ITBP: ಖಾಕಿ ತೊಟ್ಟು ತನ್ನ ಮುಂದೆ ಅಧಿಕಾರಿಯಾಗಿ ನಿಂತ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದ ಇನ್ಸ್ಪೆಕ್ಟರ್ ತಂದೆ

ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆ ನೂತನ ಅಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿದ್ದು, ಅದರಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅದೇ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ತಂದೆ ಮಗಳಿಗೆ ಸೆಲ್ಯೂಟ್ ಮಾಡಿರುವ ಚಿತ್ರ ಎಲ್ಲರ ಮನಸೆಳೆದಿದೆ.

ITBP: ಖಾಕಿ ತೊಟ್ಟು ತನ್ನ ಮುಂದೆ ಅಧಿಕಾರಿಯಾಗಿ ನಿಂತ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದ ಇನ್ಸ್ಪೆಕ್ಟರ್ ತಂದೆ
ಪುತ್ರಿ ದೀಕ್ಷಾ ಹಾಗೂ ತಂದೆ ಇನ್ಸ್ಪೆಕ್ಟರ್ ಕಮಲೇಶ್ ಕುಮಾರ್
Follow us
TV9 Web
| Updated By: shivaprasad.hs

Updated on:Aug 10, 2021 | 1:59 PM

ತಂದೆ ಕರ್ತವ್ಯ ಸಲ್ಲಿಸುತ್ತಿರುವಾಗಲೇ ಮಗಳು ಉನ್ನತ ಅಧಿಕಾರಿಯಾಗಿ ತಾನು ಸೇವೆ ಸಲ್ಲಿರುತ್ತಿರುವ ಇಲಾಖೆಯಲ್ಲೇ ಅಧಿಕಾರ ಸ್ವೀಕರಿಸಿದರೆ ತಂದೆ ಅಭಿನಂದನೆಯನ್ನುಹೇಗೆ ಹೇಳಬಹುದು? ಇಂಥದ್ದೊಂದು ಅಪರೂಪದ ವಿದ್ಯಾಮಾನಕ್ಕೆ ಮುಸ್ಸೂರಿ ಸಾಕ್ಷಿಯಾಗಿದ್ದು, ಅಧಿಕಾರ ಸ್ವೀಕರಿಸಿದ ಮಗಳಿಗೆ ಸೆಲ್ಯೂಟ್ ಹೊಡೆದು ತಂದೆ ಗೌರವ ಸಲ್ಲಿಸಿದ್ದಾರೆ. ಹಲವು ಪ್ರಥಮಗಳಿಗೆ ಸಾಕ್ಷಿಯಾದ ಈ ಸಮಾರಂಭದಲ್ಲಿ ಮೊಟ್ಟ ಮೊದಲ ಬಾರಿಗೆ ಈರ್ವರು ಮಹಿಳೆಯರು ಐಟಿಬಿಪಿಯಲ್ಲಿ ಅಧಿಕಾರಿಗಳ ಸ್ಥಾನಕ್ಕೂ ಏರಿದ್ದಾರೆ.

ಮುಸ್ಸೂರಿಯಲ್ಲಿರುವ ಭಾರತ- ಟಿಬೆಟ್ ಗಡಿ ಪೊಲೀಸ್ (Indo-Tibetan Border Police- ITBP) ಭಾನುವಾರದಂದು ಪ್ರಪ್ರಥಮ ಬಾರಿಗೆ ಮಹಿಳಾ ಅಧಿಕಾರಿಗಳನ್ನು ಯುದ್ಧ ಪಡೆಗೆ ನೇಮಿಸಿದೆ. ಐಟಿಬಿಪಿ ಅಧಿಕಾರಿಗಳ ತರಬೇತಿ ಕೇಂದ್ರದಿಂದ ಅರೆ ಸೈನಿಕ ಪಡೆಯ ಪ್ರಾರಂಭಿಕ ಮಟ್ಟದ ಅಧಿಕಾರಿಗಳ ಹುದ್ದೆಯಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಕೃತಿ ಮತ್ತು ದೀಕ್ಷಾ ಎಂಬ ಈರ್ವರು ಮಹಿಳೆಯರು ಅಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಪದವಿ ಪ್ರಧಾನ ಸಮಾರಂಭದ ಸಂದರ್ಭದಲ್ಲಿ ತೆಗೆಯಲಾದ ಫೊಟೊ ಮತ್ತು ವಿಡಿಯೊಗಳು ನೋಡುಗರ ಮನ ಸೆಳೆದಿದೆ. ಕಾರಣ, ದೀಕ್ಷಾ ಅವರು ಐಟಿಬಿಪಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಮಲೇಶ್ ಕುಮಾರ್ ಅವರ ಪುತ್ರಿ. ಅಧಿಕಾರ ಸ್ವೀಕರಿಸಿದ ಮಗಳಿಗೆ ಸೆಲ್ಯೂಟ್ ಮಾಡುತ್ತಿರುವ ತಂದೆಯ ಚಿತ್ರವನ್ನು ಐಟಿಬಿಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಸುಂದರ ಒಕ್ಕಣೆಯನ್ನೂ ನೀಡಿರುವ ಐಟಿಬಿಪಿ ‘ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್’ ಎಂದು ಬರೆದು ಟ್ವೀಟ್ ಮಾಡಿದೆ.

ಈ ಕುರಿತು ಐಟಿಬಿಪಿ ಮಾಡಿರುವ ಟ್ವೀಟ್ ಇಲ್ಲಿದೆ:

ಈ ವರ್ಷ ಒಟ್ಟು 53 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ 42 ಜನರನ್ನು ಅಸಿಸ್ಟೆಂಟ್ ಕಮಾಂಡೆಂಟ್ಸ್(ಜಿಡಿ) ಅಧಿಕಾರಿಗಳಾಗಿ ಹಾಗೂ 11 ಜನರನ್ನು ಅಸಿಸ್ಟೆಂಟ್ ಕಮಾಂಡೆಂಟ್ಸ್(ಇಂಜಿನಿಯರ್) ಅಧಿಕಾರಿಗಳಾಗಿ ನೇಮಿಸಲಾಗಿದೆ.

ಈ ಕುರಿತ ವಿಡಿಯೊ ವರದಿ ಇಲ್ಲಿದೆ:

ಸಮಾರಂಭದ ನಂತರ ಎಎನ್​ಐನೊಂದಿಗೆ ಮಾತನಾಡಿದ ದೀಕ್ಷಾ, ತಂದೆಯೇ ತನಗೆ ಆದರ್ಶ ಎಂದು ಹೇಳಿದ್ದಾರೆ. ಮತ್ತೊಬ್ಬ ಅಧಿಕಾರಿಯಾಗಿ ಆಯ್ಕೆಯಾಗಿರುವ ಪ್ರಕೃತಿ ಕೂಡಾ ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಪ್ರಕೃತಿ ಅವರ ತಂದೆ ಭಾರತೀಯ ವಾಯು ಸೇನೆಯ ಅಧಿಕಾರಿಯಾಗಿ ಈಗ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ:

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಪೇಟ, ಶಾಲುಗೆ ಬ್ರೇಕ್; ಹೂ ಗುಚ್ಚದ ಬದಲು ಕನ್ನಡ ಪುಸ್ತಕ ನೀಡಿ – ರಾಜ್ಯ ಸರ್ಕಾರ ಆದೇಶ

Ujjwala Scheme 2.0: ಉಜ್ವಲ ಯೋಜನೆಯ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

(ITBP Inspector saluting his Officer daughter tooks heartwarming reaction from people)

Published On - 1:55 pm, Tue, 10 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ