ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ತಮಿಳುನಾಡಿನ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ
ತಮಿಳುನಾಡಿನಲ್ಲಿ ಗಡ್ಡವನ್ನು ಶೇವ್ ಮಾಡಿಲ್ಲ ಎಂಬ ಕಾರಣದಿಂದ ಕಾಶ್ಮೀರಿ ವೈದ್ಯನಿಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ನಿರಾಕರಿಸಲಾಗಿದೆ. ವಿದ್ಯಾರ್ಥಿ ಸಂಘವು ಸಿಎಂ ಸ್ಟಾಲಿನ್ ಮಧ್ಯಪ್ರವೇಶ ಮಾಡಬೇಕೆಂದು ಕೋರಿದೆ. ಡಾ. ಜುಬೈರ್ ಅವರು NEET-SS ಕೌನ್ಸೆಲಿಂಗ್ ಮೂಲಕ ಡಾ. ಎನ್ಬಿ (ನೆಫ್ರಾಲಜಿ) ಸೀಟು ಪಡೆದಿದ್ದರು. ಆದರೆ, ತಮಿಳುನಾಡಿನ ಕೊಯಮತ್ತೂರಿನ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ (KMCH)ಗೆ ದಾಖಲಾತಿಗೆ ಬಂದಾಗ ಗಡ್ಡ ಬಿಡುವುದನ್ನು ನಿಷೇಧಿಸುವ ನೀತಿಗೆ ಸಹಿ ಹಾಕುವಂತೆ ಕೇಳಲಾಯಿತು.

ಕೊಯಮತ್ತೂರು, ಜೂನ್ 27: ನೆಫ್ರಾಲಜಿ ಸ್ಪೆಷಲೈಸೇಷನ್ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ ಕೊವಾಯ್ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ (KMCH) ನಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಅನಿರೀಕ್ಷಿತ ಆಘಾತ ಎದುರಾಯಿತು. ತಮ್ಮ ಮೆಡಿಕಲ್ ಕಾಲೇಜಿನ ಡ್ರೆಸ್ ಕೋಡ್ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಲೇಜು ಅಧಿಕಾರಿಗಳು ಆ ವೈದ್ಯ ಗಡ್ಡ ಬೋಳಿಸಿಕೊಳ್ಳದ ಹೊರತು ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಹ್ಮದ್ ಅವರು ಗಡ್ಡ ಬೋಳಿಸುವೆನೆಂದು ಭರವಸೆಯನ್ನು ನೀಡಿದರೂ ತಮಿಳುನಾಡಿನ ಆಸ್ಪತ್ರೆ ಆಡಳಿತ ಸೀಟು ನೀಡಲು ನಿರಾಕರಿಸಿತು. ಅವರ 2 ಲಕ್ಷ ರೂ. ಅಡ್ಮಿಷನ್ ಡೆಪಾಸಿಟ್ ಅನ್ನು ಸಹ ತಡೆಹಿಡಿಯಿತು.
ಈ ಘಟನೆಯು ಧಾರ್ಮಿಕ ತಾರತಮ್ಯದ ಆರೋಪಗಳನ್ನು ಹುಟ್ಟುಹಾಕಿದೆ. ಏಕೆಂದರೆ ಗಡ್ಡವು ಅನೇಕ ಮುಸ್ಲಿಂ ಪುರುಷರಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಇದೀಗ ಕಾಶ್ಮೀರದ ವಿದ್ಯಾರ್ಥಿ ಸಂಘವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮನವಿ ಸಲ್ಲಿಸಿದ್ದು, ಕಾಲೇಜಿನ ಕ್ರಮಗಳು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ
ತಮ್ಮ ಪತ್ರದಲ್ಲಿ ವಿದ್ಯಾರ್ಥಿ ಸಂಘವು, ಶಿಕ್ಷಣ ಸಂಸ್ಥೆಗಳು ಮೂಲಭೂತ ಹಕ್ಕುಗಳೊಂದಿಗೆ ಸಂಘರ್ಷಿಸುವ ಡ್ರೆಸ್ ಕೋಡ್‌ಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ. “ಈ ನಿರಾಕರಣೆ ಧಾರ್ಮಿಕ ಪೂರ್ವಾಗ್ರಹದಿಂದ ಉಂಟಾಗಿದ್ದು, ಅದು ಅಪಾಯಕಾರಿಯಾಗಿದೆ” ಎಂದು ಒಕ್ಕೂಟದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಮೂರನೇ ಸುತ್ತಿನ NEET ಕೌನ್ಸೆಲಿಂಗ್ ಸಮೀಪಿಸುತ್ತಿರುವುದರಿಂದ ಅಹ್ಮದ್ ಅವರು ತನ್ನ ಧಾರ್ಮಿಕ ಗುರುತನ್ನು ಗೌರವಿಸಿ ಪ್ರವೇಶ ನೀಡಬೇಕು ಅಥವಾ ತಾನು ಡೆಪಾಸಿಟ್ ಮಾಡಿದ ಹಣದ ಪೂರ್ಣ ಮರುಪಾವತಿಯನ್ನು ಮಾಡಬೇಕೆಂದು ಕೋರಿದ್ದಾರೆ. KMCH ಅಧಿಕಾರಿಗಳು ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




