Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿರು ಗೋಡೆಗೆ ಕೇಸರಿ ಬಣ್ಣ ಬಳಿದ ಬಿಜೆಪಿ ಸಂಸದೆ, ಹುಟ್ಟಿತೊಂದು ಹೊಸ ವಿವಾದ

ಹಳದಿ ಬಣ್ಣದ ಗೋಡೆಯ ಮೇಲೆ ಹಸಿರು ಬಣ್ಣ ಹಚ್ಚಿ ಹೂವಿನಿಂದ ಶೃಂಗಾರ ಮಾಡಿದ್ದ ಗೋಡೆಯನ್ನು ಬಿಜೆಪಿ ಸಂಸದೆ ಮೇಧಾ ಕೇಸರಿ ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿದ್ದಾರೆ. ತಿಲಕ್ ರಸ್ತೆಯ ಗೋಡೆಯ ಮೇಲೆ ಏಕಾಏಕಿ ಹಸಿರು ಬಣ್ಣ ಹಚ್ಚಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿ ಮೇಧಾ ಗೋಡೆಗೆ ಕೇಸರಿ ಬಣ್ಣ ಹಚ್ಚಿ ಗಣೇಶನ ಫೋಟೊವನ್ನು ಇರಿಸಿದ್ದಾರೆ.

ಹಸಿರು ಗೋಡೆಗೆ ಕೇಸರಿ ಬಣ್ಣ ಬಳಿದ ಬಿಜೆಪಿ ಸಂಸದೆ, ಹುಟ್ಟಿತೊಂದು ಹೊಸ ವಿವಾದ
ಸಂಸದೆ ಮೇಧಾ
Follow us
ನಯನಾ ರಾಜೀವ್
|

Updated on: Dec 30, 2024 | 9:13 AM

ಪುಣೆಯಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದೆ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಹಸಿರು ಗೋಡೆಗೆ ಕೇಸರಿ ಬಣ್ಣ ಬಳಿದಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ನಾಯಕಿಯ ಕಾರ್ಯವೈಖರಿಯನ್ನು ಉದ್ಧವ್ ಸೇನಾ ನಾಯಕ ಪ್ರಶ್ನಿಸಿದ್ದಾರೆ. ಪುಣೆ ನಗರದ ಸದಾಶಿವ ಪೇಠೆಯಲ್ಲಿ ಗೋಡೆಗೆ ಹಸಿರು ಬಣ್ಣ ಬಳಿದು ಹೂವುಗಳನ್ನು ಹಾಕಲಾಗಿತ್ತು.

ಇದು ಗಮನಕ್ಕೆ ಬಂದ ತಕ್ಷಣ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಆ ಜಾಗಕ್ಕೆ ತೆರಳಿ ಹಸಿರು ಬಣ್ಣದ ಮೇಲೆ ಕೇಸರಿ ಬಣ್ಣ ಬಳಿದು ಗಣೇಶನ ಫೋಟೊ ಇರಿಸಿದ್ದಾರೆ. ಜಾಗೃತ ಹಿಂದೂಗಳಾದ ನಾವು ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರತ್ತ ಗಮನ ಹರಿಸಬೇಕು ಎಂದು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಮನವಿ ಮಾಡಿದ್ದಾರೆ. ಈ ಸ್ಥಳದಲ್ಲಿ ಕೇಸರಿ ಬಣ್ಣ ಬಳಿದಿರುವ ಫೋಟೋಗಳು ಮತ್ತು ಸಂಬಂಧಿತ ಪೋಸ್ಟ್ ಅನ್ನು ಮೇಧಾ ಕುಲಕರ್ಣಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಜ್ಞಾನಪ್ರಬೋಧಿನಿ ಶಾಲೆಯ ಮುಂದಿನ ರಸ್ತೆಗೆ ಹಸಿರು ಬಣ್ಣ ಬಳಿದು ಹೂಮಾಲೆ, ಹೂ, ಅಗರಬತ್ತಿಗಳಿಂದ ಪೂಜೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಹಾಗೂ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಸೇರಿದಂತೆ ಕೆಲವರು ಹಸಿರು ಬಣ್ಣ ಬಳಿದಿದ್ದ ಗೋಡೆಗೆ ಮತ್ತೆ ಕೇಸರಿ ಬಣ್ಣ ಬಳಿದು ಗಣೇಶನ ಫೋಟೋ ಹಾಕಿದ್ದರು. ಈ ಪ್ರಕರಣ ಪುಣೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ .

ಮತ್ತಷ್ಟು ಓದಿ:ಬೆಳಗಾವಿ: ‘ಜೈ ಮಹಾರಾಷ್ಟ್ರ’ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಎಂಇಎಸ್​ ಪುಂಡರ ಬಂಧನ

ಇದು ಪಿತೂರಿಯ ಭಾಗ ಎಂದು ಬಣ್ಣಿಸಿದ ಬಿಜೆಪಿ ಸಂಸದರು, ಪುಣೆಯಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಇಂತಹ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಿವೆ. ಪ್ರಜ್ಞಾಪೂರ್ವಕ ಹಿಂದೂವಾಗಿ ನಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳೋಣ ಎಂದಿರುವ ಸಂಸದೆ ಇದರೊಂದಿಗೆ ತಮ್ಮ ಫೋನ್ ನಂಬರ್ ಕೂಡ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್