
ಜೈಪುರ, ಡಿಸೆಂಬರ್ 30: ರಾಜಸ್ಥಾನದ ಯುವಕನೊಬ್ಬ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೀಗಾಗಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಗ ವೈದ್ಯರು ಅವನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಆಘಾತಕ್ಕೊಳಗಾದರು. ಸಮಸ್ಯೆ ಏನೆಂದು ಕಂಡುಹಿಡಿಯಲು ವೈದ್ಯರು ಯುವಕನ ಹೊಟ್ಟೆಯನ್ನು ಸ್ಕ್ಯಾನ್ (Scanning) ಮಾಡಿದ ವೈದ್ಯರು ಶಾಕ್ ಆದರು. ಏಕೆಂದರೆ ಆತನ ಹೊಟ್ಟೆಯಲ್ಲಿ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಶ್ ಸೇರಿದಂತೆ ಕೆಲವು ವಸ್ತುಗಳನ್ನು ಕಂಡು ಆಘಾತಕ್ಕೊಳಗಾದರು.
ತಕ್ಷಣವೇ ಆತನಿಗೆ ಆಪರೇಷನ್ ಮಾಡಲು ಸಿದ್ಧರಾದ ವೈದ್ಯರು ಆ ಯುವಕನ ಹೊಟ್ಟೆಯಿಂದ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಯುವಕನ ಹೊಟ್ಟೆಯಿಂದ 2 ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು 7 ಹಲ್ಲುಜ್ಜುವ ಬ್ರಷ್‌ಗಳನ್ನು ಹೊರತೆಗೆಯಲಾಯಿತು.
ಇದನ್ನೂ ಓದಿ: 3 ಕೋಟಿ ರೂ. ವಿಮೆ ಹಣ ಪಡೆಯಲು, ತಂದೆಗೆ ಹಾವು ಕಚ್ಚಿಸಿದ ಮಕ್ಕಳು
ಆ ಯುವಕ ಆಪರೇಷನ್ ಬಳಿಕ ಆರೋಗ್ಯವಾಗಿದ್ದಾನೆ. ಆ ಯುವಕ ಮಾನಸಿಕ ಅಸ್ವಸ್ಥನಾಗಿದ್ದರಿಂದ ಇಂತಹ ವಸ್ತುಗಳನ್ನು ನುಂಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆತ ಇಂತಹ ಅಪಾಯಕಾರಿ ವಸ್ತುಗಳನ್ನು ನುಂಗಲು ಖಚಿತ ಕಾರಣ ಇನ್ನೂ ಬಯಲಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ