ಆಂಧ್ರದಲ್ಲಿ ಹಿಡಿತ ಸಾಧಿಸಲು BRS ಪ್ರಯತ್ನ, ಪ್ರಮುಖ ನಾಯಕರತ್ತ ಗಮನ ಹರಿಸಿದ ‘ಗುಲಾಬಿ ಬಾಸ್’ ಚಂದ್ರಶೇಖರ್ ರಾವ್

| Updated By: ಸಾಧು ಶ್ರೀನಾಥ್​

Updated on: Feb 03, 2023 | 2:23 PM

ಟಿಆರ್ ಎಸ್ ನಿಂದ ಬಿಆರ್​​ಎಸ್ ಗೆ ಬದಲಾದ ಬಳಿಕ ‘ಗುಲಾಬಿ ಬಾಸ್’ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಸದ್ಯಕ್ಕೆ ಆಂಧ್ರ ಪ್ರದೇಶದತ್ತ ವಿಶೇಷ ಗಮನ ಹರಿಸಿದ್ದಾರೆ. ಬಿಆರ್​​ಎಸ್ ಭವಿಷ್ಯ ಆಂಧ್ರದ ಮೇಲೆ ಅವಲಂಬಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಆಂಧ್ರದಲ್ಲಿ ಹಿಡಿತ ಸಾಧಿಸಲು BRS ಪ್ರಯತ್ನ, ಪ್ರಮುಖ ನಾಯಕರತ್ತ ಗಮನ ಹರಿಸಿದ ‘ಗುಲಾಬಿ ಬಾಸ್’ ಚಂದ್ರಶೇಖರ್ ರಾವ್
ಆಂಧ್ರದಲ್ಲಿ ಹಿಡಿತ ಸಾಧಿಸಲು BRS ಪ್ರಯತ್ನ, ಪ್ರಮುಖ ನಾಯಕರತ್ತ ಗಮನ ಹರಿಸಿದ ‘ಗುಲಾಬಿ ಬಾಸ್’ ಚಂದ್ರಶೇಖರ್ ರಾವ್
Follow us on

ಟಿಆರ್ ಎಸ್ ನಿಂದ ಬಿಆರ್​​ಎಸ್ ಗೆ (Bharat Rashtra Samithi -BRS) ಬದಲಾದ ಬಳಿಕ ‘ಗುಲಾಬಿ ಬಾಸ್’ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K ChandraShekar Rao) ಅವರು ಸದ್ಯಕ್ಕೆ ಆಂಧ್ರ ಪ್ರದೇಶದತ್ತ (Andhra Pradesh) ವಿಶೇಷ ಗಮನ ಹರಿಸಿದ್ದಾರೆ. ಬಿಆರ್​​ಎಸ್ ಭವಿಷ್ಯ ಆಂಧ್ರದ ಮೇಲೆ ಅವಲಂಬಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಬಿಆರ್‌ಎಸ್ ನಿರ್ದಿಷ್ಟ ರಾಜಕೀಯ ವ್ಯೂಹಾತ್ಮಕ ಕಾರ್ಯತಂತ್ರದೊಂದಿಗೆ ಮುನ್ನಡೆದಿದೆ. ಆಂಧ್ರ ಪ್ರದೇಶದ ಮೇಲೆ ವಿಶೇಷ ಗಮನ ಹರಿಸಲಾಗಿದೆಯಂತೆ.

ಈಗಾಗಲೇ ತೋಟ ಚಂದ್ರಶೇಖರ್ ಗೆ ಎಪಿ ಜವಾಬ್ದಾರಿ ಕೊಟ್ಟಿರುವ ಪಿಂಕ್ ಬಾಸ್.. ಭಾರೀ ವರ್ಚಸ್ಸಿನ ನಾಯಕರಿಗೆ ಗುಲಾಬಿ ಸ್ಕಾರ್ಫ್ ಹೊದಿಸಲು ರೆಡಿಯಾಗಿದ್ದಾರಂತೆ. ಈ ನಿಟ್ಟಿನಲ್ಲಿ ಕುತ್ಬುಳ್ಳಾಪುರ ಶಾಸಕ ವಿವೇಕಾನಂದ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಂಟಾ ಶ್ರೀನಿವಾಸ್ ಹಾಗೂ ಸಿಬಿಐ ಮಾಜಿ ಜೆಡಿ ಲಕ್ಷ್ಮೀನಾರಾಯಣ ಅವರನ್ನು ವಿವೇಕ್ ಭೇಟಿ ಮಾಡಿರುವುದು ರಾಜಕೀಯ ಕುತೂಹಲ ಕೆರಳಿಸಿದೆ. ಆ ನಾಯಕರು ಗುಲಾಬಿ ಸ್ಕಾರ್ಫ್ ಧರಿಸಲಿದ್ದಾರೆಯೇ? ಇನ್ನು ಎಪಿ ನಾಯಕರು, ಶಿಕ್ಷಣ ಸಂಸ್ಥೆಗಳ ನಿರ್ವಾಹಕರು, ಕಾರ್ಯಕರ್ತರು ಬಿಆರ್ ಎಸ್ ಸೇರಲಿದ್ದಾರೆಯೇ..? ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಇದು ಸಾಕಾರಗೊಳ್ಳಲಿದೆ ಎನ್ನುತ್ತಿವೆ.

ಆದರೆ ಗಂಟಾ ಶ್ರೀನಿವಾಸ್ ಬಿಆರ್ ಎಸ್ ಸೇರುವ ಯೋಚನೆ ಇಲ್ಲ ಎಂದಿದ್ದಾರೆ. ಇನ್ನು ಮಾಜಿ ಜೆಡಿ ಲಕ್ಷ್ಮೀನಾರಾಯಣ ಅವರು ಸೌಜನ್ಯಯುತ ಭೇಟಿ ಎನ್ನುತ್ತಾರೆ. ಆದಾಗ್ಯೂ ಇವರೊಂದಿಗೆ ವಿವೇಕಾನಂದಗೌಡ ಭೇಟಿಯಾಗಿರುವುದು ಎಪಿ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಯಾಕೆ ಭೇಟಿಯಾದರು ಎಂಬ ಚರ್ಚೆ ಶುರುವಾಗಿದೆ.

ತೆಲಂಗಾಣದ ಗಡಿ ಜಿಲ್ಲೆಗಳತ್ತ ಕೆಸಿಆರ್ ಮೊದಲ ಹೆಜ್ಜೆ ಇಟ್ಟಂತಿದೆ. ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಮಾಜಿ ಶಾಸಕರು ಹಾಗೂ ಪ್ರಸ್ತುತ ಆಡಳಿತಾರೂಢ ಪಕ್ಷದಿಂದ ದೂರವಿರುವ ನಾಯಕರನ್ನು ಪಕ್ಷಕ್ಕೆ ಆಹ್ವಾನಿಸಲಾಗುತ್ತಿದೆಯಂತೆ. ಮೊದಲು ಆಂಧ್ರಪ್ರದೇಶ ರಾಜ್ಯದತ್ತ ಗಮನ ಹರಿಸಲಾಗಿದೆ ಎಂದು ವರದಿಯಾಗಿದೆ. ಇದರ ಭಾಗವಾಗಿ ಪಕ್ಷದ ಮುಖಂಡರು ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಏಕೆಂದರೆ, ಆಂಧ್ರ ಪ್ರದೇಶ ತೆಲುಗು ರಾಜ್ಯವಾಗಿರುವುದರಿಂದ ಮತ್ತು ಹಳೆಯ ಸಂಪರ್ಕಗಳನ್ನು ಹೊಂದಿರುವುದರಿಂದ ಬಿಆರ್ ಎಸ್ ಪಕ್ಷದ ವಿಸ್ತರಣೆ ಮತ್ತು ಬಲವರ್ಧನೆ ಸುಲಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಪಿ ನಾಯಕರನ್ನು ಬಿಆರ್‌ಎಸ್‌ಗೆ ಸೇರಿಸಿಕೊಳ್ಳಲು ಸರ್ವಪ್ರಯತ್ನ ನಡೆಸಲಾಗುತ್ತಿದೆ. ಆಂಧ್ರಪ್ರದೇಶದ ಅತೃಪ್ತ ನಾಯಕರನ್ನು ಬಿಆರ್‌ಎಸ್‌ಗೆ ಆಹ್ವಾನಿಸಲಾಗಿದೆ. ಕೆಸಿಆರ್ ಎಪಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲು ಮತ್ತು ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಯೋಜಿಸುತ್ತಿದ್ದಾರೆಂದು ತಿಳಿದುಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ