ಕರ್ನಾಟಕ ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್​ ಠಾಕ್ರೆ

|

Updated on: Jun 18, 2023 | 8:41 PM

ರಾಜ್ಯದಲ್ಲಿ ಬಿಜೆಪಿ ಸೋತಿರುವುದಕ್ಕೆ ಕರ್ನಾಟಕದ ಜನತೆಗೆ ವಿಶೇಷ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕರ್ನಾಟಕ ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್​ ಠಾಕ್ರೆ
ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ
Follow us on

ಮುಂಬೈ: ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಬಾಹುಬಲಿಗೆ ಬಗ್ಗಲಿಲ್ಲ ಮತ್ತು ಅಂಜಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray)
ಕಿಡಿಕಾರಿದ್ದಾರೆ. ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋತಿರುವುದಕ್ಕೆ ಕರ್ನಾಟಕದ ಜನತೆಗೆ ವಿಶೇಷ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಕರ್ನಾಟಕದ ಮತದಾರರನ್ನು ಹಾಡಿ ಹೊಗಳಿದ ಉದ್ಧವ್ ಠಾಕ್ರೆ 

ಮಹಾ ಶಕ್ತಿಯ ಜಂಬ ಎಂಬ ಬಲೂನ್‌ನನ್ನು ಒಡೆದು ಹಾಕಿದ್ದೀರಿ ಎಂದು ಕರ್ನಾಟಕದ ಮತದಾರರನ್ನು ಹಾಡಿ ಹೊಗಳಿದ್ದಾರೆ. ಬಜರಂಗಬಲಿಗೆ ವಂದಿಸುತ್ತೇನೆ, ಗದೆ ಅವರ ತಲೆಯ ಮೇಲೆ ಹಾಕಿದ್ದೀರಿ. ಬಜರಂಗಬಲಿ ಗದೆ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಬಿದ್ದಿದೆ. ಅದೇ ಶಕ್ತಿ ನಮ್ಮ ಮಹಾರಾಷ್ಟ್ರದ ಜನತೆಗೆ ಬರಬೇಕೆಂದು ಬಜರಂಗಬಲಿ ಬಳಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆ ಪಾಲಾದ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

ಫಡ್ನವೀಸ್ ಅವರ ಸ್ಥಿತಿ ಕರುಣಾಜನಕವಾಗಿದೆ ಎಂದ ಮಹಾರಾಷ್ಟ್ರ ಮಾಜಿ ಸಿಎಂ 

ಕರ್ನಾಟಕದ ಬಗ್ಗೆ ನನ್ನ ಅಭಿಪ್ರಾಯವೇನು ಎಂದು ದೇವೇಂದ್ರ ಫಡ್ನವೀಸ್​ರನ್ನು ಕೇಳುತ್ತಿದ್ದರು. ದೇವೇಂದ್ರ ಫಡ್ನವೀಸ್ ಅವರ ಸ್ಥಿತಿ ತುಂಬಾ ಕರುಣಾಜನಕವಾಗಿದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಫಡ್ನವೀಸ್ ಅವರ ಪರಿಸ್ಥಿತಿ ಈಗ ಹೇಗಿದೆಯೆಂದರೆ ಅವರಿಗೆ ಏನನ್ನೂ ಹೇಳಲಾಗುತ್ತಿಲ್ಲ ಮತ್ತು ಏನನ್ನೂ ಸಹಿಸಲಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Uttar Pradesh: ರೈಲು ಹಾದು ಹೋಗುತ್ತಿದ್ದಂತೆ ಕರಗಿದ ರೈಲು ಹಳಿಗಳು, ತಪ್ಪಿದ ಅನಾಹುತ

ಪ್ರಧಾನಿ ಮೋದಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ 

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿಶ್ವದ ಪ್ರಬಲ ನಾಯಕರು ಎಂದು ಹೇಳುತ್ತಾರೆ. ಆದರೆ ಮಣಿಪುರ ಏಕೆ ಇನ್ನೂ ಹೊತ್ತಿ ಉರಿಯುತ್ತಿದೆ? ಮಣಿಪುರದ ಬೆಂಕಿಯನ್ನು ನಂದಿಸಲು ನೀವು ಏನು ಮಾಡುತ್ತಿದ್ದೀರಿ? ಮಣಿಪುರದ ಪರಿಸ್ಥಿತಿ ಬಗ್ಗೆ ನೀವು ಏಕೆ ಮಾತನಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.