ನಿಜವಾದ ಭಾರತೀಯ ಯಾರು, ಯಾರಲ್ಲ ಎಂದು ನಿರ್ಧರಿಸುವುದು ನ್ಯಾಯಮೂರ್ತಿಗಳ ಕೆಲಸವಲ್ಲ: ಪ್ರಿಯಾಂಕಾ
ನಿಜವಾದ ಭಾರತೀಯ ಯಾರು, ಯಾರಲ್ಲ ಎಂಬುದನ್ನು ನಿರ್ಧರಿಸುವುದು ನ್ಯಾಯಮೂರ್ತಿ ಅಥವಾ ನ್ಯಾಯಾಲಯದ ಕೆಲಸವಲ್ಲ, ನನ್ನ ಸಹೋದರ ಸೇನೆಯನ್ನು ಗೌರವಿಸುತ್ತಾನೆ’’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಹೇಳಿದ್ದಾರೆ. ಭಾರತೀಯ ಸೇನೆ ವಿರುದ್ಧ ಸಂಸದ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿ, ನೀವು ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಹೇಳಿತ್ತು.

ನವದೆಹಲಿ, ಆಗಸ್ಟ್ 05: ‘‘ನಿಜವಾದ ಭಾರತೀಯ ಯಾರು, ಯಾರಲ್ಲ ಎಂಬುದನ್ನು ನಿರ್ಧರಿಸುವುದು ನ್ಯಾಯಮೂರ್ತಿ ಅಥವಾ ನ್ಯಾಯಾಲಯದ ಕೆಲಸವಲ್ಲ, ನನ್ನ ಸಹೋದರ ಸೇನೆಯನ್ನು ಗೌರವಿಸುತ್ತಾನೆ’’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಹೇಳಿದ್ದಾರೆ. ಭಾರತೀಯ ಸೇನೆ ವಿರುದ್ಧ ಸಂಸದ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿ, ನೀವು ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಹೇಳಿತ್ತು.
ಚೀನಾ 2000 ಚದರ ಕಿಲೋಮೀಟರ್ ಭಾರತೀಯ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನೀವು ನಿಜವಾದ ಭಾರತೀಯರಾಗಿದ್ದರೆ, ನೀವು ಹಾಗೆ ಹೇಳುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಈಗ ಪ್ರಿಯಾಂಕಾ ಗಾಂಧಿ ನ್ಯಾಯಾಲಯದ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ನಿಜವಾದ ಭಾರತೀಯ ಯಾರು ಮತ್ತು ಯಾರು ಅಲ್ಲ ಎಂಬುದನ್ನು ನ್ಯಾಯಮೂರ್ತಿಗಳು ನಿರ್ಧರಿಸಲು ಸಾಧ್ಯವಿಲ್ಲ ,ಇದು ಅವರ ವ್ಯಾಪ್ತಿಗೆ ಬರುವುದಿಲ್ಲ.
ಮತ್ತಷ್ಟು ಓದಿ: ನಿಜವಾದ ಭಾರತೀಯ ಎಂದೂ ಈ ರೀತಿ ಮಾತನಾಡೋದಿಲ್ಲ: ಸೇನೆ ಬಗ್ಗೆ ರಾಹುಲ್ ಹೇಳಿಕೆಗೆ ಸುಪ್ರೀಂ ಛೀಮಾರಿ
ರಾಹುಲ್ ಗಾಂಧಿ ಅವರ ಹೃದಯದಲ್ಲಿ ಸೈನ್ಯದ ಬಗ್ಗೆ ಗೌರವ ಮತ್ತು ಮೆಚ್ಚುಗೆ ಇದೆ. ನನ್ನ ಸಹೋದರ ಎಂದಿಗೂ ಸೈನ್ಯದ ವಿರುದ್ಧ ಮಾತನಾಡುವುದಿಲ್ಲ, ಅವರಿಗೆ ಅವರ ಬಗ್ಗೆ ಹೆಚ್ಚಿನ ಗೌರವವಿದೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಶಿ ನೀಡಿದ್ದಾರೆ.
ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಸೇನೆಯ ವಿರುದ್ಧದ ಆರೋಪದ ಮೇಲೆ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರಾಹುಲ್ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರ ಮತ್ತು ದೂರುದಾರರಿಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಪ್ರಸ್ತುತ ರಾಹುಲ್ ಗಾಂಧಿಗೆ ರಿಲೀಫ್ ನೀಡಿದೆ ಮತ್ತು ಕೆಳ ನ್ಯಾಯಾಲಯದಲ್ಲಿನ ಮಾನನಷ್ಟ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ ಮತ್ತು ವಿಚಾರಣೆಗೆ ಮೂರು ವಾರಗಳನ್ನು ನಿಗದಿಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




