ಜೋಧ್‌ಪುರ: ಸೋಮವಾರ ತಡರಾತ್ರಿ ಜೋಧ್‌ಪುರದ (Jodhpur) ಜಲೋರಿ ಗೇಟ್ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯ ಮೇಲೆ ಧ್ವಜಾರೋಹಣ ಮಾಡುವ ಕುರಿತು ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯ ಬಳಿಕ ಕಲ್ಲು ತೂರಾಟ ಕೂಡ ನಡೆದಿದೆ. ಈ ಘಟನೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದು, ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು (Internet Service) ಸ್ಥಗಿತಗೊಳಿಸಲಾಗಿದೆ.
ಸೋಮವಾರ ರಾತ್ರಿ 11.10ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈದ್ ದಿನದಂದೇ ಪರಶುರಾಮ ಜಯಂತಿಯಂದು ಹಾಕಲಾಗಿದ್ದ ಧ್ವಜಗಳ ವಿಚಾರವಾಗಿ ಘರ್ಷಣೆ ಆರಂಭವಾಗಿದೆ. ನಮಾಜ್ ಮಾಡುವ ಪ್ರದೇಶದ ಬಳಿ ಪರಶುರಾಮನ ಧ್ವಜವನ್ನು ಹಾರಿಸಲಾಗಿತ್ತು. ಸ್ಥಳೀಯ ಮುಸ್ಲಿಂ ಸಮುದಾಯದವರು ಈದ್ ಸಂದರ್ಭದಲ್ಲಿ ಈ ಧ್ವಜವನ್ನು ತೆಗೆದುಹಾಕುವ ಬಗ್ಗೆ ವಿವಾದ ಉಂಟಾಗಿದೆ ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.
Rajasthan: Ruckus in Jodhpur’s Jalori Gate area pic.twitter.com/6IGhmVmmPX
— ANI MP/CG/Rajasthan (@ANI_MP_CG_RJ) May 3, 2022
ಈ ಪ್ರದೇಶವು ಈದ್ಗಾದ ಪಕ್ಕದಲ್ಲಿರುವುದರಿಂದ ಮತ್ತು ಈದ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮಾಜ್ ಮಾಡುವ ಸಾಧ್ಯತೆಯಿರುವುದರಿಂದ ಪೊಲೀಸ್ ಕಮಿಷನರ್ ಮಧ್ಯಪ್ರವೇಶಿಸಿ ಸ್ಥಳದ ಸಮೀಪಕ್ಕೆ ಜನರನ್ನು ಬರಲು ಬಿಡಲಿಲ್ಲ. ಆದರೆ, ಜನರನ್ನು ಚದುರಿಸುವಾಗ ಉದ್ವಿಗ್ನತೆ ಹೆಚ್ಚಾಗಿ, ಕಲ್ಲು ತೂರಾಟ ನಡೆಯಿತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Tension prevails in #Jodhpur in #Rajasthan after #violent clashes between two communities #Congress #Jodhpurclashes pic.twitter.com/EOW0fXXzcV
— Paras Bisht (@ParasBisht15) May 3, 2022
ಜೋಧ್‌ಪುರದ ಜಲೋರಿ ಗೇಟ್‌ನಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಉದ್ವಿಗ್ನತೆ ದುರದೃಷ್ಟಕರವಾಗಿದೆ. ಆ ಸ್ಥಳದಲ್ಲಿ ಹೇಗಾದರೂ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಆಡಳಿತಕ್ಕೆ ಸೂಚನೆ ನೀಡಿದ್ದೇನೆ. ಜೋಧ್‌ಪುರ, ಮಾರ್ವಾರ್‌ನಲ್ಲಿನ ಪ್ರೀತಿ ಮತ್ತು ಸಹೋದರತ್ವದ ಸಂಪ್ರದಾಯವನ್ನು ಗೌರವಿಸಿ, ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಾಯ ಮಾಡಲು ನಾನು ಎಲ್ಲಾ ಕಡೆಯವರಿಗೆ ಮನವಿ ಮಾಡುತ್ತೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
जालौरी गेट, जोधपुर पर दो गुटों में झड़प से तनाव पैदा होना दुर्भाग्यपूर्ण है। प्रशासन को हर कीमत पर शांति एवं व्यवस्था बनाए रखने के निर्देश दिए हैं।
— Ashok Gehlot (@ashokgehlot51) May 3, 2022
ಸೋಮವಾರ ರಾತ್ರಿ ಧಾರ್ಮಿಕ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಮುಖಾಮುಖಿಯಾದ ನಂತರ ರಾಜಸ್ಥಾನದ ಜೋಧ್‌ಪುರ ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈದ್-ಉಲ್-ಫಿತರ್ ಮತ್ತು ಅಕ್ಷಯ ತೃತೀಯ ಹಬ್ಬಗಳ ಮೊದಲು ಒಂದು ಸಮುದಾಯದ ಕೆಲವು ದುಷ್ಕರ್ಮಿಗಳು ಬಲ್ಮುಕಂದ್ ಬಿಸ್ಸಾ ವೃತ್ತದಲ್ಲಿ ಇಸ್ಲಾಮಿಕ್ ಧ್ವಜವನ್ನು ಹಾಕಿ ಕೇಸರಿ ಧ್ವಜವನ್ನು ತೆಗೆದ ನಂತರ ಘರ್ಷಣೆಗಳು ನಡೆದಿವೆ. ಈ ಗಲಾಟೆಯಲ್ಲಿ ಹಲವು ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಈದ್ ನಮಾಝ್ ಮುಗಿದ ಕೂಡಲೇ ಅಲ್ಲಾಹು ಅಕ್ಬರ್ ಘೋಷಣೆ ಮೊಳಗಿತು. ಇದರಿಂದ ಜಲೋರಿ ಗೇಟ್ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಂಟಾಯಿತು. ಇದು ಕಲ್ಲು ತೂರಾಟಕ್ಕೆ ಕಾರಣವಾಯಿತು. ನಮಾಜ್ ಮಾಡಿದ ನಂತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಧ್ವಂಸಗೊಳಿಸಿದರು. ವಸತಿ ಪ್ರದೇಶಗಳಲ್ಲೂ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಹಲವಾರು ಅಂಗಡಿಗಳು ಮತ್ತು ಶೋರೂಂಗಳಿಗೂ ಹಾನಿಯಾಗಿದೆ.