AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲಿ ಮಹಿಳೆಯರ ಮೃತದೇಹಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಗಳಿಗೆ ಗುಂಡೇಟು, ಹಮಾಸ್ ಉಗ್ರರ ಕ್ರೂರ ಮುಖ

ಹಮಾಸ್(Hamas) ಉಗ್ರರು ಉತ್ತೆಯಾಳಾಗಿರಿಸಿಕೊಂಡಿದ್ದ ಜನರನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿದೆ.  ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ರಕ್ತಸಿಕ್ತ ದಾಳಿಯ ನಂತರ ಪ್ರಾರಂಭವಾದ ಈ ಹೋರಾಟ ಇರಾನ್ ತಲುಪಿದೆ

ಇಸ್ರೇಲಿ ಮಹಿಳೆಯರ ಮೃತದೇಹಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಗಳಿಗೆ ಗುಂಡೇಟು, ಹಮಾಸ್ ಉಗ್ರರ ಕ್ರೂರ ಮುಖ
ಹಮಾಸ್ Image Credit source: AP News
ನಯನಾ ರಾಜೀವ್
|

Updated on: Jul 09, 2025 | 10:53 AM

Share

ಹಮಾಸ್(Hamas) ಉಗ್ರರು ಉತ್ತೆಯಾಳಾಗಿರಿಸಿಕೊಂಡಿದ್ದ ಜನರನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿದೆ.  ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.

2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ರಕ್ತಸಿಕ್ತ ದಾಳಿಯ ನಂತರ ಪ್ರಾರಂಭವಾದ ಈ ಹೋರಾಟ ಇರಾನ್ ತಲುಪಿದೆ.ಇಲ್ಲಿಯವರೆಗೆ ಎರಡೂ ಕಡೆಯಿಂದ ಸಾವಿರಾರು ಜನರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರ ದಾಳಿಯ ಬಗ್ಗೆ ಇಸ್ರೇಲಿ ಪ್ರತ್ಯಕ್ಷದರ್ಶಿಗಳು ಈಗ ಹಮಾಸ್‌ನ ಕ್ರೌರ್ಯದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಹಮಾಸ್ ಭಯೋತ್ಪಾದಕರು ಇಸ್ರೇಲಿ ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ಇಸ್ರೇಲಿ ಮಹಿಳೆಯರ ಶವಗಳನ್ನು ವಿವಸ್ತ್ರಗೊಳಿಸಿ ಮರಗಳು ಮತ್ತು ಕಂಬಗಳಿಗೆ ಕಟ್ಟಲಾಗುತ್ತಿತ್ತು. ಇದರ ನಂತರ, ಹಮಾಸ್ ಕ್ರೂರಿಗಳು ಅವರ ಖಾಸಗಿ ಭಾಗಗಳು ಮತ್ತು ತಲೆಗೆ ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.

ಲಂಡನ್ ಪತ್ರಿಕೆ ದಿ ಟೈಮ್ಸ್ ತನ್ನ ತನಿಖಾ ವರದಿಗಳಲ್ಲಿ ಈ ವಿಚಾರ ಬಹಿರಂಗಗೊಂಡಿದೆ.ಹಮಾಸ್ ಕನಿಷ್ಠ 6 ವಿಭಿನ್ನ ಸ್ಥಳಗಳಲ್ಲಿ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು, ಅತ್ಯಾಚಾರದಿಂದ ಬದುಕುಳಿದ ಮಹಿಳೆ ಮತ್ತು 17 ಪ್ರತ್ಯಕ್ಷದರ್ಶಿಗಳು ಈ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಬಿಡುಗಡೆ ವೇಳೆ ಹಮಾಸ್​ ಕಾರ್ಯಕರ್ತರ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳು

ಹಮಾಸ್ ಲೈಂಗಿಕ ಹಿಂಸೆಯನ್ನು ಕಾರ್ಯತಂತ್ರದ ಅಸ್ತ್ರವಾಗಿ ಬಳಸಿದೆ ಎಂದು ವರದಿ ಹೇಳುತ್ತದೆ. ಐಸಿಸ್ ಮತ್ತು ಬೊಕೊ ಹರಾಮ್ ಭಯೋತ್ಪಾದಕರು ಇದೇ ರೀತಿಯ ವಿಧಾನಗಳನ್ನು ಬಳಸಿದ್ದಾರೆ. ಅನೇಕ ಮಹಿಳೆಯರ ಶವದಲ್ಲಿ ಬಟ್ಟೆಗಳೇ ಇರಲಿಲ್ಲ, ಅವರ ಕೈಗಳನ್ನು ಕಟ್ಟಲಾಗಿತ್ತು. ಕೊಲೆಯ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವ ಪುರಾವೆಗಳಿವೆ. ಅವರ ಖಾಸಗಿ ಭಾಗಗಳನ್ನು ವಿರೂಪಗೊಳಿಸಲಾಗಿತ್ತು.

ಹಮಾಸ್ ಜೊತೆ ಇಸ್ರೇಲ್ ಸೇನೆಯ ಹೋರಾಟ ಮುಂದುವರೆದಿದೆ. ಉತ್ತರ ಗಾಜಾದಲ್ಲಿ ಗಸ್ತು ತಿರುಗುತ್ತಿದ್ದಾಗ ಸ್ಫೋಟಕ ಸ್ಫೋಟಗೊಂಡು ತನ್ನ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ಮಂಗಳವಾರ ತಿಳಿಸಿದೆ. ಎರಡು ವಿಭಿನ್ನ ಸ್ಥಳಗಳಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ, ಪ್ಯಾಲೆಸ್ಟೀನಿಯನ್ ದಾಳಿಕೋರನೊಬ್ಬ ತಮ್ಮ ಶಸ್ತ್ರಸಜ್ಜಿತ ವಾಹನದ ಮೇಲೆ ಬಾಂಬ್ ಇಟ್ಟಿದ್ದಾಗಿ ಇಸ್ರೇಲ್ ಹೇಳಿತ್ತು, ಅದು ಸ್ಫೋಟಗೊಂಡು ತನ್ನ ಏಳು ಸೈನಿಕರು ಸಾವನ್ನಪ್ಪಿದರು. ಅದೇ ಸಮಯದಲ್ಲಿ, ಇಸ್ರೇಲ್ ದಾಳಿಯ ಬಲಿಪಶುಗಳನ್ನು ನಾಸರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿರುವ ಸ್ಥಳಾಂತರಗೊಂಡ ಜನರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ