ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆ ಪಾಲಾದ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

ಭಾರತ ಸರ್ಕಾರ ನೀಡುವ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ ಪ್ರಕಟವಾಗಿದ್ದು, ಈ ಭಾರಿ ಉತ್ತರಪ್ರದೇಶದ ಗೋರಖ್‌ಪುರನ ಗೀತಾ ಪ್ರೆಸ್‌ ಸಂಸ್ಥೆಗೆ ಪ್ರಶಸ್ತಿ ದೊರೆತಿದೆ. ಅಹಿಂಸಾತ್ಮಕ ಮತ್ತು ಗಾಂಧಿವಾದಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆ ಪಾಲಾದ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ
ಗೀತಾ ಪ್ರೆಸ್‌ ಸಂಸ್ಥೆ (ಸಂಗ್ರಹ ಚಿತ್ರ)Image Credit source: economictimes.indiatimes.com
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 18, 2023 | 5:24 PM

2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ (Gandhi Peace Prize for the Year 2021) ಭಾನುವಾರ ಪ್ರಕಟವಾಗಿದೆ. ಉತ್ತರಪ್ರದೇಶದ ಗೋರಖ್‌ಪುರನ ಗೀತಾ ಪ್ರೆಸ್‌ ಸಂಸ್ಥೆಗೆ ಈ ಭಾರಿ ಪ್ರಶಸ್ತಿ ದೊರೆತಿದೆ. ಈ ಕುರಿತಾಗಿ ಕೇಂದ್ರ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತೀರ್ಪುಗಾರ ತಂಡ 2023 ರ ಜೂನ್ 18 ರಂದು ಅಹಿಂಸಾತ್ಮಕ ಮತ್ತು ಗಾಂಧಿವಾದಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗೋರಖ್ಪುರದ ಗೀತಾ ಪ್ರೆಸ್ ಅನ್ನು 2021 ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ.

ಗಾಂಧಿ ಶಾಂತಿ ಪ್ರಶಸ್ತಿಯೂ 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಮತ್ತು ಸುಂದರ ಸಾಂಪ್ರದಾಯಿಕ ಕರಕುಶಲ ವಸ್ತುವನ್ನು ಒಳಗೊಂಡಿದೆ.

ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆ

1923 ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಥೆಯು ಆದಾಯ ಗಳಿಕೆಗಾಗಿ ಎಂದಿಗೂ ಜಾಹೀರಾತನ್ನು ಅವಲಂಬಿಸಿಲ್ಲ. ಗೀತಾ ಪ್ರೆಸ್​ ಅದರ ಅಂಗಸಂಸ್ಥೆಗಳೊಂದಿಗೆ, ಸುಧಾರಿತ ಜೀವನ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿದೆ.

ಇದನ್ನೂ ಓದಿ: Uttar Pradesh: ಅತಿಯಾದ ತಾಪಮಾನದಿಂದಾಗಿ 72 ಗಂಟೆಗಳಲ್ಲಿ 54 ಮಂದಿ ಸಾವು, 400 ಮಂದಿ ಅಸ್ವಸ್ಥ

ಗೀತಾ ಪ್ರೆಸ್​​ನ ಕೊಡುಗೆ ಸ್ಮರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧೀಜಿಯವರ ಆದರ್ಶಗಳನ್ನು ಉತ್ತೇಜಿಸುವಲ್ಲಿ ಗೀತಾ ಪ್ರೆಸ್​​ನ ಕೊಡುಗೆಯನ್ನು ಸ್ಮರಿಸಿದ್ದಾರೆ. ಗೀತಾ ಪ್ರೆಸ್​​ ಸ್ಥಾಪನೆಯಾಗಿ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡುತ್ತಿರುವುದು, ಸಮುದಾಯ ಸೇವೆಯಲ್ಲಿ ಸಂಸ್ಥೆಯು ಮಾಡಿದ ಕಾರ್ಯಕ್ಕೆ ಸಂದ ಮನ್ನಣೆಯಾಗಿದೆ ಎಂದರು.

ಇದನ್ನೂ ಓದಿ: Mann Ki Baat: ಸ್ಪಷ್ಟ ಉದ್ದೇಶ, ಪ್ರಾಮಾಣಿಕ ಪ್ರಯತ್ನವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು: ಪ್ರಧಾನಿ ಮೋದಿ

ಭಾರತ ಸರ್ಕಾರವು 1995ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿಯನ್ನು ಆರಂಭಿಸಿದೆ. ಮಹಾತ್ಮ ಗಾಂಧಿಯವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಸಾಧನೆ ಆಧಾರದ ಮೇಲೆ ಎಲ್ಲರಿಗೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇತ್ತೀಚಿನ ಕಬೂಸ್ ಬಿನ್ ಸೈದ್ (2019) ಮತ್ತು ಬಾಂಗ್ಲಾದೇಶದ ಶೇಖ್ ಮುಜಿಬುರ್ ರೆಹಮಾನ್​ (2020) ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.