2022ರ ಮೊದಲ ಉಡ್ಡಯನಕ್ಕೆ ಕ್ಷಣಗಣನೆ; ಫೆ.14ರ ಮುಂಜಾನೆ ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಉಡಾವಣೆ
ನಾಳೆ ಮುಂಜಾನೆ ಇಒಎಸ್-04 ಉಪಗ್ರಹದೊಟ್ಟಿಗೆ ಉಡಾವಣೆಗೊಳ್ಳಲಿರುವ ಇನ್ನೆರಡು ಉಪಗ್ರಹಗಳು INSPIREsat-1 (IS-1) ಮತ್ತು INS-2TD. ಇವೆರಡೂ ಕೂಡ ಬೇರೆಬೇರೆ ಇನ್ಸ್ಟಿಟ್ಯೂಶನ್ಗಳ ವಿದ್ಯಾರ್ಥಿಗಳಿಂದ ನಿರ್ಮಿತವಾದ ಉಪಗ್ರಹಗಳಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಲಿರುವ 2022ರ ಮೊದಲ ಉಡಾವಣೆಗೆ ಇನ್ನು ಕೆಲವೇ ತಾಸುಗಳು ಬಾಕಿ ಇದೆ. ಇಸ್ರೋ ನಾಳೆ (ಫೆ.14) ಮುಂಜಾನೆ 5.59ಗಂಟೆಗೆ ಈ ವರ್ಷದ ಮೊದಲ ಭೂ ವೀಕ್ಷಣಾ ಉಪಗ್ರಹ-04 (EOS-04)ನ್ನು ಉಡಾವಣೆ ಮಾಡಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡ್ಡಯನ ನೆಲೆಯಿಂದ ಈ ಉಡಾವಣೆ ನಡೆಯಲಿದ್ದು, ಇಒಎಸ್-04 ಉಪಗ್ರಹವನ್ನು ಪೋಲಾರ್ ಉಪಗ್ರಹ ಉಡಾವಣಾ ವಾಹಕ (PSLV-C52) ಹೊತ್ತೊಯ್ಯಲಿದೆ. ಅಂದಹಾಗೇ, ಇಒಎಸ್-04 ರಾಡಾಡ್ ಇಮೇಜ್ ಉಪಗ್ರಹದೊಂದಿಗೆ ಇನ್ನೆರಡು ಉಪಗ್ರಹಗಳೂ ಕೂಡ ನಭಕ್ಕೆ ಏರಲಿವೆ.
ನಾಳೆ ಮುಂಜಾನೆ ಇಒಎಸ್-04 ಉಪಗ್ರಹದೊಟ್ಟಿಗೆ ಉಡಾವಣೆಗೊಳ್ಳಲಿರುವ ಇನ್ನೆರಡು ಉಪಗ್ರಹಗಳು INSPIREsat-1 (IS-1) ಮತ್ತು INS-2TD. ಇವೆರಡೂ ಕೂಡ ಬೇರೆಬೇರೆ ಇನ್ಸ್ಟಿಟ್ಯೂಶನ್ಗಳ ವಿದ್ಯಾರ್ಥಿಗಳಿಂದ ನಿರ್ಮಿತವಾದ ಉಪಗ್ರಹಗಳಾಗಿವೆ. ಪಿಎಸ್ಎಲ್ವಿ ಸಿ52 ಎಂಬುದು, ಪಿಎಸ್ಎಲ್ವಿ ಸರಣಿಯ 54ನೇ ಉಡಾವಣೆಯಾಗಿದೆ. ನಾಳೆ ಉಡ್ಡಯನಗೊಳ್ಳುವ ಇಒಎಸ್-04 ಭೂ ವೀಕ್ಷಣಾ ಉಪಗ್ರಹ 1710 ಕೆಜಿ ತೂಕವಿದ್ದು, ಇದನ್ನು ಪಿಎಸ್ಎಲ್ವಿ ಸಿ52ವಾಹಕವು 529 ಕಿಮೀ ಕಕ್ಷೆಯ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸುತ್ತದೆ.
ಇಒಎಸ್-04 ಒಂದು ರಾಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಯಾವುದೇ ರೀತಿಯ ವಾತಾವರಣವಿದ್ದರೂ, ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ, ಪ್ರವಾಹ ನಕ್ಷೆ ಅಪ್ಲಿಕೇಶನ್ಗಳಿಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ನಾಳೆ ಈ ಉಪಗ್ರಹ ಉಡಾವಣೆಯಾಗುವ ಬಗ್ಗೆ ಇಸ್ರೋ ಕೂಡ ಟ್ವೀಟ್ ಮಾಡಿ ತಿಳಿಸಿದೆ.
PSLV-C52/EOS-04 Mission: The countdown process of 25 hours and 30 minutes leading to the launch has commenced at 04:29 hours today. https://t.co/BisacQy5Of pic.twitter.com/sgGIiUnbvo
— ISRO (@isro) February 13, 2022
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ವೈನ್ ಮಾರಾಟ ನೀತಿ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ರದ್ದು
Published On - 6:36 pm, Sun, 13 February 22