ಜನವರಿ 21ಕ್ಕೆ ರೈತರ ಜತೆ ಮಾತುಕತೆ ನಡೆಸಲು ತೀರ್ಮಾನಿಸಿದ ತಜ್ಞರ ಸಮಿತಿ

ತಜ್ಞರ ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಕುರಿತು ವೈಯಕ್ತಿಕ ನಿಲುವುಗಳನ್ನು ಬದಿಗಿಟ್ಟು ಸುಪ್ರೀಂ ಕೋರ್ಟ್​ಗೆ ವರದಿ ಸಲ್ಲಿಸಲಿದೆ ತಜ್ಞರ ಸಮಿತಿಯ ಸದಸ್ಯ ಅನಿಲ್ ಘನಾವತ್ ತಿಳಿಸಿದ್ದಾರೆ.

ಜನವರಿ 21ಕ್ಕೆ ರೈತರ ಜತೆ ಮಾತುಕತೆ ನಡೆಸಲು ತೀರ್ಮಾನಿಸಿದ ತಜ್ಞರ ಸಮಿತಿ
ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿ ಸದಸ್ಯರು
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2021 | 5:41 PM

ದೆಹಲಿ: ಜನವರಿ 21ರಂದು ರೈತ ನಾಯಕರ ಜತೆ ಮೊದಲ ಸುತ್ತಿನ ಮಾತುಕತೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ರಚಿಸಿದ ತಜ್ಞರ ಸಮಿತಿಯ ಅನಿಲ್ ಘನಾವತ್ ತಿಳಿಸಿದ್ದಾರೆ. ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲದ ರೈತ ಮುಖಂಡರ ಜತೆ ವರ್ಚುವಲ್ ಕಾನ್ಫರೆನ್ಸ್​ ಮೂಲಕ ಮಾತುಕತೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.

ರೈತ ನಾಯಕರನ್ನು ಮಾತುಕತೆಗೆ ಒಪ್ಪಿಸುವುದೇ ನಮ್ಮೆದುರಿಗಿನ ಬಹುದೊಡ್ಡ ಸವಾಲು. ಮಾತುಕತೆಗೆ ಒಪ್ಪಿದರೆ ಖಂಡಿತವಾಗಿಯೂ ಒಮ್ಮತ ಮೂಡಿಸಲು ಶತಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ತಜ್ಞರ ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಕುರಿತು ವೈಯಕ್ತಿಕ ನಿಲುವುಗಳನ್ನು ಬದಿಗಿಟ್ಟು ಸುಪ್ರೀಂ ಕೋರ್ಟ್​ಗೆ ವರದಿ ಸಲ್ಲಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್ಭಟಿಸಿದ ರಾಹುಲ್ ಗಾಂಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಲೇ ಬಂದಿರುವ ರಾಹುಲ್ ಗಾಂಧಿ, ಇಂದು ಸಹ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಲು ಎಂದೇ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಸರ್ಕಾರ ಹವಣಿಸುತ್ತಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ಕಾಂಗ್ರೆಸ್ ಹೊರತಂದ ಕೃಷಿ ಕಾಯ್ದೆಗಳಿಂದ ಆಗುವ ಹಾನಿಗಳ ಕುರಿತು ಕಿರು ಪುಸ್ತಕವೊಂದನ್ನು ಅವರು ಬಿಡುಗಡೆಗೊಳಿಸಿದ್ದಾರೆ.

ಈಗಿನ ಸದಸ್ಯರು ತಜ್ಞರ ಸಮಿತಿಗೆ ಬೇಡ.. ಹೊಸ ಸದಸ್ಯರನ್ನು ನೇಮಿಸಿ: ಸುಪ್ರೀಂ ಕೋರ್ಟ್​ಗೆ ರೈತ ಸಂಘಟನೆ ಮನವಿ