, ಅವರ ಪತ್ನಿ, ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್, ಚಂಡೀಗಢದ ಸೆಕ್ಟರ್ 16 ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಗುರುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವೈ ಪೂರಣ್ ಕುಮಾರ್ ಚಂಡೀಗಢದ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




