Delhi Double Murder: ದೆಹಲಿಯಲ್ಲಿ ಡಬಲ್ ಮರ್ಡರ್ ಪ್ರಕರಣ: ಮೂವರು ಅರೆಸ್ಟ್
ಸಾಲದ ವಿಚಾರದಲ್ಲಿ ಭಾನುವಾರ ಮುಂಜಾನೆ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನವ ದೆಹಲಿ: ಕೇವಲ 10,000 ರೂಪಾಯಿ ಸಾಲದ ವಿಚಾರದಲ್ಲಿ ಭಾನುವಾರ ಮುಂಜಾನೆ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಹತ್ಯೆ (Shot dead) ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ. ಅರ್ಜುನ್, ಮೈಕಲ್ ಮತ್ತು ದೇವ್ ಬಂಧಿತ ಆರೋಪಿಗಳು. ನೈಋತ್ಯ ದೆಹಲಿಯ ಆರ್‌ಕೆ ಪುರಂನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಆಗಮಿಸಿದ 15 ರಿಂದ 20 ಶಸ್ತ್ರಸಜ್ಜಿತ ವ್ಯಕ್ತಿಗಳು ಹತ್ಯೆಗೂ ಮುನ್ನ ಬಾಗಿಲು ಬಡಿದು ಅದರ ಮೇಲೆ ಕಲ್ಲುಗಳನ್ನು ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಲಿತ್ ಸಹೋದರಿಯರಾದ 30 ವರ್ಷದ ಪಿಂಕಿ ಮತ್ತು 29 ವರ್ಷದ ಜ್ಯೋತಿ ಅವರ ಎದೆ ಮತ್ತು ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಲಲಿತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ದೇವ್ ಎಂಬಾತನ ಜೊತೆ ಹಣದ ವಿಚಾರದಲ್ಲಿ ಜಗಳವಾಗಿತ್ತು ಎಂದು ಲಲಿತ್ ಅವರು ಪೊಲೀಸರಿಗೆ ತಿಳಿಸಿದ್ದಾರೆ. ನೈಋತ್ಯ ದೆಹಲಿ ಉಪ ಪೊಲೀಸ್ ಆಯುಕ್ತ ಮನೋಜ್ ಸಿ ಪ್ರಕಾರ, ಅಂಬೇಡ್ಕರ್ ಬಸ್ತಿಯಲ್ಲಿ ಕೆಲವರು ಇಬ್ಬರು ಮಹಿಳೆಯರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬೆಳಿಗ್ಗೆ 4.40 ಕ್ಕೆ ಆರ್‌ಕೆ ಪುರಂ ಪೊಲೀಸ್ ಠಾಣೆಗೆ ಕರೆ ಬಂದಿದೆ. ಪ್ರಕರಣ ಸಂಬಂಧ ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Belagavi News: ಪತ್ನಿ ಜತೆ ಅನೈತಿಕ ಸಂಬಂಧ ಆರೋಪ, ಯುವಕನ ಹತ್ಯೆಗೈದ ಪತಿ
ರಾತ್ರಿ ವೇಳೆ ಯಾರೋ ಒಬ್ಬರಿಂದ ಹಣ ತೆಗೆದುಕೊಳ್ಳಬೇಕಿತ್ತು ಎಂದು ಮೃತ ಮಹಿಳೆಯರ ಸಹೋದರ ಲಲಿತ್ ಹೇಳಿದ್ದಾರೆ. ಕೆಲವರು ಲಲಿತ್ ಚಿಕ್ಕಮ್ಮನ ಮನೆಗೆ ಆಗಮಿಸಿ ಗಲಾಟೆ ಆರಂಭಿಸಿದ್ದಾರೆ. ನಂತರ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಲಲಿತ್ಗೆ ಕರೆ ಮಾಡಿ ತಿಳಿಸಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳ ತಂಡದ ಸಂಖ್ಯೆಯಲ್ಲಿ ಹೆಚ್ಚಾಯಿತು. ನೇರವಾಗಿ ಲಲಿತ್ ಮನೆಗೆ ಬಂದು ಲಲಿತ್ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಸಹೋದರಿಯರು ಮಧ್ಯಪ್ರವೇಶಿಸಿದಾಗ ಒಂದು ಗುಂಡು ಲಲಿತಳ ದೇಹಕ್ಕೆ ತಗುಲಿದೆ. ಆದರೆ ಲಲಿತ್ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಲಲಿತ್ ಸಹೋದರಿಯರಿಬ್ಬರಿಗೂ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ