ಕಲ್ಕಿ ಆಶ್ರಮದಲ್ಲಿ ಐಟಿ ದಾಳಿ ಅಂತ್ಯ, ಇಲ್ಲಿದೆ ಫೈನಲ್ ಟ್ಯಾಲಿ
ಹೈದ್ರಾಬಾದ್: ಕಳೆದ 5 ದಿನಗಳಿಂದ ಕಲ್ಕಿ ಆಶ್ರಮಕ್ಕೆ ಸಂಬಂಧಿಸಿದ ವಿವಿಧ ಶಾಖೆಗಳ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದೆ. 4 ಸಾವಿರ ಎಕರೆ ಜಮೀನು ಅಕ್ರಮವಾಗಿ ಖರೀದಿ ಮಾಡಿರುವುದು ಹಾಗೂ 800 ಕೋಟಿಗೂ ಅಧಿಕ ಹಣ ಸಂಗ್ರಹಣೆ ಮಾಡಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಐಟಿ ದಾಳಿ ವೇಳೆ ಸ್ವಯಂ ಘೋಷಿತ ದೇವ ಮಾನವ ಕಲ್ಕಿಯ ಕೋಟಿ ಕೋಟಿ ಅಕ್ರಮ ಆಸ್ತಿ ಬಯಲಾಗಿದೆ. ಕಲ್ಕಿಯ ಆಶ್ರಮದ ಮೇಲೆ ನಡೆದ ಐಟಿ ದಾಳಿ ವೇಳೆ ಬರೋಬ್ಬರಿ 26 ಕೋಟಿ ಮೌಲ್ಯದ […]
ಹೈದ್ರಾಬಾದ್: ಕಳೆದ 5 ದಿನಗಳಿಂದ ಕಲ್ಕಿ ಆಶ್ರಮಕ್ಕೆ ಸಂಬಂಧಿಸಿದ ವಿವಿಧ ಶಾಖೆಗಳ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದೆ. 4 ಸಾವಿರ ಎಕರೆ ಜಮೀನು ಅಕ್ರಮವಾಗಿ ಖರೀದಿ ಮಾಡಿರುವುದು ಹಾಗೂ 800 ಕೋಟಿಗೂ ಅಧಿಕ ಹಣ ಸಂಗ್ರಹಣೆ ಮಾಡಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ.
ಐಟಿ ದಾಳಿ ವೇಳೆ ಸ್ವಯಂ ಘೋಷಿತ ದೇವ ಮಾನವ ಕಲ್ಕಿಯ ಕೋಟಿ ಕೋಟಿ ಅಕ್ರಮ ಆಸ್ತಿ ಬಯಲಾಗಿದೆ. ಕಲ್ಕಿಯ ಆಶ್ರಮದ ಮೇಲೆ ನಡೆದ ಐಟಿ ದಾಳಿ ವೇಳೆ ಬರೋಬ್ಬರಿ 26 ಕೋಟಿ ಮೌಲ್ಯದ 88 ಕೆಜಿ ಚಿನ್ನ, ಡಾಲರ್ ರೂಪದಲ್ಲಿದ್ದ 18 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ, ಸುಮಾರು 5 ಕೋಟಿ ಮೌಲ್ಯದ 1,271 ಕ್ಯಾರೆಟ್ ವಜ್ರವನ್ನು ಎರಡು ದಿನಗಳ ಹಿಂದಷ್ಟೇ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಅನ್ನೋ ಮಾಹಿತಿ ಮೇರೆಗೆ ಆಂಧ್ರದ ವರದೈಪಾಲಂ, ಚೆನ್ನೈ, ಹೈದ್ರಾಬಾದ್, ತೆಲಂಗಾಣ ಹಾಗೂ ಬೆಂಗಳೂರಿನ ಒಟ್ಟು 40 ಸ್ಥಳಗಳಲ್ಲಿ ಬುಧವಾರದಿಂದ ಐಟಿ ಶೋಧ ನಡೆಯುತ್ತಿತ್ತು.
Published On - 5:53 pm, Mon, 21 October 19