IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ

|

Updated on: Jun 25, 2021 | 8:03 PM

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ
ಭಾರತ ದರ್ಶನ ವಿಶೇಷ ರೈಲು
Follow us on

ನವದೆಹಲಿ: ಬೇರೆಲ್ಲ ಸಾರಿಗೆ ಮಾಧ್ಯಮಗಳ ಹಾಗೆ ಭಾರತೀಯ ರೇಲ್ವೇಸ್ ಸಹ ಕೊವಿಡ್​-19 ಪಿಡುಗಿನಿಂದಾಗಿ ಭಾರೀ ಹಾನಿ ಅನುಭವಿಸಿದೆ. ಅದನ್ನು ಸ್ವಲ್ಪಮಟ್ಟಿಗಾದರು ಸರಿದೂಗಿಸಿಕೊಳ್ಳುವ ಎಂಬ ಯೋಚನೆಯೊಂದಿಗೆ ರೇಲ್ವೇ ಇಲಾಖೆಯು ಆಗಸ್ಟ್​ ತಿಂಗಳಲ್ಲಿ ಏಳು ಜ್ಯೋತಿರ್ಲಿಂಗಳಿರುವ ಪುಣ್ಯಕ್ಷೇತ್ರಗಳು ಸೇರಿದಂತೆ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಒಂದು ವಿಶೇಷ ರೈಲು ಬಿಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಶೇಷ ರೈಲನ್ನು ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಎಂದು ಕರೆಯಲಾಗುವುದು ಮತ್ತು ಇದನ್ನು ಭಾರತೀಯ ರೇಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಆಗಸ್ಟ್​ 24ರಿಂದ ಆಪರೇಟ್​ ಮಾಡಲಿದೆ.

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

ಆಗಸ್ಟ್​ 24 ರಂದಯ ಆರಂಭವಾಗುವ ಈ ರೇಲ್ವೇಸ್​ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್ ಸೇವೆಯು ಎರಡು ವಾರಗಳ ಅವಧಿಯದಾಗಿರುತ್ತದೆ. ಈ ಟ್ರೇನು ಸೆಪ್ಟಂಬರ್ ಏಳರಂದು ನವದೆಹಲಿಗೆ ಹಿಂತಿರುಗಲಿದೆ.
ಈ ಪ್ಯಾಕೇಜ್​ನಡಿಯಲ್ಲಿ ಪ್ರವಾಸಿಗರು ಟಿಕೆಟ್​ಗಳನ್ನು ಬುಕ್ ಮಾಡಿಕೊಂಡು ಯಾವುದೇ ಸ್ಥಳದ ರೇಲ್ವೆ ನಿಲ್ದಾಣದಿಂದ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್​ನಲ್ಲಿ ಹತ್ತಬಹುದಾಗಿದೆ ಮತ್ತು ಇಳಿಯಬಹುದಾಗಿದೆ. ಲಖನೌ, ಗೊರಖ್​ಪುರ, ದೋರಿಯಾ, ಜೌನ್​ಪುರ್ ಸಿಟಿ, ಸುಲ್ತಾನಪುರ, ಕಾನ್ಪುರ್ ಮತ್ತು ಝಾಂಸಿ ಮೊದಲಾದ ಸ್ಥಳಗಳಲ್ಲಿ ಟ್ರೇನನ್ನು ಹತ್ತಬಹುದು ಮತ್ತು ಇಳಿಯಬಹುದಾಗಿದೆ. ಭಾರತ್ ದರ್ಶನ್ ಪ್ಯಾಕೇಜಿನ ಅಂದಾಜು ವೆಚ್ಚ ಪ್ರತಿ ಪ್ರಯಾಣಿಕನಿಗೆ ರೂ. 12,285 ಆಗಲಿದೆ ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ

ಇದೇ ಮೂಲಗಳ ಪ್ರಕಾರ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್, ಓಂಕಾರೇಶ್ವರ್, ಉಜ್ಜಯನಿ, ಅಹಮದಾಬಾದ್, ದ್ವಾರಕಾ, ನಾಗೇಶ್ವರ್, ಸೋಮ್​ನಾಥ, ತ್ರಿಂಬಕೇಶ್ವರ, ಶಿರಡಿ, ಭೀಮಾಶಂಕರ್, ಕೆವಾಡಿಯಾ ಮೊದಲಾದ ಸ್ಥಳಗಳಿಗೆ ಹೋಗಲಿದೆ.

ಪ್ರವಾಸದ ಸಮಯದಲ್ಲಿ, ಎಲ್ಲ ಪ್ರಯಾಣಿಕರಿಗೆ ಮೂರು ಹೊತ್ತು ಸಸ್ಯಾಹಾರಿ ಆಹಾರ ನೀಡಲಾಗುವುದು. ಅದಲ್ಲದೆ, ಧರ್ಮಶಾಲಾದಲ್ಲಿ ಅವರಿಗೆ ವಾತಾನುಕೂಲಿತವಲ್ಲದ ವಸತಿ ಸೌಕರ್ಯ ಮತ್ತು ಸ್ಥಳೀಯ ಟೂರಿಸ್ಟ್​ ಸ್ಥಳಗಳಿಗೆ ಭೇಟಿ ನೀಡಲು ಬಸ್​ ವ್ಯವಸ್ಥೆ ಮಾಡಲಾಗುವುದು ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ.
ಭಾರತ್ ದರ್ಶನ್ ಪ್ರವಾಸಕ್ಕೆ ಟಿಕೆಟ್​ಗಳನ್ನು ಕಾಯ್ದಿರಿಸುವುದು ಹೇಗೆ?

ಪ್ರವಾಸ ಮಾಡಲಿಚ್ಛಿಸುವವರು ಐಆರ್​ಸಿಟಿಸಿ ವೆಬ್​ಸೈಟ್​ www.irctctourism.com. ಮೂಲಕ ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಈ ಸಹಾಯವಾಣಿ ನಂಬರ್​ಗಳಿಗೆ ಫೋನಾಯಿಸಿ ಪ್ಯಾಕೇಜ್​ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ- 8287930908, 8287930909, 8287930910 ಮತ್ತು 8287930911.

ಇದನ್ನೂ ಓದಿ: Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ