AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್​ಗೆ ಹೊರಟಿದ್ದ ಪತ್ರಕರ್ತೆ ರಾಣಾ ಅಯೂಬ್​​​ಗೆ ಏರ್​ಪೋರ್ಟ್​​ನಲ್ಲಿ ತಡೆ; ಆ ಕ್ಷಣದಲ್ಲಿ ಬಂತು ಇ.ಡಿ.ಯಿಂದ ಸಮನ್ಸ್​

ಮಾರ್ಚ್​ 29ರಂದು International Center for Journalists ಟ್ವಿಟರ್ ಅಕೌಂಟ್​​ನಲ್ಲಿ ರಾಣಾ ಅಯೂಬ್​ ಫೋಟೊ ಹಾಕಿ, ಮಹಿಳಾ ಪತ್ರಕರ್ತರ ಮೇಲೆ ಆನ್​​ಲೈನ್​​ ಮೂಲಕವೂ ದೌರ್ಜನ್ಯ ಎಂಬ ವಿಚಾರದ ಬಗ್ಗೆ ಮಾತನಾಡಲು ನಾವು ರಾಣಾ ಅಯೂಬ್​ರನ್ನು ಯುಕೆಗೆ ಕರೆಸುತ್ತಿದ್ದೇವೆ ಎಂದು ಹೇಳಿತ್ತು.

ಲಂಡನ್​ಗೆ ಹೊರಟಿದ್ದ ಪತ್ರಕರ್ತೆ ರಾಣಾ ಅಯೂಬ್​​​ಗೆ ಏರ್​ಪೋರ್ಟ್​​ನಲ್ಲಿ ತಡೆ; ಆ ಕ್ಷಣದಲ್ಲಿ ಬಂತು ಇ.ಡಿ.ಯಿಂದ ಸಮನ್ಸ್​
ರಾಣಾ ಅಯೂಬ್​
TV9 Web
| Edited By: |

Updated on: Mar 30, 2022 | 1:44 PM

Share

ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿರುವ ಪತ್ರಕರ್ತೆ ರಾಣಾ ಅಯೂಬ್ (Rana Ayyub)​​ರನ್ನು ಲಂಡನ್​ಗೆ ಹೋಗದಂತೆ ತಡೆಯಲಾಗಿದೆ. ರಾಣಾ ಅವರು ಲಂಡನ್​​ನಲ್ಲಿ ನಡೆಯಲಿರುವ ಇಂಟರ್​ನ್ಯಾಶನಲ್​ ಸೆಂಟರ್​ ಫಾರ್​ ಜರ್ನಲಿಸ್ಟ್ಸ್​ (ICJ) ಕಾರ್ಯಕ್ರಮದಲ್ಲಿ ಭಾಷಣ ಮಾಡಲು ತೆರಳುವವರಿದ್ದರು. ಹೀಗಾಗಿ ಮಾರ್ಚ್​ 29ರಂದು ಮುಂಬೈ ಏರ್​ಪೋರ್ಟ್​ಗೆ ಬಂದಿದ್ದರು. ಆದರೆ ಅವರು ಫ್ಲೈಟ್​ ಹತ್ತಲು ಕೆಲವೇ ಹೊತ್ತಿರುವಾಗ ಇ.ಡಿ. ಅವರಿಗೆ ಸಮನ್ಸ್​ ಕಳಿಸಿದೆ. ಈ ಬಗ್ಗೆ ರಾಣಾ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ನಾನು ಲಂಡನ್​ಗೆ ಯಾಕಾಗಿ ಹೋಗುತ್ತೇನೆ ಎಂಬುದನ್ನು ಮುಂಚಿತವಾಗಿಯೇ ಬಹಿರಂಗಪಡಿಸಿದ್ದೆ. ಹೀಗಿದ್ದಾಗ್ಯೂ ನಾನು ಏರ್​ಪೋರ್ಟ್​ಗೆ ಬಂದ ಮೇಲೆ ಇ.ಡಿ. ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಾರ್ಚ್​ 29ರಂದು International Center for Journalists ಟ್ವಿಟರ್ ಅಕೌಂಟ್​​ನಲ್ಲಿ ರಾಣಾ ಅಯೂಬ್​ ಫೋಟೊ ಹಾಕಿ, ಮಹಿಳಾ ಪತ್ರಕರ್ತರ ಮೇಲೆ ಆನ್​​ಲೈನ್​​ ಮೂಲಕವೂ ದೌರ್ಜನ್ಯ ಎಂಬ ವಿಚಾರದ ಬಗ್ಗೆ ಮಾತನಾಡಲು ನಾವು ರಾಣಾ ಅಯೂಬ್​ರನ್ನು ಯುಕೆಗೆ ಕರೆಸುತ್ತಿದ್ದೇವೆ ಎಂದು ಹೇಳಿತ್ತು. ಅದಕ್ಕಾಗಿ ಹೊರಟಿದ್ದ ತಮ್ಮನ್ನು ಮುಂಬೈ ಏರ್​ಪೋರ್ಟ್​ನಲ್ಲಿ ತಡೆಯುತ್ತಿದ್ದಂತೆ ಇದೇ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡ ರಾಣಾ, ಲಂಡನ್​​ಗೆ ಹೊರಟಿದ್ದ ನನ್ನನ್ನು ಮುಂಬೈ ಏರ್​ಪೋರ್ಟ್​​ನಲ್ಲಿ ತಡೆಯಲಾಯಿತು. ನಾನು ಲಂಡನ್​​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಕಳೆದ ಒಂದು ವಾರದ ಹಿಂದೆಯೇ ತಿಳಿಸಿದ್ದೇನೆ. ಆದರೆ ಇ.ಡಿ.ಯವರು ಏನೂ ಹೇಳಲಿಲ್ಲ. ಆದರೆ ನಾನು ಮುಂಬೈ ಏರ್​ಪೋರ್ಟ್​ಗೆ ಬಂದಮೇಲೆ ನನ್ನನ್ನು ತಡೆಯಲಾಯಿತು ಮತ್ತು ಅರೆಕ್ಷಣದಲ್ಲಿ ನನ್ನ ಇನ್​ಬಾಕ್ಸ್​ಗೆ ಇ.ಡಿ.ಯಿಂದ ಸಮನ್ಸ್​ ಬಂತು ಎಂದು ತಿಳಿಸಿದ್ದಾರೆ.

ಇನ್ನು ಇ.ಡಿ.ಅಧಿಕಾರಿಗಳು ರಾಣಾ ಅಯೂಬ್​​ರಿಗೆ ಏಪ್ರಿಲ್​ 1ರಂದು ವಿಚಾಚರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.  ರಾಣಾ ವಿರುದ್ಧ ಕಳೆದ ಸೆಪ್ಟೆಂಬರ್​​ನಲ್ಲಿ ಉತ್ತರ ಪ್ರದೇಶ ಘಾಜಿಯಾಬಾದ್​ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ.  ಹಿಂದು ಐಟಿ ಸೆಲ್​  ಎಂಬ ಎನ್​ಜಿಒದ ಸಂಸ್ಥಾಪಕರು, ಘಾಜಿಯಾಬಾದ್​ನ ಇಂದಿರಾಪುರಂ ನಿವಾಸಿಯಾಗಿರುವ ವಿಕಾಸ್​ ಸಾಂಕೃತ್ಯಾಯನ್ ಎಂಬುವರು ರಾಣಾ ವಿರುದ್ಧ ದೂರು ನೀಡಿದ್ದರು. 2020-2021ರ ಅವಧಿಯಲ್ಲಿ ರಾಣಾ ದತ್ತಿ ಉದ್ದೇಶಗಳ ಕಾರಣ ನೀಡಿ ಆನ್​ಲೈನ್​ ಮೂಲಕ ಸುಮಾರು 2.69 ಕೋಟಿ ರೂಪಾಯಿಯನ್ನು ಆನ್​​ಲೈನ್​ ವೇದಿಕೆ ಕೆಟ್ಟೋ ಮೂಲಕ ಸಂಗ್ರಹಿಸಿದ್ದಾರೆ. ಇದರಲ್ಲಿ ಕೆಲವು ಘಟಕಗಳ ಹೆಸರಲ್ಲಿ ನಕಲಿ ಬಿಲ್​ಗಳನ್ನು ಸಿದ್ಧಪಡಿಸಿದ್ದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ಇ.ಡಿ.ಕೈಗೆತ್ತಿಕೊಂಡಿದ್ದು, ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?

ಗಾಜಿಯಾಬಾದ್ ಪ್ರಕರಣ: ಪತ್ರಕರ್ತೆ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು

ಕಾರವಾರದ ಕಡಲ ತೀರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ
ಕಾರವಾರದ ಕಡಲ ತೀರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ