AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಿವಿಧ ಧಾರ್ಮಿಕ ಸ್ಥಳಗಳ ಮೇಲೆ ಕೆಟ್ಟ ದೃಷ್ಟಿ ನೆಟ್ಟಿದ್ದ ಉಗ್ರರ ಬಂಧನ

ಧಾರ್ಮಿಕ ಸ್ಥಳಗಳ ಮೇಲೆ ಕೆಟ್ಟ ದೃಷ್ಟಿ ನೆಟ್ಟಿದ್ದ ಉಗ್ರರನ್ನು ಎನ್​​ಐಎ ಸದೆಬಡಿದಿದೆ. ಶಸ್ತ್ರಾಸ್ತ್ರಗಳು ಹಾಗೂ ಬಾಂಬ್ ಮೂಲಕ ಧಾರ್ಮಿಕ ಸ್ಥಳಗಳ ಮೇಲೆ ದೊಡ್ಡ ದಾಳಿಯನ್ನೇ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದರು. ಆದರೆ ಎನ್​ಐಎ ಅವರ ಉಪಾಯವನ್ನು ಬುಡಮೇಲು ಮಾಡಿದ್ದಾರೆ.ಐಸಿಸ್ ಮಾಡ್ಯೂಲ್‌ಗಳನ್ನು ಭೇದಿಸಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕಿಸುವ ಡಿಜಿಟಲ್ ಪುರಾವೆಗಳನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.

ಭಾರತದ ವಿವಿಧ ಧಾರ್ಮಿಕ ಸ್ಥಳಗಳ ಮೇಲೆ ಕೆಟ್ಟ ದೃಷ್ಟಿ ನೆಟ್ಟಿದ್ದ ಉಗ್ರರ ಬಂಧನ
ಎನ್​ಐಎ
ನಯನಾ ರಾಜೀವ್
|

Updated on: Sep 17, 2025 | 11:07 AM

Share

ನವದೆಹಲಿ, ಸೆಪ್ಟೆಂಬರ್ 17: ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಲು ಉಗ್ರರು(Terrorists) ಯೋಜನೆ ರೂಪಿಸಿದ್ದರು ಎನ್ನುವ ಮಾಹಿತಿಯನ್ನು ಎನ್​ಐಎ ಅಧಿಕಾರಿಗಳು ನೀಡಿದ್ದಾರೆ. ಶಸ್ತ್ರಾಸ್ತ್ರಗಳು ಹಾಗೂ ಬಾಂಬ್ ಮೂಲಕ ಧಾರ್ಮಿಕ ಸ್ಥಳಗಳ ಮೇಲೆ ದೊಡ್ಡ ದಾಳಿಯನ್ನೇ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದರು. ಆದರೆ ಎನ್​ಐಎ ಅವರ ಉಪಾಯವನ್ನು ಬುಡಮೇಲು ಮಾಡಿದ್ದಾರೆ.ಐಸಿಸ್ ಮಾಡ್ಯೂಲ್‌ಗಳನ್ನು ಭೇದಿಸಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕಿಸುವ ಡಿಜಿಟಲ್ ಪುರಾವೆಗಳನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.

ಎರಡೂ ಮಾಡ್ಯೂಲ್‌ಗಳು ಖಿಲಾಫತ್ ಮಾದರಿ ಮತ್ತು ಘಜ್ವಾ-ಎ-ಹಿಂದ್ ಕಾರ್ಯಸೂಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದು ವರದಿಯಾಗಿದೆ. ಮೊದಲ ಮಾಡ್ಯೂಲ್ ಅನ್ನು ದೆಹಲಿ ಪೊಲೀಸ್ ವಿಶೇಷ ದಳವು ಜಾರ್ಖಂಡ್, ತೆಲಂಗಾಣ, ಬೆಂಗಳೂರು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಸಿದ ದಾಳಿಗಳಲ್ಲಿ ಪತ್ತೆಹಚ್ಚಿತು.

ಈ ಘಟಕದ ಐದು ಸದಸ್ಯರಾದ ಅಶರ್ ದಾನಿಶ್, ಅಫ್ತಾಬ್ ಖುರೇಷಿ, ಸುಫಿಯಾನ್ ಅಬುಬಕರ್ ಖಾನ್, ಮೊಹಮ್ಮದ್ ಹುಜೈಫ್ ಯಮನ್ ಮತ್ತು ಕಮ್ರಾನ್ ಕಮ್ರಾನ್ ಖುರೇಷಿಯನ್ನು ಬಂಧಿತರಾಗಿದ್ದಾರೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕ ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಧಾರ್ಮಿಕ ಸ್ಥಳಗಳ ಮೇಲೆ ಹತ್ಯೆಗಳು ಮತ್ತು ದಾಳಿಗಳನ್ನು ಭಯೋತ್ಪಾದಕರು ಯೋಜಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: Mali: ಮಾಲಿಯಲ್ಲಿ ಮೂವರು ಭಾರತೀಯರನ್ನು ಅಪಹರಿಸಿದ ಅಲ್​-ಖೈದಾ ಉಗ್ರರು

ಎರಡನೇ ಐಸಿಸ್ ಮಾಡ್ಯೂಲ್ ಆಂಧ್ರಪ್ರದೇಶದ ವಿಜಯನಗರದಲ್ಲಿತ್ತು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಎಂಟು ರಾಜ್ಯಗಳಲ್ಲಿ 16 ಸ್ಥಳಗಳ ಮೇಲೆ ದಾಳಿ ನಡೆಸಿ, ದೊಡ್ಡ ಪ್ರಮಾಣದ ಡಿಜಿಟಲ್ ಸಾಧನಗಳು, ದಾಖಲೆಗಳು ಮತ್ತು ರಾಸಾಯನಿಕ ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಸಿರಾಜ್ ಮತ್ತು ಸಮೀರ್ ಎಂಬ ಇಬ್ಬರು ಶಂಕಿತ ಭಯೋತ್ಪಾದಕರು ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟೆಲಿಗ್ರಾಮ್, ಸಿಗ್ನಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಯುವಕರನ್ನು ಪ್ರಚೋದಿಸಿದ್ದಾರೆ ಎಂದು ಡಿಜಿಟಲ್ ಪುರಾವೆಗಳು ಬಹಿರಂಗಪಡಿಸಿವೆ. ಪಾಕಿಸ್ತಾನಿ ನಿರ್ವಾಹಕನೊಬ್ಬ ಈ ಗುಂಪುಗಳಲ್ಲಿರುವ ಮೂಲಭೂತವಾದಿಗಳ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ. ವಿಜಯನಗರದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಈ ಪ್ರಕರಣದ ಮೊದಲ ಆರೋಪಿ ಆರಿಫ್ ಹುಸೇನ್ ಅಲಿಯಾಸ್ ಅಬು ತಾಲಿಬ್ ಆಗಸ್ಟ್ 27 ರಂದು ಸೌದಿ ಅರೇಬಿಯಾದ ರಿಯಾದ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಯಿತು. ತನಿಖೆಯಲ್ಲಿ ಆತ ಮತ್ತು ಆತನ ಸಹಚರರು ನೇಪಾಳ ಗಡಿಯ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸಂಚು ರೂಪಿಸುತ್ತಿದ್ದರು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ