ರಾಂಚಿಯ ವೈದ್ಯಕೀಯ ಕಾಲೇಜೊಂದರ ಲಿಫ್ಟ್ನಲ್ಲಿ ವೈದ್ಯೆಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ. ಜಾರ್ಖಂಡ್ನ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಆಂಕೋಲಜಿ ವಿಭಾಗದ ಕಿರಿಯ ವೈದ್ಯೆಯೊಬ್ಬರಿಗೆ ಕಿರುಕುಳ ನೀಡಲಾಗಿದೆ.
ಇತ್ತೀಚೆಗಷ್ಟೇ ಕೋಲ್ಕತ್ತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಈಗ ಮತ್ತೊಂದು ಕಿರುಕುಳದ ಸುದ್ದಿ ವರದಿಯಾಗಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಎಫ್‌ಐಆರ್ ದಾಖಲಾದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆ ಬಳಿಕ ವೈದ್ಯರು ಮುಷ್ಕರ ಘೋಷಿಸಿದರು, ಕಿರಿಯ ವೈದ್ಯರ ಸಂಘ (ಜೆಡಿಎ) ಮತ್ತು ರಿಮ್ಸ್ ಆಡಳಿತ ಮಂಡಳಿ ನಡುವೆ ಚರ್ಚೆಯ ನಂತರ, ಆಡಳಿತವು ವೈದ್ಯರಿಗೆ ಹೆಚ್ಚಿನ ಭದ್ರತೆಯ ಭರವಸೆ ನೀಡಿದ ನಂತರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು.
ಮತ್ತಷ್ಟು ಓದಿ: Viral Video: ಕಿರುಕುಳ ನೀಡಲು ಬಂದ ಪುಂಡರ ಕಾಲರ್ ಹಿಡಿದು ಒದ್ದ ಯುವತಿ
ಪ್ರತಿ ಲಿಫ್ಟ್‌ಗೆ ಲಿಫ್ಟ್ ಆಪರೇಟರ್‌ಗಳನ್ನು ನೇಮಿಸಲು ಮತ್ತು ಪ್ರತಿ ವಾರ್ಡ್‌ನಲ್ಲಿ ಸಶಸ್ತ್ರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ಅವರು ಒಪ್ಪಿಕೊಂಡರು.
ಆವರಣದಲ್ಲಿ ಕನಿಷ್ಠ 100 ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.ರಿಮ್ಸ್‌ನ ಕಿರಿಯ ವೈದ್ಯರು ಆರ್‌ಜಿ ಕರ್ ಘಟನೆಯನ್ನು ಪ್ರತಿಭಟಿಸಿದರು, ಉತ್ತಮ ಭದ್ರತೆ ಮತ್ತು ವೈದ್ಯಕೀಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ