Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಹಳಿ ಮೇಲೆ ಕಿಡಿಗೇಡಿಗಳು ಇರಿಸಿದ್ದ ಸಿಮೆಂಟ್ ಮೈಲಿಗಲ್ಲಿಗೆ ಗುದ್ದಿದ ರೈಲು

ರಾಜಸ್ಥಾನದ ಅಜ್ಮೀರ್​ನಿಂದ ಅಹಮದಾಬಾದ್​ಗೆ ಹೋಗುವ ಮಾರ್ಗದಲ್ಲಿ ರೈಲಿನ ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ. ರೈಲ್ವೆ ಹಳಿ ಮೇಲಿದ್ದ ಸಿಮೆಂಟ್​ ಮೈಲಿಗಲ್ಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು, ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್​ ತುಂಬಿದ ಬಾಟಲಿಗಳು, ಗನ್​ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿಸಲಾಗಿತ್ತು.

ಸಿಮೆಂಟ್ ಮೈಲಿಗಲ್ಲುImage Credit source: News 9
Follow us
ನಯನಾ ರಾಜೀವ್
|

Updated on: Sep 10, 2024 | 9:49 AM

ರಾಜಸ್ಥಾನದ ಅಜ್ಮೀರ್​ನಿಂದ ಅಹಮದಾಬಾದ್​ಗೆ ಹೋಗುವ ಮಾರ್ಗದಲ್ಲಿ ರೈಲಿನ ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ. ರೈಲ್ವೆ ಹಳಿ ಮೇಲಿದ್ದ ಸಿಮೆಂಟ್​ ಮೈಲಿಗಲ್ಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು, ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್​ ತುಂಬಿದ ಬಾಟಲಿಗಳು, ಗನ್​ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿಸಲಾಗಿತ್ತು.

ರೈಲು ಸಿಲಿಂಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಗೆ ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಯಿತು.

ಅಜ್ಮೀರ್‌ನ ಫುಲೇರಾದಿಂದ ಗುಜರಾತ್‌ನ ಅಹಮದಾಬಾದ್‌ಗೆ ರೈಲು ಪ್ರಯಾಣಿಸುತ್ತಿದ್ದಾಗ ಮಂಗಳವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ರೈಲು ಶಾರಧನ ನಿಲ್ದಾಣದ ಬಳಿ ಇದ್ದಾಗ ಇಂಜಿನ್ ಹಳಿಯಲ್ಲಿ ಯಾವುದೋ ವಸ್ತುವಿಗೆ ಡಿಕ್ಕಿ ಹೊಡೆದಿದೆ.

ಮತ್ತಷ್ಟು ಓದಿ: ಕಾಳಿಂದಿ ರೈಲು ಹಳಿ ತಪ್ಪಿಸಲು ಯತ್ನ, ಹಳಿಯಲ್ಲಿ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಪತ್ತೆ

ತಪಾಸಣೆ ನಡೆಸಿದಾಗ, ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಬ್ಲಾಕ್ ನಿರ್ಮಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಈ ಸಂಬಂಧ ಮಾಂಗಲ್ಯವಾಸ್ ಠಾಣೆಯಲ್ಲಿ ಆರ್‌ಪಿಎಫ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್

ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್

ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ

ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್