Kedarnath Landslide: ಕೇದಾರನಾಥ ಮಾರ್ಗದಲ್ಲಿ ಭೂಕುಸಿತದಿಂದ 5 ಜನ ಸಾವು; ಸಿಎಂ ಧಾಮಿ ಸಂತಾಪ

|

Updated on: Sep 10, 2024 | 5:31 PM

ಗಾಯಗೊಂಡ ಯಾತ್ರಾರ್ಥಿಗಳನ್ನು ನೇಪಾಳದ ಜೀವಾಚ್ ತಿವಾರಿ, ಪಶ್ಚಿಮ ಬಂಗಾಳದ ಮನ್‌ಪ್ರೀತ್ ಸಿಂಗ್ ಮತ್ತು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಚಗನ್ ಲಾಲ್ ಎಂದು ಗುರುತಿಸಲಾಗಿದೆ. ಮುಂದುವರಿದ ಮಳೆ ಮತ್ತು ಮೂಡ ಕವಿದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.

Kedarnath Landslide: ಕೇದಾರನಾಥ ಮಾರ್ಗದಲ್ಲಿ ಭೂಕುಸಿತದಿಂದ 5 ಜನ ಸಾವು; ಸಿಎಂ ಧಾಮಿ ಸಂತಾಪ
ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
Follow us on

ನವದೆಹಲಿ: ಸೋಮವಾರ (ಸೆಪ್ಟೆಂಬರ್ 9) ರಾತ್ರಿ 7.25ರ ಸುಮಾರಿಗೆ ಕೇದಾರನಾಥ ಯಾತ್ರಿಕರ ಮೇಲೆ ಸಂಭವಿಸಿದ ಭಾರೀ ಭೂಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಇಂದು ಬೆಳಿಗ್ಗೆ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದು, ಸೋಮವಾರ ರಾತ್ರಿ ಒಂದು ಮೃತದೇಹ ಪತ್ತೆಯಾಗಿತ್ತು.

ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (NDRF) ಮತ್ತು SDRF ತಂಡಗಳನ್ನು ನಿಯೋಜಿಸಿತು. 2-3 ದಿನಗಳ ಹಿಂದಷ್ಟೇ 150 ಮೀಟರ್​ನಷ್ಟು ಹಾನಿಗೊಳಗಾದ ರಸ್ತೆಯನ್ನು ದುರಸ್ತಿಗೊಳಿಸಿದ ನಂತರ ಈ ಮಾರ್ಗದಲ್ಲಿ ಸಂಚಾರವನ್ನು ಪುನಃ ಸ್ಥಾಪಿಸಲಾಗಿದೆ. ಜುಲೈ 31ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಇದು ನೆಲಸಮವಾಗಿತ್ತು.


ಇದನ್ನೂ ಓದಿ: Gujarat Flood: ಗುಜರಾತ್​ನ ಪ್ರವಾಹದಲ್ಲಿ ಸಿಲುಕಿದ ಕಾರಿನ ಮೇಲೆ ಹತ್ತಿ ಕುಳಿತು ಹರಟೆ ಹೊಡೆದ ದಂಪತಿ

ಸೋಮವಾರ ಭೂಕುಸಿತದ ನಂತರ ರಾಜ್ಯ ವಿಪತ್ತು ನಿಧಿ ಮತ್ತು ರಾಷ್ಟ್ರೀಯ ವಿಪತ್ತು ನಿಧಿಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮಧ್ಯಪ್ರದೇಶದ ಧಾರ್‌ನ ಗೋಪಾಲ್ (50) ಎಂದು ಗುರುತಿಸಲಾದ ಯಾತ್ರಿಕನ ಮೃತದೇಹವನ್ನು ಹೊರತೆಗೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ