ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್

|

Updated on: Dec 09, 2023 | 6:16 PM

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಹುಡುಗಿಯರು ಸೈಕಲ್‌ಗಾಗಿ ಹಣವನ್ನು ಸ್ವೀಕರಿಸಿದ್ದಾರೆಯೇ ಎಂದು ಕೇಳಿದರು, ಅದಕ್ಕೆ ಹುಡುಗಿಯರು “ನಹಿ ಮಿಲಾ” ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ ಸೊರೆನ್ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯ ಕಡೆಗೆ ತಿರುಗಿ ಸಂಕ್ಷಿಪ್ತ ಚರ್ಚೆ ನಡೆಸಿ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್
ಹೇಮಂತ್ ಸೊರೆನ್
Follow us on

ದೆಹಲಿ ಡಿಸೆಂಬರ್ 09: ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರು ರಾಜ್ಯದಲ್ಲಿ ಆಡಳಿತಾರೂಢ ಜೆಎಂಎಂ (JMM) ಸರ್ಕಾರವು ಪ್ರಾರಂಭಿಸಿರುವ ಕಲ್ಯಾಣ ಯೋಜನೆಗಳ ಬಗ್ಗೆ ಶಾಲಾ ವಿದ್ಯಾರ್ಥಿನಿಯರನ್ನು ವಿಚಾರಿಸಿ ರಿಯಾಲಿಟಿ ಚೆಕ್ ಮಾಡಿದ್ದಾರೆ. ಬುಡಕಟ್ಟು ಕಲ್ಯಾಣ ಯೋಜನೆಯಡಿ ಸೈಕಲ್‌ಗಳಿಗಾಗಿ ವಿತರಿಸಲಾದ ನಿಧಿಯ ಸೊರೆನ್ ಶಾಲಾ ವಿದ್ಯಾರ್ಥಿನಿಯರನ್ನು ಕೇಳಿದಾಗ ಅವರು “ನಹಿ ಮಿಲಾ (ಸಿಕ್ಕಿಲ್ಲ)” ಎಂದಿದ್ದಾರೆ. ಜಾರ್ಖಂಡ್ ಸಿಎಂ ಶಾಲಾ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ, ಜಾರ್ಖಂಡ್ ಸಿಎಂ ಹುಡುಗಿಯರು ಸೈಕಲ್‌ಗಾಗಿ ಹಣವನ್ನು ಸ್ವೀಕರಿಸಿದ್ದಾರೆಯೇ ಎಂದು ಕೇಳಿದರು, ಅದಕ್ಕೆ ಹುಡುಗಿಯರು “ನಹಿ ಮಿಲಾ” ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ ಸೊರೆನ್ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯ ಕಡೆಗೆ ತಿರುಗಿ ಸಂಕ್ಷಿಪ್ತ ಚರ್ಚೆ ನಡೆಸಿ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

“ಜಾ ರಹಾ ಹೈ. ಯೇ ಪೈಸಾ ಆಪ್ಕೋ ಯಹಾ ನಹೀ ಸೀಧೆ ಆಪ್ಕೆ ಖಾತಾ ಮೆ ಸೀಧೆ ಜಾಯೇಗಾ (ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು) ಎಂದು ಸೊರೆನ್ ಹೇಳಿದ್ದಾರೆ.


ಸಾವಿತ್ರಿ ಬಾಯಿ ಫುಲೆ ಯೋಜನೆಯಿಂದ ಏನಾದರೂ ಪ್ರಯೋಜನ ಪಡೆದಿದ್ದೀರಾ ಎಂದು ಕೇಳಿದಾಗಲೂ ವಿದ್ಯಾರ್ಥಿಗಳಿಂದ ಅವರಿಗೆ ಸಿಕ್ಕಿದ ಉತ್ತರ ಇಲ್ಲ ಎಂಬುದಾಗಿತ್ತು. ಸಿಎಂ ಮುಜುಗರಕ್ಕೆ ಒಳಗಾಗಿದ್ದು, ಕಾರಣ ತಿಳಿಯಲು ಅಧಿಕಾರಿಯೊಬ್ಬರನ್ನು ವೇದಿಕೆಗೆ ಕರೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಹಣ ಪಡೆದವರಿಗೆ ಮಾತ್ರ ಯೋಜನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಮನಿಗೆ ಸಡ್ಡು ಹೊಡೆದ ಸ್ನೇಹ! ಕಣ್ಣೆದುರೇ ಇಳಿಜಾರಿನಲ್ಲಿ ಜಾರಿದ ಕಾರು, ಗೆಳೆಯನನ್ನು ಉಳಿಸಿಕೊಳ್ಳಲು ಉಳಿದವರು ಮಾಡಿದ್ದೇನು?

‘ಸಾವಿತ್ರಿಬಾಯಿ ಫುಲೆ ಕಿಶೋರಿ ಸಮೃದ್ಧಿ ಯೋಜನೆ’ ಅಡಿಯಲ್ಲಿ ರಾಜ್ಯ ಸರ್ಕಾರವು 8 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ರೂಪಾಯಿ 20,000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ಪ್ರತಿ ವರ್ಗದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಅನುದಾನದ ರೂಪದಲ್ಲಿ ನೀಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ