Kapil Sibal ಕಾಂಗ್ರೆಸ್ ಪಕ್ಷ ತೊರೆದ ಕಪಿಲ್ ಸಿಬಲ್, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ
ಸಂಸತ್ನಲ್ಲಿ ಸ್ವತಂತ್ರ ದನಿಯ ಅಗತ್ಯವಿದೆ. ಸ್ವತಂತ್ರವಾಗಿ ದನಿಯೆತ್ತಿದರೆ ಮಾತ್ರ ಇದು ರಾಜಕೀಯ ಪಕ್ಷದ್ದು ಅಲ್ಲ ಎಂದು ಜನರು ನಂಬುತ್ತಾರೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ಸಿಬಲ್ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ (Kapil Sibal) ಉತ್ತರ ಪ್ರದೇಶದಿಂದ (Uttar Pradesh) ರಾಜ್ಯಸಭೆಗೆ ಸಮಾಜವಾದಿ ಪಕ್ಷದ (Samajwadi Party) ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಕಪಿಲ್ ಸಿಬಲ್ ‘ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಂಸತ್ನಲ್ಲಿ ಸ್ವತಂತ್ರ ದನಿಯ ಅಗತ್ಯವಿದೆ. ಸ್ವತಂತ್ರವಾಗಿ ದನಿಯೆತ್ತಿದರೆ ಮಾತ್ರ ಇದು ರಾಜಕೀಯ ಪಕ್ಷದ್ದು ಅಲ್ಲ ಎಂದು ಜನರು ನಂಬುತ್ತಾರೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ಸಿಬಲ್ ಹೇಳಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಸಿಬಲ್ ಕಾಂಗ್ರೆಸ್ ಪಕ್ಷದ ನಾಯಕತ್ವ ಮತ್ತು ಸಂಘಟನೆಯನ್ನು ಟೀಕಿಸಿದ್ದ ಬಂಡಾಯಗಾರರ ಗುಂಪಾದ ಜಿ-23ಯ ಸದಸ್ಯರಾಗಿದ್ದಾರೆ. ಇತ್ತೀಚಿನ ವಾರಗಳಲ್ಲಿ ಗಾಂಧಿ ನೇತೃತ್ವದ ಬಗ್ಗೆ ಕಪಿಲ್ ಟೀಕಿಸಿದ್ದರು. ಇತ್ತೀಚೆಗೆ ಅವರು ಲಖನೌದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಸುಪ್ರೀಂಕೋರ್ಟ್ ನಲ್ಲಿ ಸಮಾಜವಾದಿ ಪಕ್ಷದ ಆಜಂ ಖಾನ್ ಅವರ ಪ್ರಕರಣವನ್ನೂ ಇದೇ ಕಪಿಲ್ ಸಿಬಲ್ ವಾದಿಸಿದ್ದರು. 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆಜಂ ಖಾನ್ ಗೆ ಕೆಲವು ದಿನಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ 11 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
#WATCH | Uttar Pradesh: Congress leader Kapil Sibal files nomination for Rajya Sabha election, in the presence of Samajwadi Party (SP) chief Akhilesh Yadav, in Lucknow. pic.twitter.com/8yRDoSwE3g
ಇದನ್ನೂ ಓದಿ— ANI UP/Uttarakhand (@ANINewsUP) May 25, 2022
ಹಿರಿಯ ವಕೀಲರಾಗಿ ಸಿಬಲ್ ಅವರ ಯಾದವ್ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದಾರೆ. ಅಖಿಲೇಶ್ ಯಾದವ್ ಅವರಿಗೆ ಪಕ್ಷದ ಚಿಹ್ನೆಯಾಗಿ ಸೈಕಲ್ ಚಿಹ್ನೆ ಬೇಕು ಎಂದು 2017 ಜನವರಿಯಲ್ಲಿ ಸಿಬಲ್ ವಾದಿಸಿದ್ದರು. ಇದರ ಫಲವಾಗಿ ಚುನಾವಣಾ ಆಯೋಗ ಅಖಿಲೇಶ್ ಗೆ ಸೈಕಲ್ ಚಿಹ್ನೆ ನೀಡಿತ್ತು.
ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಕಪಿಲ್ ಸಿಬಲ್ ಈಗ ತಾನೇ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಖ್ಯಾತ ವಕೀಲರು ಮತ್ತು ರಾಜಕೀಯ ಧುರೀಣ. ಅವರು ಪ್ರಧಾನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಮುಂದಿಡುತ್ತಿದ್ದರು. ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವರು ಇದನ್ನೆಲ್ಲ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:04 pm, Wed, 25 May 22