Kallakurichi Hooch Tragedy: ಕಲ್ಲಕುರಿಚಿಯಲ್ಲಿ ಸಾವಿನ ಸಂಖ್ಯೆ 55 ಕ್ಕೆ ಏರಿಕೆ, 100 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು,ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲು ಆದೇಶಿಸಿದ್ದಾರೆ. ಕಲ್ಲಕುರಿಚಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲು ಆದೇಶಿಸಿದ ಸಿಎಂ, ಜಿಲ್ಲೆಯ ಮದ್ಯಪಾನ ಮತ್ತು ನಿಷೇಧಿತ ವಿಭಾಗದ ಅಧಿಕಾರಿಗಳ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ವಿಲ್ಲುಪುರಂ ಜೂನ್ 22: ತಮಿಳುನಾಡಿನ (Tamil nadu) ಕಲ್ಲಕುರಿಚಿಯಲ್ಲಿ (Kallakurichi)ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ (Illicit Liquor tragedy) ಸಾವಿಗೀಡಾದವರ ಸಂಖ್ಯೆ 55 ಕ್ಕೆ ಏರಿದೆ, ಆದರೆ ಅಕ್ರಮ ಮದ್ಯ ಸೇವಿಸಿದ 100 ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಕಲ್ಲಕುರಿಚಿಯ ಸುಮಾರು 200 ಜನರನ್ನು ಬುಧವಾರ ಕಳ್ಳಭಟ್ಟಿ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ವಶಪಡಿಸಿಕೊಂಡ 200 ಲೀಟರ್ ಕಳ್ಳಭಟ್ಟಿಯಲ್ಲಿ ಮಾರಣಾಂತಿಕ ಮೆಥನಾಲ್ ಇದೆ ಎಂದು ಪರೀಕ್ಷೆಗಳಿಂದ ಬಹಿರಂಗವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು,ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲು ಆದೇಶಿಸಿದ್ದಾರೆ. ಕಲ್ಲಕುರಿಚಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲು ಆದೇಶಿಸಿದ ಸಿಎಂ, ಜಿಲ್ಲೆಯ ಮದ್ಯಪಾನ ಮತ್ತು ನಿಷೇಧಿತ ವಿಭಾಗದ ಅಧಿಕಾರಿಗಳ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ.
ಏತನ್ಮಧ್ಯೆ, ಕಲ್ಲಕುರಿಚಿ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ನಿಷೇಧ ಮತ್ತು ಜಾರಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಕುಮಾರ್, ಐಪಿಎಸ್ ಅವರನ್ನು ವಜಾಗೊಳಿಸಲಾಗಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಜಾರಿ ಎಡಿಜಿಪಿ ಎ.ಅರುಣ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮೃತರ ಕುಟುಂಬವನ್ನು ಭೇಟಿ ಮಾಡಿದ್ದು ಮೃತರ ಕುಟುಂಬಕ್ಕೆ ಬಿಜೆಪಿ ಪರವಾಗಿ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
ಪುದುಚೇರಿಯಿಂದ ತರಲಾಗಿತ್ತು ಮೆಥನಾಲ್
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿವಿಧ ಸದಸ್ಯರು ಮಂಡಿಸಿದ ವಿಶೇಷ ಕರೆಗೆ ನೀಡಿದ ಉತ್ತರದಲ್ಲಿ ಕಲ್ಲಕುರಿಚಿ ಮದ್ಯ ದುರಂತದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯಲ್ಲಿ ಪುನರುಚ್ಚರಿಸಿದ್ದಾರೆ. ಅದೇ ವೇಳೆ ಈ ದುರಂತದಿಂದ ರಾಜಕೀಯ ಲಾಭ ಪಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸಬೇಡಿ ಎಂದು ಒತ್ತಾಯಿಸಿದರು. ಕಲ್ಲಕುರಿಚಿಯಲ್ಲಿ 48 ಮಂದಿಯನ್ನು ಬಲಿತೆಗೆದುಕೊಂಡ ಅಕ್ರಮ ಮದ್ಯದಲ್ಲಿ ಬೆರೆಸಿದ್ದ ಮೆಥೆನಾಲ್ ಅನ್ನು ಪುದುಚೇರಿಯಿಂದ ತರಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ:Kallakurichi Hooch Tragedy: ಕಳ್ಳಭಟ್ಟಿ ದುರಂತ; ಸ್ಟಾಲಿನ್ ಸರ್ಕಾರದ ವಿರುದ್ಧ ದಳಪತಿ ವಿಜಯ್ ಟೀಕೆ
ವಿಧಾನಸಭೆಯಿಂದ ಎಐಎಡಿಎಂಕೆ ಶಾಸಕರು ಹೊರಗೆ
ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದ ವೇಳೆ ಸದನದಲ್ಲಿ ಗದ್ದಲ ಎಬ್ಬಿಸಿದ್ದಕ್ಕಾಗಿ ಎಐಎಡಿಎಂಕೆ ಶಾಸಕರನ್ನು ತಮಿಳುನಾಡು ವಿಧಾನಸಭೆಯಿಂದ ಹೊರಹಾಕಲಾಯಿತು. ಪ್ರಶ್ನೋತ್ತರ ವೇಳೆಯಲ್ಲಿ ಕಪ್ಪು ಅಂಗಿ ಧರಿಸಿದ್ದ ಪ್ರತಿಪಕ್ಷ ಶಾಸಕರು ಕಲ್ಲಕುರಿಚಿ ದುರಂತದ ಕುರಿತು ಚರ್ಚೆಗೆ ಒತ್ತಾಯಿಸಿದರು, ಅದನ್ನು ಸ್ಪೀಕರ್ ತಿರಸ್ಕರಿಸಿದರು, ನಂತರ ಸಿಎಂ ಈ ವಿಷಯದ ಬಗ್ಗೆ ವಿವರವಾದ ಉತ್ತರವನ್ನು ನೀಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ