ಪ್ರಧಾನಿ ಮೋದಿ ಭೇಟಿಗಾಗಿ 900 ಕಿಮೀ ಕಾಲ್ನಡಿಗೆ ಸಂಚಾರ ಶುರು ಮಾಡಿದ ಯುವಕ; ಮೋದಿ ಸಿಕ್ಕರೆ ಅದೊಂದು ವಿಷಯ ಹೇಳಬೇಕಂತೆ !
ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35ಎ ಯನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಫಹೀಮ್ ನಾಜೀರ್, ಅದೊಂದು ಅತ್ಯುತ್ತಮವಾದ ಕ್ರಮ ಎಂದಿದ್ದಾರೆ.
ಕಾಶ್ಮೀರದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲೆಂದು ಶ್ರೀನಗರ ಶಾಲ್ಮರ್ ಏರಿಯಾದಿಂದ ದೆಹಲಿಗೆ 900 ಕಿಮೀ ದೂರದ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದಾರೆ. ತಾನು ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡಿರುವ ಆತ, ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ತನ್ನ ಕನಸು ಎಂದು ಹೇಳಿಕೊಂಡಿದ್ದಾರೆ. ಈತನ ಹೆಸರು ಫಹೀಮ್ ನಾಜೀರ್. ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸದ ಇವರು ಸದ್ಯ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರು ಭಾಷಣ ಮಾಡುತ್ತಿದ್ದರು. ಆಗ ಸಮೀಪದ ಮಸೀದಿಯಲ್ಲಿ ಆಜಾನ್ ಶುರುವಾಯಿತು.. ಮಸೀದಿಯಿಂದ ಆಜಾನ್ ಕೇಳಿಬರುತ್ತಿದ್ದಂತೆ ಪ್ರಧಾನಿ ಮೋದಿ ಭಾಷಣ ನಿಲ್ಲಿಸಿದ್ದರು. ಅದನ್ನು ನೋಡಿ ತುಂಬ ಖುಷಿಯಾಯಿತು. ಅಂದಿನಿಂದಲೂ ಮೋದಿಯವರೆಂದರೆ ನನಗೆ ಪಂಚಪ್ರಾಣ ಎನ್ನುತ್ತಾರೆ ಈ ಯುವಕ.
ಅಂದು ಪ್ರಧಾನಿ ನರೇಂದ್ರ ಮೋದಿಯವರ ನಡೆಯಿಂದ ತುಂಬ ಸ್ಫೂರ್ತಿ ಪಡೆದೆ. ಅಂದಿನಿಂದಲೂ ಅವರ ಅಭಿಮಾನಿಯಾದೆ. ಪ್ರಧಾನಿಯವರನ್ನು ಭೇಟಿಯಾಗಲೆಂದು ಎರಡು ಬಾರಿ ದೆಹಲಿಗೆ ಹೋದೆ. ಆದರೆ ಎರಡೂ ಬಾರಿಯೂ ಭೇಟಿ ಸಾಧ್ಯವಾಗದೆ ಬಂದೆ. ಇದೀಗ ಕಾಲ್ನಡಿಗೆಯಲ್ಲೇ ಹೊರಟಿದ್ದೇನೆ ಎಂದು ಇಂಡಿಯಾ ಟುಡೆ ಮಾಧ್ಯಮಕ್ಕೆ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಉಧಾಂಪುರದಲ್ಲಿ ಪ್ರತಿಕ್ರಿಯಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಬಂದಾಗಲೂ ಅವರನ್ನು ಭೇಟಿಯಾಗಲು ಪ್ರಯತ್ನ ಮಾಡಿದೆ. ಆದರೆ ಅವರ ಭದ್ರತೆ ಕಾರಣಕ್ಕೆ ನನಗೆ ಅವಕಾಶ ಸಿಗಲಿಲ್ಲ. ಆದರೆ ನಾನೀಗ ಪ್ರಧಾನಿಯವರನ್ನು ಭೇಟಿಯಾಗಲೇಬೇಕು ಎಂಬ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದೇನೆ. ಈ ಬಾರಿ ಖಂಡಿತ ನನಗೆ ಅವರು ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35ಎ ಯನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಫಹೀಮ್ ನಾಜೀರ್, ಅದೊಂದು ಅತ್ಯುತ್ತಮವಾದ ಕ್ರಮ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಮೇಲೆ ತುಂಬ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.
‘ಪ್ರಧಾನಿ ಮೋದಿಗೆ ಏನು ಹೇಳ್ತೀರಿ?’ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿಕ್ಕಿದರೆ, ಅವರ ಬಳಿ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯುವಕ, ಜಮ್ಮು-ಕಾಶ್ಮೀರದಲ್ಲಿ ಇರುವ ನಿರುದ್ಯೋಗ ಸಮಸ್ಯೆ ಬಗ್ಗೆ ಅವರಿಗೆ ತಿಳಿಸುತ್ತೇನೆ. ಹಾಗೇ, ಯುವಕರಿಗೆ ಹೆಚ್ಚೆಚ್ಚು ಅವಕಾಶ ಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು
ಯಶ್ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್; ‘ಕೆಜಿಎಫ್ 2’ ಚಿತ್ರಕ್ಕಾಗಿ ‘ಸಲಾರ್’ ರಿಲೀಸ್ ದಿನಾಂಕ ಬದಲು?