Jalandhar Bypoll Result: ಆಮ್ ಆದ್ಮಿ ಪಕ್ಷದ ಸುಶೀಲ್ ರಿಂಕುವಿಗೆ ಐತಿಹಾಸಿಕ ಗೆಲುವು
ಪಂಜಾಬ್ನ ಜಲಂಧರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕರಮ್ಜೀತ್ ಕೌರ್ ಚೌಧರಿ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಶೀಲ್ ಕುಮಾರ್ ರಿಂಕು 58,691 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಪಂಜಾಬ್ನ ಜಲಂಧರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕರಮ್ಜೀತ್ ಕೌರ್ ಚೌಧರಿ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಶೀಲ್ ಕುಮಾರ್ ರಿಂಕು 58,691 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸುಶೀಲ್ ಕುಮಾರ್ ರಿಂಕು ಅವರು3,02,279 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕರಮ್ಜೀತ್ ಕೌರ್ ಚೌಧರಿ 2,43,588 ಮತಗಳನ್ನು ಪಡೆದಿದ್ದಾರೆ.
ಒಡಿಶಾ ಉಪ ಚುನಾವಣೆ: ಒಡಿಶಾದ ಜಾರ್ಸುಗುಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಟಂಕಧರ್ ತ್ರಿಪಾಠಿ ವಿರುದ್ಧ 48,721 ಮತಗಳ ಅಂತರದಿಂದ ಬಿಜೆಡಿ ಪಕ್ಷದ ದೀಪಾಲಿ ದಾಸ್ ಅವರು ಗೆದ್ದಿದ್ದಾರೆ.
ಮತ್ತಷ್ಟು ಓದಿ: Uttar Pradesh: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಾ 17 ಮೇಯರ್ ಸ್ಥಾನಗಳು ಬಿಜೆಪಿ ತೆಕ್ಕೆಗೆ
ದೀಪಾಲಿ ದಾಸ್ ಒಟ್ಟು 1,07,198 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಟಂಕಧರ್ ಅವರು 58,477 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಯಿತು. ದೀಪಾಲಿ ದಾಸ್ ಅವರು ಒಡಿಶಾದ ಹಿಂದಿನ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಪುತ್ರಿಯಾಗಿದ್ದಾರೆ.
ರಾಮ್ಪುರ ಜಿಲ್ಲೆಯ ಸೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣಎಯಲ್ಲಿ ಎನ್ಡಿಎ ಮಿತ್ರ ಪಕ್ಷವಾದ ಆಪ್ನಾ ದಳದ ಶಫೀಕ್ ಅಹ್ಮದ್ ಅನ್ಸಾರಿ ಅವರು ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅನುರಾಧ ಚೌಹಾಣ್ ಅವರ ವಿರುದ್ಧ 8,724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಉತ್ತರ ಪ್ರದೇಶದ ಒಟ್ಟು 17 ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ 17 ನಗರ ಪಾಲಿಕೆಗಳು ಬಿಜೆಪಿ ತೆಕ್ಕೆಗೆ ಬಂದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ