Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಕೋಟಿ ರೂ. ನಗದು ಪತ್ತೆ: ಜಾರ್ಖಂಡ್​ ಸಚಿವ ಆಲಂಗೀರ್​ ಆಲಂ ಆಪ್ತ ಸಂಜೀವ್​ ಲಾಲ್ ಬಂಧನ

ಜಾರ್ಖಂಡ್​ ಸಚಿವ ಆಲಂಗೀರ್​ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್​ ಲಾಲ್ ಹಾಗೂ ಸೇವಕನ ಮನೆ ಮೇಲೆ ಇಡಿ ದಾಳಿ ನಡೆಸಿ 30 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ. ನಂತರ ಇತರೆ ಸ್ಥಳಗಳಲ್ಲಿಯೂ ದಾಳಿ ನಡೆಸಿ 3 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.

30 ಕೋಟಿ ರೂ. ನಗದು ಪತ್ತೆ: ಜಾರ್ಖಂಡ್​ ಸಚಿವ ಆಲಂಗೀರ್​ ಆಲಂ ಆಪ್ತ ಸಂಜೀವ್​ ಲಾಲ್ ಬಂಧನ
ಹಣ
Follow us
ನಯನಾ ರಾಜೀವ್
|

Updated on:May 07, 2024 | 8:11 AM

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್​ನ ಸಚಿವ ಆಲಂಗೀರ್ ಆಲಮ್​ ಆಪ್ತ ಸಂಜೀವ್​ ಲಾಲ್(Sanjeev Lal)​ ಅವರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್‌ ಅವರ ಮನೆ ಸೇರಿದಂತೆ ದಾಳಿ ನಡೆಸಲಾಗಿದೆ. ಸಂಜೀವ್ ಲಾಲ್ ಅವರ ಮನೆಗೆಲಸದವನ ಬಳಿ ಅಂದಾಜು 20 ರಿಂದ 30 ಕೋಟಿ ರೂ ಮೊತ್ತದಷ್ಟು ಭಾರಿ ಮೊತ್ತದ ನಗದು ಪತ್ತೆಯಾಗಿತ್ತು.

ಕಾಂಗ್ರೆಸ್ ನಾಯಕ ಆಲಂಗೀರ್ ಅಲಂ ಅವರು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ.

ಸಂಜೀವ್​ ಲಾಲ್ ಹಾಗೂ ಮನೆ ಕೆಲಸಗಾರ ಜಹಾಂಗೀರ್ ಆಲಂ ಅವರನ್ನು ಕೂಡ ಬಂಧಿಸಿದೆ. ಇಷ್ಟು ದೊಡ್ಡ ಮೊತ್ತದ ನಗದು ಪತ್ತೆಯಾದ ಬಳಿಕ ನೋಟುಗಳನ್ನು ಎಣಿಸಲು ಬ್ಯಾಂಕ್​ ನೌಕರರನ್ನು ನೋಟಿ ಎಣಿಕೆ ಯಂತ್ರಗಳೊಂದಿಗೆ ಕರೆಸಲಾಯಿತು. ಈ ವೇಳೆ ಒಟ್ಟು 6 ಕಡೆ ದಾಳಿ ನಡೆದಿತ್ತು. ಒಟ್ಟು 35.23 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.

ಮತ್ತಷ್ಟು ಓದಿ: ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನಗದು, ಹಣ ಎಣಿಸಿ ಎಣಿಸಿ ಸುಸ್ತಾದ ಇಡಿ ಅಧಿಕಾರಿಗಳು

ಆಲಂಗೀರ್ ಆಲಂ ಯಾರು? ಆಲಂಗೀರ್ ಆಲಂ ಪಾಕುರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್​ ಶಾಸಕರಾಗಿದ್ದಾರೆ ಮತ್ತು ಪ್ರಸ್ತುತ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಗ್ರಾಮೀಣಾಭಿವೃದ್ಧಿಸಚಿವರಾಗಿದ್ದಾರೆ. ಇದಕ್ಕೂ ಮೊದಲು ಆಲಂಗೀರ್ ಆಲಂ ಅವರು ಅಕ್ಟೋಬರ್ 20, 2006ರಿಂದ 12 ಡಿಸೆಂಬರ್ 2009ರವರೆಗೆ ಜಾರ್ಖಂಡ್​ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2000ರಲ್ಲಿ ಮೊದಲ ಬಾರಿಗೆ ಶಾಸಕರಾದರು ಮತ್ತು ನಂತರ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:09 am, Tue, 7 May 24