AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು; ಇದು ಚುನಾವಣೆಯೇ? ಎಂದು ಪ್ರಶ್ನಿಸಿದ ಕೇಜ್ರಿವಾಲ್

ಬಿಜೆಪಿಯ ಸಿಂಗ್ 115 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಿರ್ಮಲಾ ಕುಮಾರಿ ಅವರು ಯಾವುದೇ ಮತ ಪಡೆಯಲಿಲ್ಲ. ಕಾಂಗ್ರೆಸ್ ಮತ್ತು ಎಎಪಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಸಿಂಗ್ ಅವರ ಗೆಲುವಿನೊಂದಿಗೆ ಬಿಜೆಪಿ 10 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಎಎಪಿ ಕೇವಲ ಎಂಟು ಸದಸ್ಯರನ್ನು ಹೊಂದಿದೆ.

ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು; ಇದು ಚುನಾವಣೆಯೇ? ಎಂದು ಪ್ರಶ್ನಿಸಿದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ರಶ್ಮಿ ಕಲ್ಲಕಟ್ಟ
|

Updated on: Sep 27, 2024 | 7:56 PM

Share

ದೆಹಲಿ ಸೆಪ್ಟೆಂಬರ್ 27: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಸ್ಥಾಯಿ ಸಮಿತಿಯ ಕೊನೆಯ ತೆರವಾದ ಸ್ಥಾನವನ್ನು ಅದರ ಅಭ್ಯರ್ಥಿ ಸುಂದರ್ ಸಿಂಗ್ (Sunder Singh) ಗೆದ್ದ ನಂತರ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಸಿಂಗ್ 115 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಿರ್ಮಲಾ ಕುಮಾರಿ ಅವರು ಯಾವುದೇ ಮತ ಪಡೆಯಲಿಲ್ಲ. ಕಾಂಗ್ರೆಸ್ ಮತ್ತು ಎಎಪಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಸಿಂಗ್ ಅವರ ಗೆಲುವಿನೊಂದಿಗೆ ಬಿಜೆಪಿ 10 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಎಎಪಿ ಕೇವಲ ಎಂಟು ಸದಸ್ಯರನ್ನು ಹೊಂದಿದೆ.

“ನಿಯಮಗಳ ಪ್ರಕಾರ ಮೇಯರ್ ಮಾತ್ರ ಎಂಸಿಡಿ ಹೌಸ್‌ನ ಸಭೆಯನ್ನು ಕರೆಯಬಹುದು ಆದರೆ ಲೆಫ್ಟಿನೆಂಟ್ ಗವರ್ನರ್ ಅದನ್ನು ಬದಲಾಯಿಸಿದರು. ಅದನ್ನು ಮಾಡಲು ನಾಗರಿಕ ಸಂಸ್ಥೆಯ ಹೆಚ್ಚುವರಿ ಆಯುಕ್ತರಿಗೆ ನಿರ್ದೇಶಿಸಿದರು” ಎಂದು ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ಹೇಳಿದ್ದಾರೆ.

“ಇದು ಚುನಾವಣೆಯಾ?” ಎಂದು ಪ್ರಶ್ನಿಸಿದ ಕೇಜ್ರಿವಾಲ್ ಬಿಜೆಪಿ ಗೂಂಡಾಗಿರಿ ಮಾಡುತ್ತಿದೆ. “ನಿಯಮದ ಪ್ರಕಾರ, ಸಭೆಗೆ 72 ಗಂಟೆಗಳ ಮೊದಲು ಪ್ರತಿ ಕೌನ್ಸಿಲರ್‌ಗೆ ನೋಟಿಸ್ ಕಳುಹಿಸಬೇಕು, ಆದರೆ ಅದನ್ನು ಅನುಸರಿಸಲಾಗಿಲ್ಲ” ಎಂದು ಎಎಪಿ ಸಂಚಾಲಕರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬಿಜೆಪಿ ಕೌನ್ಸಿಲರ್ ಕಮಲ್ಜೀತ್ ಸೆಹ್ರಾವತ್ ಅವರು ಪಶ್ಚಿಮ ದೆಹಲಿಯಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು.

ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯನ್ನು “ಅಸಂವಿಧಾನಿಕ” ಎಂದು ಹೇಳಿದ್ದು, ಎಎಪಿ ಕೌನ್ಸಿಲರ್‌ಗಳು ಭಾಗವಹಿಸುವುದಿಲ್ಲ ಎಂದು ಘೋಷಿಸಿದರು.  ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಸೆ.27ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲು ಎಂಸಿಡಿ ಆಯುಕ್ತ ಅಶ್ವನಿಕುಮಾರ್ ಗುರುವಾರ ಆದೇಶ ಹೊರಡಿಸಿದ್ದರು.

ನಿಗಮದಿಂದ ಸ್ಥಾಯಿ ಸಮಿತಿಯಲ್ಲಿ ಖಾಲಿ ಇರುವ ಏಕೈಕ ಸ್ಥಾನಕ್ಕೆ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 2:00 ಗಂಟೆಗೆ ಚುನಾವಣೆಯನ್ನು ನಿಗದಿಪಡಿಸಲಾಗಿದೆ ಎಂದು MCD ಆದೇಶವು ಹೇಳಿದೆ. ಆದರೆ, ಹೇಳಲಾದ ಚುನಾವಣೆಯನ್ನು ನಡೆಸಲಾಗಿಲ್ಲ. ಸಭೆಯನ್ನು ಮೇಯರ್ ಶೆಲ್ಲಿ ಒಬೆರಾಯ್ ಅವರು ಅಕ್ಟೋಬರ್ 5 ಕ್ಕೆ ಮುಂದೂಡಿದರು.

‘ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ’: ಸುಂದರ್ ಸಿಂಗ್

ತನ್ನ ಚುನಾವಣಾ ಗೆಲುವಿನ ನಂತರ ಮಾತನಾಡಿದ ಬಿಜೆಪಿಯ ಸುಂದರ್ ಸಿಂಗ್, “ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಉನ್ನತ ನಾಯಕತ್ವಕ್ಕೆ ಧನ್ಯವಾದ ಹೇಳುತ್ತೇನೆ… ಎಎಪಿ ಕೂಡ ನಾಮಪತ್ರ ಸಲ್ಲಿಸಿದೆ ಆದರೆ ಅವರು ತಮ್ಮದೇ ಆದ ಕೌನ್ಸಿಲರ್‌ಗಳ ಮೇಲೆ ವಿಶ್ವಾಸ ಹೊಂದಿಲ್ಲದಿರಬಹುದು, ಚುನಾವಣೆಯಿಂದ ಓಡಿಹೋಗುವುದು ಉತ್ತಮ ಎಂದು ಅವರು ಭಾವಿಸಿದ್ದರು.”

ಇದನ್ನೂ ಓದಿ: ಲಡ್ಡು ವಿವಾದದ ನಡುವೆಯೇ ತಿರುಮಲ ದೇವಸ್ಥಾನ ಭೇಟಿ ರದ್ದು ಮಾಡಿದ ಜಗನ್ ರೆಡ್ಡಿ

“ಅವರಿಗೆ ಅನೇಕ ಬಾರಿ ಅವಕಾಶಗಳನ್ನು ನೀಡಲಾಯಿತು.ಎಲ್ಲರಿಗೂ ಇಂದು ಮಧ್ಯಾಹ್ನ 1 ಗಂಟೆಯ ಸಮಯ ನೀಡಲಾಯಿತು ಆದರೆ ಅವರು ಹಾಜರಾಗಲಿಲ್ಲ … ಅಧ್ಯಕ್ಷರು ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಿದರು … ನಾನು ಗೆದ್ದಿದ್ದೇನೆ” ಎಂದು ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವದ ಗೆಲುವು… AAP ಅವರು ವಿಶ್ವಾಸ ಮತದಲ್ಲಿ ಸೋಲುತ್ತಾರೆ ಎಂದು ತಿಳಿದಿದ್ದರು ಆದ್ದರಿಂದ ಅವರು ಯುದ್ಧಭೂಮಿಯನ್ನು ತೊರೆದರು. ಎಎಪಿ ಸುಳ್ಳು ಹೇಳುವುದರಲ್ಲಿ ನಿಪುಣರಾಗಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗಬಹುದು”ಎಂದು ಎಎನ್‌ಐ ಜತೆ ಮಾತನಾಡಿದ ಎಂಸಿಡಿ ಹೌಸ್ ವಿರೋಧ ಪಕ್ಷದ ನಾಯಕ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ