ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಒಟ್ಟು 75 ಭಯೋತ್ಪಾದಕರನ್ನು ಹತ್ಯೆಗೈದಿವೆ.
ಹತರಾದ ಉಗ್ರರ ಪೈಕಿ ಶೇ.60ರಷ್ಟು ಮಂದಿ ಪಾಕಿಸ್ತಾನದವರು ಎಂದು ಸೇನಾ ಅಧಿಕಾರಿಗಳು ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ. ಇದರರ್ಥ ಭಾರತೀಯ ಭದ್ರತಾ ಪಡೆಗಳು ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡುತ್ತಿವೆ. ಇದುವರೆಗೆ ಕೊಲ್ಲಲ್ಪಟ್ಟ 75 ಮಂದಿಯಲ್ಲಿ ಹೆಚ್ಚಿನವರು ವಿದೇಶಿ ಭಯೋತ್ಪಾದಕರು.
ಇವುಗಳಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ನುಸುಳಲು ಪ್ರಯತ್ನಿಸುತ್ತಿದ್ದಾಗ ಹತರಾದ 17 ಭಯೋತ್ಪಾದಕರು ಮತ್ತು ಆಂತರಿಕ ಪ್ರದೇಶಗಳಲ್ಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ 26 ಭಯೋತ್ಪಾದಕರು ಸೇರಿದ್ದಾರೆ. ಹೆಚ್ಚುತ್ತಿರುವ ಭಯೋತ್ಪಾದಕ ಬೆದರಿಕೆಯನ್ನು ನಿಗ್ರಹಿಸುವಲ್ಲಿ ಭದ್ರತಾ ಪಡೆಗಳ ಕ್ರಮಗಳು ಮಹತ್ವದ ಹೆಜ್ಜೆಯಾಗಿದೆ.
ಜಮ್ಮು ಪ್ರದೇಶದ ಐದು ಜಿಲ್ಲೆಗಳಾದ ಜಮ್ಮು, ಉಧಂಪುರ, ಕಥುವಾ, ದೋಡಾ ಮತ್ತು ರಜೌರಿಗಳಲ್ಲಿ ಕೊಲ್ಲಲ್ಪಟ್ಟ 42 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಬಾರಾಮುಲ್ಲಾ, ಬಂಡಿಪೋರಾ, ಕುಪ್ವಾರ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ವಿದೇಶಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಮತ್ತಷ್ಟು ಓದಿ: ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಮೂವರು ಖಲಿಸ್ತಾನಿ ಉಗ್ರರ ಎನ್ಕೌಂಟರ್
ಜಮ್ಮು ಮತ್ತು ಕಾಶ್ಮೀರದ ಒಂಬತ್ತು ಜಿಲ್ಲೆಗಳಲ್ಲಿ ವಿದೇಶಿ ಭಯೋತ್ಪಾದಕರ ಉಪಸ್ಥಿತಿಯನ್ನು ಪತ್ತೆ ಮಾಡಿದೆ.
ಬಾರಾಮುಲ್ಲಾದಲ್ಲಿ ಅತಿ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ, ಬಾರಾಮುಲ್ಲಾದಲ್ಲಿರುವ ಹೆಚ್ಚಿನ ವಿದೇಶಿ ಭಯೋತ್ಪಾದಕರನ್ನು ಉರಿ ಸೆಕ್ಟರ್‌ನ ಸಬುರಾ ನಾಲಾ ಪ್ರದೇಶ, ಮುಖ್ಯ ಉರಿ ಸೆಕ್ಟರ್, ಕಮಲ್‌ಕೋಟ್ ಉರಿ ಎಲ್‌ಒಸಿ ಮತ್ತು ಒಳನಾಡಿನ ಚಕ್ ತಪ್ಪರ್
ನೌಪೋರಾ, ಹಡಿಪೋರಾ, ಸಾಗಿಪೋರಾ, ವಾಟರ್‌ಗಾಮ್ ಮತ್ತು ರಾಜ್‌ಪೋರ್‌ನಲ್ಲಿ ತಟಸ್ಥಗೊಳಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಕಡಿಮೆಯಾಗಿದೆ. ಮುಖ್ಯವಾಗಿ ಪಾಕಿಸ್ತಾನಿ ಭಯೋತ್ಪಾದಕರು ಈ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ. ಸ್ಥಳೀಯ ಭಯೋತ್ಪಾದಕ ಗುಂಪನ್ನು ಬಹುತೇಕ ನಾಶಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024 ರಲ್ಲಿ, ಜಮ್ಮು ಮತ್ತು ಕಾಶ್ಮೀರದಾದ್ಯಂತ 60 ಭಯೋತ್ಪಾದಕ ಘಟನೆಗಳಲ್ಲಿ 32 ನಾಗರಿಕರು ಮತ್ತು 26 ಭದ್ರತಾ ಪಡೆಗಳ ಸಿಬ್ಬಂದಿ ಸೇರಿದಂತೆ ಒಟ್ಟು 122 ಜನರು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ