Kathua terror attack: ಕಥುವಾ ದಾಳಿ: ಉಗ್ರರಿಂದ ಪಾಕಿಸ್ತಾನ ನಿರ್ಮಿತ ವಸ್ತುಗಳು ಪತ್ತೆ
ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಯೋಧನನ್ನು ಕೊಂದ ಭಯೋತ್ಪಾದಕರ ಬಳಿ ಪಾಕಿಸ್ತಾನ ನಿರ್ಮಿತ ಔಷಧಗಳು ಮತ್ತು ನೋವು ನಿವಾರಕ ಚುಚ್ಚುಮದ್ದು, ಎ4 ಬ್ಯಾಟರಿ ಸೆಲ್‌ಗಳ ಎರಡು ಪ್ಯಾಕ್‌ಗಳು, ಆಂಟೆನಾ ಹೊಂದಿರುವ ಒಂದು ಹ್ಯಾಂಡ್‌ಸೆಟ್ ಮತ್ತು ಹ್ಯಾಂಡ್‌ಸೆಟ್‌ನಿಂದ ಎರಡು ತಂತಿಗಳು ನೇತಾಡುತ್ತಿದ್ದವು ಎಂದು ಹೇಳಲಾಗಿದೆ. ಕಥುವಾ ಪೊಲೀಸರ ಪ್ರಕಾರ, ಅವರ ಬಳಿ ಒಂದು M4 ಕಾರ್ಬೈನ್ ಮತ್ತು ಒಂದು AK-47 ರೈಫಲ್ ಇತ್ತು.
ದೆಹಲಿ ಜೂನ್ 12: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ (Kathua terror attack)ಹಳ್ಳಿಯೊಂದರ ಮೇಲೆ ದಾಳಿ ನಡೆಸಿದ ಇಬ್ಬರು ಹತ್ಯೆಗೀಡಾದ ಉಗ್ರರಿಂದ ಹಲವಾರು ಪಾಕಿಸ್ತಾನ (Pakistan) ನಿರ್ಮಿತ ವಸ್ತುಗಳು ಪತ್ತೆಯಾಗಿವೆ. ಭಯೋತ್ಪಾದಕರಿಂದ 30 ಸುತ್ತುಗಳ ಮೂರು ಮ್ಯಾಗಜೀನ್‌ಗಳು ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮೂರು ಲೈವ್ ಗ್ರೆನೇಡ್ ಕೂಡಾ ಪತ್ತೆಯಾಗಿದೆ. ಉಗ್ರರ ಬಳಿ ₹1 ಲಕ್ಷ ಮೌಲ್ಯದ ₹500 ನೋಟುಗಳಿದ್ದವು. ಅವರ ಬಳಿ ಪಾಕಿಸ್ತಾನದಲ್ಲಿ ತಯಾರಿಸಿದ ಚಾಕೊಲೇಟ್‌ಗಳು, ಒಣ ಕಡಲೆ ಮತ್ತು ಹಳಸಿದ ಚಪಾತಿಗಳಿದ್ದವು.
ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಯೋಧನನ್ನು ಕೊಂದ ಭಯೋತ್ಪಾದಕರ ಬಳಿ ಪಾಕಿಸ್ತಾನ ನಿರ್ಮಿತ ಔಷಧಗಳು ಮತ್ತು ನೋವು ನಿವಾರಕ ಚುಚ್ಚುಮದ್ದು, ಎ4 ಬ್ಯಾಟರಿ ಸೆಲ್‌ಗಳ ಎರಡು ಪ್ಯಾಕ್‌ಗಳು, ಆಂಟೆನಾ ಹೊಂದಿರುವ ಒಂದು ಹ್ಯಾಂಡ್‌ಸೆಟ್ ಮತ್ತು ಹ್ಯಾಂಡ್‌ಸೆಟ್‌ನಿಂದ ಎರಡು ತಂತಿಗಳು ನೇತಾಡುತ್ತಿದ್ದವು ಎಂದು ಹೇಳಲಾಗಿದೆ. ಕಥುವಾ ಪೊಲೀಸರ ಪ್ರಕಾರ, ಅವರ ಬಳಿ ಒಂದು M4 ಕಾರ್ಬೈನ್ ಮತ್ತು ಒಂದು AK-47 ರೈಫಲ್ ಇತ್ತು.
Pakistani terrorists in Kathua, J&K caught carrying Pakistani products. pic.twitter.com/qJH6SiGt9v
— Aditya Raj Kaul (@AdityaRajKaul) June 12, 2024
ಕಥುವಾದ ಹಿರಾ ನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು ಎಡಿಜಿಪಿ ಆನಂದ್ ಜೈನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
“ಈ ಪ್ರದೇಶದಲ್ಲಿ ಹೊಸ ನುಸುಳುಕೋರ ಗುಂಪು ಬಂದಿದ್ದು ಹೆಚ್ಚಿನ ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿರುವ ಸಾಧ್ಯತೆಗಳಿವೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ನಾವು ಪ್ರದೇಶವನ್ನು ಸುತ್ತುವರೆದಿದ್ದೇವೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಂತರ ತಿಳಿಸಲಾಗುವುದು” ಎಂದು ಜೈನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದು ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:Kuwait Building Fire: ಕುವೈತ್ ಬೆಂಕಿ ಅಪಘಾತದಲ್ಲಿ 40 ಭಾರತೀಯರ ಸಾವು; ದುಃಖಕರ ಸಂಗತಿ ಎಂದ ಪ್ರಧಾನಿ ಮೋದಿ
ಒಬ್ಬ ಭಯೋತ್ಪಾದಕ ಬುಧವಾರ ಮುಂಜಾನೆ ಗ್ರೆನೇಡ್ ಅನ್ನು ಲಾಬ್ ಮಾಡಲು ಪ್ರಯತ್ನಿಸಿದಾಗ ಸಾವಿಗೀಡಾಗಿದ್ದು, ಇನ್ನೊಬ್ಬನು ತಲೆಮರೆಸಿಕೊಂಡನು. ಬೆಳಗಿನ ಜಾವ 3 ಗಂಟೆಗೆ ಭದ್ರತಾ ಪಡೆಗಳತ್ತ ಇವರು ಗುಂಡಿನ ದಾಳಿ ನಡೆಸಿ ಪೊಲೀಸರ ಸರ್ಪಗಾವಲು ಮುರಿಯಲು ಯತ್ನಿಸಿದರು. ಈ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ವೇಳೆ ಓರ್ವ ನಾಗರಿಕ ಕೂಡ ಗಾಯಗೊಂಡಿದ್ದಾರೆ.
ಭಾನುವಾರದ ನಂತರ ಜಮ್ಮು ಪ್ರದೇಶದಲ್ಲಿ ನಡೆದ ಮೂರನೇ ಉಗ್ರರ ದಾಳಿ ಇದಾಗಿದೆ. ಕೇಂದ್ರಾಡಳಿತ ಪ್ರದೇಶದ ರಿಯಾಸಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ