ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಚಕಮಕಿ, ಪಾಕ್ ಒಳನುಸುಳುವಿಕೆ ಪ್ರಯತ್ನ ತಡೆದ ಭದ್ರತಾ ಪಡೆ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಅಂದ್ವಾನ್ ಸಾಗಮ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ಭಾನುವಾರ ಬೆಳಿಗ್ಗೆ ತಿಳಿಸಿದ್ದಾರೆ.
ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಅಂದ್ವಾನ್ ಸಾಗಮ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ಇಂದು ಬೆಳಿಗ್ಗೆ (ಮೇ.14) ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ನಂತ್‌ನಾಗ್‌ನ ಅಂದ್ವಾನ್ ಸಾಗಮ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದ್ದು. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಚರಣೆ ನಡೆಸುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಶನಿವಾರ ಮುಂಜಾನೆ, ಭಾರತೀಯ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೂಲಕ ಭಾರತದ ಗಡಿದಾಟಿ ಒಳಗೆ ಬರಲು ಪ್ರಯತ್ನ ಮಾಡಿದ್ದಾರೆ, ಆದರೆ ಅದನ್ನು ಭದ್ರತಾಪಡೆ ವಿಫಲಗೊಳಿಸಿದೆ. ಪಾಕಿಸ್ತಾನ ಹಾರಿಸಿದ ಕ್ವಾಡ್‌ಕಾಪ್ಟರ್ ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಎಂದು ಸೇನಾ ಮೂಲಗಳು ANI ಗೆ ತಿಳಿಸಿವೆ.
ಇದನ್ನೂ ಓದಿ:ಅಮರನಾಥ ಯಾತ್ರಾರ್ಥಿಗಳಿಗೆ ಪ್ರಮುಖ ಸೂಚನೆ ನೀಡಿದ ಜಮ್ಮು ಮತ್ತು ಕಾಶ್ಮೀರ ಸರ್ಕಾರ
ಮೂಲಗಳ ಪ್ರಕಾರ, ಭಯೋತ್ಪಾದಕರು ಮತ್ತು ಭಾರತೀಯ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಇಂದು ಮುಂಜಾನೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನ ನಡೆದಿದೆ. ಅದನ್ನು ಸೇನೆ ವಿಫಲಗೊಳಿಸಿದೆ. ಭಯೋತ್ಪಾದಕರು ಮತ್ತು ಅವರ ಸ್ವಂತ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪಾಕಿಸ್ತಾನ ಘಟನಾ ಸ್ಥಳದ ಮೇಲೆ ಕ್ವಾಡ್‌ಕಾಪ್ಟರ್ ಹಾರಿಸಲು ಪ್ರಯತ್ನಿಸಿದ್ದರೆ ಆದರೆ ಭದ್ರತಾ ಪಡೆಗಳು ಅವುಗಳನ್ನು ಗುಂಡಿನ ದಾಳಿ ನಡೆಸಿ ವಿಫಲಗೊಳಿಸಿದ್ದಾರೆ. ಮೇ 3 ರಂದು, ಭಾರತೀಯ ಸೇನೆಯು ಕುಪ್ವಾರದಲ್ಲಿ ಒಳಬರಲು ಮುಂದಾಗಿದ್ದು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ